ರಣಜಿ ಟ್ರೋಫಿ ಪಂದ್ಯಗಳಲ್ಲೂ ಭಾರತದ ಸ್ಟಾರ್ ಕ್ರಿಕೆಟರ್‌ಗಳ ಕಳಪೆ ಪ್ರದರ್ಶನ್ ಮುಂದುವರೆದಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭಮನ್ ಗಿಲ್, ರಿಷಬ್ ಪಂತ್ ಈಗ ದೇಶೀಯ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಆದರೆ ಇಲ್ಲೂ ಸ್ಟಾರ್ ಬ್ಯಾಟರ್‌ಗಳ ವೈಫಲ್ಯ ಮುಂದುವರೆದಿದೆ.
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಸಹ ಮುಂಬೈ ತಂಡದ ಪರ ಇನಿಂಗ್ಸ್ ಆರಂಭಿಸಿದ್ದರು. ಅದರೆ 19 ಎಸೆತಗಳನ್ನು ಎದುರಿಸಿ 3 ರನ್ ಬಾರಿಸಿ ಔಟ್ ಆಗಿದ್ದಾರೆ. ಇನ್ನು ಪಂಜಾಬ್ ಪರ ಕಣಕ್ಕೆ ಇಳಿಕ್ಕಿಳಿದಿರುವ ಶುಭಮನ್ ಗಿಲ್ ಕೇವಲ 4 ರನ್‌ಗಳಿಸಿ ಪೆವಿಲಿಯನ್ ಸೇರಿದ್ದಾರೆ. ಮತ್ತೊಂದೆಡೆ ದೆಹಲಿ ತಂಡದ ಪರ ಮೈದಾನಕ್ಕಿಳಿದ ರಿಷಬ್ ಪಂತ್, 10 ಎಸೆತಗಳನ್ನು ಎದುರಿಸಿದ ಕೇವಲ 1 ರನ್ ಗಳಿಸಿ ಔಟಾಗಿದ್ದಾರೆ. ಮತ್ತೊಂದೆಡೆ ವೈಯಕ್ತಿಕ ಕಾರಣಗಳಿಂದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ರಣಜಿ ಟೂರ್ನಿಯ ಮೊದಲ ಪಂದ್ಯದಿಂದ ದೂರು ಉಳಿದಿದ್ದಾರೆ. ಈ ಮಧ್ಯೆ ದೇಸಿ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟಿದ್ದ ಸ್ಟಾರ್ ಬ್ಯಾಟರ್‌ಗಳ ಕಳಪೆ ಪ್ರದರ್ಶನ ಮುಂದುವರೆದಿದ್ದು, ಆಟಗಾರರ ಭವಿಷ್ಯಕ್ಕೆ ಸಂಕಷ್ಟ ತಂದಿದೆ.