ತುಮಕೂರು : ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಲ್ಲಿ ಮಗಳಿಗೆ ತಾಯಿ ಕಂಪ್ಯೂಟರ್ ಕೊಡಿಸಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ಗಾಂಧಿ ನಗರದ ಕೆರಗೋಡಿ ವಾಸಿ ಸಾಧಿಕ್ ಹಾಗೂ ನಗ್ಮಭಾನು ದಂಪತಿ ಗೃಹಕ್ಷ್ಮಿ ಹಣದಿಂದ ಮಗಳಿಗೆ ಓದಲು ಕಂಪ್ಯೂಟರ್ ಕೊಡಿಸಿದ್ದಾರೆ.
ಗೃಹಲಕ್ಷ್ಮಿ ಹಣದ ಜೊತೆಗೆ ಸ್ಕಾಲರ್ ಶಿಪ್ ಹಣವನ್ನೂ ಸೇರಿಸಿ ಕಂಪ್ಯೂಟರ್ ಖರೀದಿ ಮಾಡಿದ್ದು, ಪೋಷಕರ ಗೃಹಲಕ್ಷ್ಮಿ ಹಣದ ಸದ್ಭಳಕೆ ಇತರೆ ಪೋಷಕರಿಗೆ ಪ್ರೇರಣೆಯಾಗಿದ್ದಾರೆ.