ಕರ್ನಾಟಕ

ಮಸಾಜ್‌ ಸೆಂಟರ್‌ ಮೇಲೆ ಶ್ರೀರಾಮಸೇನೆ ದಾಳಿ.. ಮತ್ತೆ ನೈತಿಕಪೊಲೀಸ್‌ ಗಿರಿ

ಮಂಗಳೂರು ಬಿಜೈ KSRTC ಬಸ್‌ ನಿಲ್ದಾಣ ಬಳಿ ಘಟನೆ ನಡೆದಿದ್ದು, ಶಾಪ್‌ನಲ್ಲಿ ಮಹಿಳೆಯರು, ಸಂತ್ರಸ್ತೆಯರು ಕಣ್ಣೀರಾಗುತ್ತಿದ್ದರೂ ಹೆದರಿಸುವ ರೀತಿಯಲ್ಲಿ ರಾಮಸೇನೆಯ ಕಾರ್ಯಕರ್ತರು ವರ್ತಿಸಿದ್ದಾರೆ.

ರಾಜ್ಯದ ಕರಾವಳಿ ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ ಪ್ರಕರಣ ನಡೆದಿದೆ. ಮಸಾಜ್‌ ಸೆಂಟರ್‌ ಮೇಲೆ ರಾಮಸೇನೆ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಮಸಾಜ್‌ ಸೆಂಟರ್‌ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ಶಾಪ್‌ನ ಪೀಠೋಪಕರಣ ಧ್ವಂಸ ಮಾಡಿದ್ದಾರೆ. ಕಿಟಕಿ ಗಾಜು ಪುಡಿ..ಪುಡಿ ಮಾಡಿ ದಾಂದಲೆ ಮಾಡಿದ್ದಾರೆ. ಮಂಗಳೂರು ಬಿಜೈ KSRTC ಬಸ್‌ ನಿಲ್ದಾಣ ಬಳಿ ಘಟನೆ ನಡೆದಿದ್ದು, ಶಾಪ್‌ನಲ್ಲಿ ಮಹಿಳೆಯರು, ಸಂತ್ರಸ್ತೆಯರು ಕಣ್ಣೀರಾಗುತ್ತಿದ್ದರೂ ಹೆದರಿಸುವ ರೀತಿಯಲ್ಲಿ ರಾಮಸೇನೆ ಕಾರ್ಯಕರ್ತರು ವರ್ತಿಸಿದ್ದಾರೆ. ಹಾಡಹಗಲೇ ನಡೆದಿರುವ ನೈತಿಕ ಪೊಲೀಸ್‌ಗಿರಿಯಂತ ಪ್ರಕರಣ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.