ದೇಶ

ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾಗೆ 3 ತಿಂಗಳು ಜೈಲು ಶಿಕ್ಷೆ

ಸಿನಿಮಾ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ವಿರುದ್ಧ ʼಶ್ರೀʼ ಎಂಬ ಕಂಪನಿಯು 2018ರಲ್ಲಿ ಸಿನಿಮಾ ವ್ಯವಹಾರ ಸಂಬಂಧ ಚೆಕ್‌ಬೌನ್ಸ್ ಪ್ರಕರಣವನ್ನು ದಾಖಲಿಸಿತ್ತು. ಇದೀಗ ಈ ಪ್ರಕರಣದ ತೀರ್ಪು ಹೊರಬಿದ್ದಿದೆ

ಚೆಕ್‌ಬೌನ್ಸ್‌ ಕೇಸಲ್ಲಿ ಖ್ಯಾತ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ 3 ತಿಂಗಳ ಜೈಲು ಶಿಕ್ಷೆ ವಿಧಿಸಿ ಮುಂಬೈನ ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದೆ. ಪ್ರಕರಣ ಸಂಬಂಧ ಜಾಮೀನು ರಹಿತ ವಾರಂಟ್ ಕೂಡ ಹೊರಡಿಸಲಾಗಿದೆ. ಮೂರು ತಿಂಗಳೊಳಗೆ ದೂರುದಾರರಿಗೆ 3.72 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಕೋರ್ಟ್‌,, ಡೈರೆಕ್ಟರ್‌ ರಾಮ್ ಗೋಪಾಲ್ ವರ್ಮಾಗೆ ಸೂಚಿಸಿದೆ. ಒಂದು ವೇಳೆ ಹಣ ನೀಡದಿದ್ದಲ್ಲಿ ಹೆಚ್ಚುವರಿ ಮೂರು ತಿಂಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಆದೇಶಿಸಿದೆ. ಸಿನಿಮಾ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ವಿರುದ್ಧ ʼಶ್ರೀʼ ಎಂಬ ಕಂಪನಿಯು 2018ರಲ್ಲಿ ಸಿನಿಮಾ ವ್ಯವಹಾರ ಸಂಬಂಧ ಚೆಕ್‌ಬೌನ್ಸ್ ಪ್ರಕರಣವನ್ನು ದಾಖಲಿಸಿತ್ತು. ಇದೀಗ ಈ ಪ್ರಕರಣದ ತೀರ್ಪು ಹೊರಬಿದ್ದಿದೆ.