ದೆಹಲಿ ಶ್ರದ್ಧಾ ವಾಕರ್ ಕೇಸ್ ಕೇಳಿದ್ರೇನೇ ಬೆಚ್ಚಿಬೀಳುವ ಮಂದಿ ಇದ್ದಾರೆ. ಲಿವಿನ್ ಗೆಳತಿಯ ಕಥೆ ಮುಗಿಸಿ, ಕತ್ತರಿಸಿ ಹಾಕಿದ್ದವನು. ಬಾಡಿ ಪೀಸ್..ಪೀಸ್ ಮಾಡಿ ಎಲ್ಲೆಂದರಲ್ಲಿ ಎಸೆದಿದ್ದು ಇನ್ನೂ ಕಣ್ಣೆದುರಿಗಿದೆ. ಈ ಕೃತ್ಯ ಮಾಸುವ ಮುನ್ನವೇ ಬೆಂಗಳೂರಲ್ಲೂ ಇದೇ ರೀತಿಯ 2-3 ಘಟನೆ ನಡೆದಿತ್ತು. ಇಷ್ಟೆಲ್ಲಾ ಕೇಸ್ ನೆನಪಿರುವಾಗಲೇ ಇದೀಗ ಹೈದ್ರಾಬಾದ್‌ನಲ್ಲಿ ಕುಕ್ಕರ್ ಪ್ರಕರಣ ಸದ್ದು ಮಾಡ್ತಿದೆ. ಅದು ಮತ್ತೇನು ಅಲ್ಲ. ಕೌಟುಂಬಿಕ ಕಲಹಕ್ಕೆ ಹೆಂಡತಿಯ ಕಥೆ ಮುಗಿಸಿದ್ದಾನೆ ಈ ಪಾಪಿ ಪತಿರಾಯ. ಆಮೇಲೆ ಬಾಡಿ ಏನ್ ಮಾಡೋದು ಅಂತಾ ಗೊತ್ತಾಗದೇ. ಆವಾಗಲೇ ನೋಡಿ ಪಕ್ಕಾ ಫಿಲ್ಮ್ ಸ್ಟೈಲ್‌ನಲ್ಲಿ ಪ್ಲ್ಯಾನ್ ಮಾಡಿದ್ದಾನೆ. ಕುಕ್ಕರ್‌ನಲ್ಲಿ ಪತಿರಾಯನೇ ಪತ್ನಿಯ ಇಡೀ ದೇಹ ಬೇಯಿಸಿ, ಅದನ್ನ ನಂತರ ಕೆರೆಯಲ್ಲಿ ಎಸೆದಿದ್ದಾನೆ. ಹೀಗೆ ಭಯಾನಕ ಕೃತ ಎಸಗಿರೋದು ಬೇರ್ಯಾರು ಅಲ್ಲ ಮಾಜಿ ಸೈನಿಕ ಅಂದ್ರೆ ನಂಬಲೇ ಬೇಕು.
ಅಷ್ಟಕ್ಕೂ ಆಗಿದ್ದೇನಂದ್ರೆ.. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೀರ್‌ಪೇಟ್‌ನಲ್ಲಿ ವಾರದ ಹಿಂದೆ 35 ವರ್ಷದ ಮಾಧವಿ ನಾಪತ್ತೆಯಾಗಿದ್ದಳು. ಮಗಳು ಕಾಣಿಸದಿದ್ದಾಗೆ ಆಕೆ ಗಂಡ ಗುರುಮೂರ್ತಿಯನ್ನ ಮಹಿಳೆ ಕುಟುಂಬಸ್ಥರು ಪ್ರಶ್ನಿಸಿದ್ದಾರೆ. ತಡವರಿಸುತ್ತಲೇ ಉತ್ತರ ಕೊಟ್ಟವನ್ನ ಕಥೆ ಕಟ್ಟಿದ್ದಾನೆ. 2 ದಿನಗಳ ಹಿಂದೆ ಜಗಳವಾಡಿದ ಮನೆ ಬಿಟ್ಟು ಹೋಗಿದ್ದಾರೆ ಅಂತಾ ಹೇಳಿದ್ದಾನೆ. ಮಗಳ ಬಗ್ಗೆ ಎಲ್ಲಾ ಕಡೆ ವಿಚಾರಿಸಿದ ಪೋಷಕರಿಗೆ ಅಳಿಯನ ಮೇಲೆಯೇ ಅನುಮಾನ ಬಂದಿದೆ.. ತಕ್ಷಣವೇ ಠಾಣೆಗೆ ದೂರು ನೀಡಿದ್ದಾರೆ. ಆಗಲೇ ನೋಡಿ ಬೆಚ್ಚಿಬೀಳಿಸುವ ಪ್ರಕರಣ ಬಯಲಾಗಿದೆ.
