ಕರ್ನಾಟಕ

ನೇತಾಜಿ ಅವರ ಆದರ್ಶವನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು : ಸಿಎಂ ಸಿದ್ಧರಾಮಯ್ಯ

ನಾವೆಲ್ಲ ಸ್ವಾತಂತ್ರರಾಗಿ ಗುಲಾಮಗಿರಿ ಮುಕ್ತರಾಗಬೇಕೆಂದು. ದೇಶಕ್ಕಾಗಿ ಪ್ರಾಣವನ್ನೆ ಅರ್ಪಣೆ ಮಾಡಿದ್ದಾರೆ. ಅವರ ಆದರ್ಶಗಳನ್ನ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಾಡಿನ ಜನತೆ ಸಿಎಂ ಮನವಿಯನ್ನ ಮಾಡಿದ್ರು.

ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನ. ದೇಶದ ಬಗ್ಗೆ  ಅಪಾರ ಗೌರವ ಅಭಿಮಾನ ಭಕ್ತಿ ಇದ್ದ ಮಹಾನ್ ವ್ಯಕ್ತಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನಾಚರಣೆಯ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನೇತಾಜಿಯವರು ಬ್ರಿಟೀಷರ ಕಾಲದಲ್ಲಿ ಐಸಿಎಸ್ ಪರೀಕ್ಷೆಯನ್ನ ಪಾಸ್ ಮಾಡಿದ್ರು. ಆದರೆ ಅದನ್ನ ತ್ಯಾಗ ಮಾಡಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಳುಗಿದ್ರು. ಬಳಿಕ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ್ರು. ಅಹಿಂಸೆಯ ಮೂಲಕ ಗಾಂಧಿಯರ ದಾರಿಯಲ್ಲಿ ಸ್ವಾತಂತ್ರ ಪಡೆದುಕೊಳ್ಳೋದು ಕಷ್ಟ ಎಂಬ ಭಿನ್ನಾಭಿಪ್ರಾಯ ಇತ್ತು. ಶಸ್ತ್ರಾಸ್ತ್ರ ಉಪಯೋಗಿಸಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ಮಾಡಬೇಕೆಂದು ಐಎನ್ ಎ ಸ್ಥಾಪನೆ‌ ಮಾಡಿದ್ರು. ಆದರೆ ದುರಾದೃಷ್ಟವಶಾತ್‌ ಅವರು ಜಪಾನ್ ನಲ್ಲಿರುವ ವಿಮಾನ ಅಪಘಾತದದಲ್ಲಿ ಕಾಲವಾದ್ರು. ದೇಶಕ್ಕೆ ಸ್ವಾತಂತ್ರ್ಯ ಬರಬೇಕು, ನಾವೆಲ್ಲ ಸ್ವಾತಂತ್ರರಾಗಿ ಗುಲಾಮಗಿರಿ ಮುಕ್ತರಾಗಬೇಕೆಂದು. ದೇಶಕ್ಕಾಗಿ ಪ್ರಾಣವನ್ನೆ ಅರ್ಪಣೆ ಮಾಡಿದ್ದಾರೆ. ಅವರ ಆದರ್ಶಗಳನ್ನ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಾಡಿನ ಜನತೆ ಸಿಎಂ ಮನವಿಯನ್ನ ಮಾಡಿದ್ರು.