ಪಕ್ಷದ ವರಿಷ್ಠರ ಬಳಿ ರಾಮುಲು ಸಂಡೂರಲ್ಲಿ ಕೆಲಸ ಮಾಡಿಲ್ಲ ಅಂತ ಹೇಳೋದು ನನ್ನ ಜಯಮಾನವಲ್ಲ. ನನ್ನ ಪಕ್ಷಕ್ಕೆ ಸೇರಿಸಿಕೊಂಡಿದ್ದು ಹೈಕಮಾಂಡ್ ನಾಯಕರೇ ಹೊರೆತು ಯಾರೋ ಸಹಾಯದಿಂದ ಅಲ್ಲ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ಶ್ರೀರಾಮುಲು ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಜನಾರ್ದನ ರೆಡ್ಡಿ, ನನ್ನಿಂದ ಬೆಳದವರ ಸಹಾಯ ಪಡೆದು ನಾನು ಪಕ್ಷಕ್ಕೆ ಸೇರಿದವನು ಅಲ್ಲ. ಹೈಕಮಾಂಡ್ ನಾಯಕರು ರಾಮುಲು ಅವರನ್ನ ಏನ್ ಕೇಳಿದ್ದಾರೋ ನನಗೆ ಗೊತ್ತಿಲ್ಲ. ಯಾವ ಆಧಾರ ಮೇಲೆ ಯಾವ ಪ್ರಶ್ನೆ ಕೇಳಿದ್ರೋ ನನಗೆ ಗೊತ್ತಿಲ್ಲ. ಸದಾನಂದಗೌಡ ಅವರು ವರದಿ ತಯಾರಿಸಿದ್ದಾರೆ.. ನಾನು ಕೂಡ ಮಾಹಿತಿ ನೀಡಿದ್ದೇನೆ ಎಂದಿದ್ದಾರೆ.
ನಾನು ಯಾರೊಬ್ಬರ ಮೇಲೂ ಆರೋಪ ಮಾಡಿಲ್ಲ. ಬಂಗಾರು ಹನುಮಂತು ಬೆಳೆಯುತ್ತಿದ್ದಾರೆ ಅಂತ ಅವರಿಗೆ ಅನಿಸಿದೆಯೋ ಏನೋ ಗೊತ್ತಿಲ್ಲ. ಶ್ರೀರಾಮುಲು ಅವರು 12 ವರ್ಷಗಳಲ್ಲಿ ಸಾಕಷ್ಟು ಮೈಮೇಲೆ ಎಳೆದುಕೊಂಡಿದ್ದಾರೆ. ಈ ಬಗ್ಗೆ ಏಜೆನ್ಸಿ ತನಿಖೆ ಬಂದ್ರೆ ವರ್ಷಗಳೇ ಹಿಡಿಯುತ್ತೇವೆ ತನಿಖೆ ನಡೆಸಲು. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದು ವಾಗ್ದಾಳಿಯನ್ನ ನಡೆಸಿದ್ದಾರೆ.
ಶ್ರೀರಾಮುಲು ಹುಟ್ಟಿದ ಸ್ಲಂನಿಂದ ಹಿಡಿದು ಪಟ್ಟಣದವರೆಗೂ ಹೋಗಿ ಕೇಳಿದ್ರು ಜನಾರ್ದನ ರೆಡ್ಡಿ ಏನೂ ಅಂತ ಹೇಳ್ತಾರೆ. ಪಕ್ಷ ನನಗೆ ಟಿಕೆಟ್ ಕೊಡಲ್ಲ ಅಂತ ಹೇಳಿದ್ರು ನಾನು ಒಪ್ಪುತ್ತೇನೆ. ಶ್ರೀರಾಮುಲು ಪರ ಪ್ರಚಾರ ಮಾಡು ಅಂತ ಹೈಕಮಾಂಡ್ ಹೇಳಿದ್ರೆ ಆ ಕೆಲಸ ಮಾಡುತ್ತೇನೆ. ಪಕ್ಷದ ನಿರ್ಧಾರಕ್ಕೆ ನಾನು ತಲೆ ಬಾಗುತ್ತೇನೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.