ಮಹಿಳೆ ನಾಪತ್ತೆ ಕಂಪ್ಲೇಂಟ್ ಬರ್ತಿದ್ದಂತೆ ಖಾಕಿಪಡೆ ಅಲರ್ಟ್ ಆಗಿತ್ತು.. ಗುರುಮೂರ್ತಿಯನ್ನ ಕರೆದೊಯ್ದು ಪೊಲೀಸರ ಸೈಲ್‌ನಲ್ಲಿಯೇ ವಿಚಾರಣೆ ನಡೆಸಿದ್ದಾರೆ. ನಿನ್ನ ಹೆಂಡತಿ ಏನಾದ್ಲು ಅಂತಾ ಕೇಳಿದ್ದಾರೆ.. ಪೊಲೀಸರ ಟ್ರೀಟ್ಮೆಂಟ್‌ಗೆ ಭಯಬಿದ್ದ ಆರೋಪಿ, ಕೋಪದ ಭರದಲ್ಲಿ ಹೆಂಡ್ತಿ ಕಥೆ ಮುಗಿಸಿರೋದಾಗಿ ಹೇಳಿದ್ದಾನೆ. ಆದ್ರೆ ಮಹಿಳೆ ಅಂತ್ಯ ಹೇಗಾಯ್ತು ಅಂತಾ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ಸುಮಾರು 13 ವರ್ಷಗಳ ಹಿಂದೆ ಗುರುಮೂರ್ತಿ-ಮಾಧವಿ ವಿವಾಹವಾಗಿದ್ದರು. ಇಬ್ಬರೂ ಮಕ್ಕಳಿದ್ದು ಇತ್ತೀಚೆಗೆ ಅವರೆಲ್ಲಾ ಸಂಬಂಧಿಕರ ಮನೆಗೆ ಹೋಗಿದ್ದರಂತೆ.. ಈ ವೇಳೆ ಅಂದರೆ ಜನವರಿ 15 ರಂದು ಗಂಡ-ಹೆಂಡತಿ ಇಬ್ಬರೇ ಮನೆಯಲ್ಲಿದ್ದಾಗ ಕಿತ್ತಾಡಿಕೊಂಡಿದ್ದಾರೆ. ಜಗಳ ತಾರಕಕ್ಕೇರಿ ಪಾಪಿ ಪತಿ, ಮಹಿಳೆಯ ಕಥೆ ಮುಗಿಸಿದ್ದಾನೆ. ನಂತರ ಸಾಕ್ಷ್ಯವನ್ನು ನಾಶಪಡಿಸಲು ಆಕೆಯ ಬಾಡಿಯನ್ನ ಬಾತ್ರೂಮ್‌ನಲ್ಲಿ ಪೀಸ್.. ಪೀಸ್ ಮಾಡಿದ್ದಾನೆ. ನಂತರ ಎಲುಬುಗಳನ್ನ ಪುಡಿ-ಪುಡಿ ಮಾಡಿ ಕುಕ್ಕರ್‌ನಲ್ಲಿ ಕುದಿಸಿದ್ದಾನೆ. 3 ಡೇಸ್ ಮಾಂಸ ಮತ್ತು ಎಲುಬುಗಳನ್ನು ಬೇಯಿಸಿದ ನಂತರ, ಅವುಗಳನ್ನು ಕವರ್‌ನಲ್ಲಿ ಪ್ಯಾಕ್ ಮಾಡಿ ಹತ್ತಿರದ ಕೆರೆಗೆ ಎಸೆದು ಬಂದು ಮನೆಯಲ್ಲಿ ನಿದ್ದೆಗೆ ಜಾರಿದ್ದಾನೆ ಎನ್ನಲಾಗಿದೆ.
ಆರೋಪಿಯ ರಾಕ್ಷಿಸಿ ಕೃತ್ಯ ಕೇಳಿದ ಪೊಲೀಸರು ಇದೀಗ ಬಾಡಿ ಹಿಂದೆ ಬಿದ್ದಿದ್ದಾರೆ. ಮೀರ್‌ಪೇಟ್‌ನ ಕೆರೆಯಲ್ಲಿ ಮಹಿಳೆ ಬಾಡಿಯ ಅವಶೇಷಗಳನ್ನು ಪತ್ತೆಹಚ್ಚಲು ಹರಸಾಹಸವನ್ನೇ ಪಟ್ಟಿದ್ದಾರೆ. ಆದ್ರೂ ಯಾವ ಕುರುಹು ಸಿಕ್ಕಿಲ್ಲ. ಹೀಗಾಗಿ ಬಾಡಿ ಪತ್ತೆಗೆ ಕೆರೆಗೆ ಶ್ವಾನಪಡೆ ಇಳಿದಿದ್ದು, ತಲಾಶ್ ಮುಂದುವರೆದಿದೆ. ಇತ್ತೀಚಿನ ದಿನಗಳಲ್ಲಿ ಚಿತ್ರ-ವಿಚಿತ್ರ ಮರ್ಡರ್‌ಗಳು ನಡೆಯುತ್ತಿವೆ. ಆರೋಪಿಗಳ ಮನಸ್ಥಿತಿ ಕಂಡು, ನಾಗರೀಕ ಸಮಾಜವೇ ಒಂದು ಕ್ಷಣ ದಂಗ್ ಆಗಿರೋದಂತು ಸುಳ್ಳಲ್ಲ..