ವಿದೇಶ

ಲಾಸ್‌ ಏಂಜಲೀಸ್‌ನಲ್ಲಿ ಹೆಚ್ಚಾಯ್ತು ಬೆಂಕಿ ತೀವ್ರತೆ; 30 ಸಾವಿರ ಮಂದಿ ಸ್ಥಳಾಂತರ

ಕಾಡ್ಗಿಚ್ಚಿನ ತೀವ್ರತೆ ದಿನೇದಿನೇ ಹೆಚ್ಚಾಗುತ್ತಿದ್ದು, ಬೆಳಗಿನ ಜಾವದಲ್ಲಿ ಆವರಿಸಿದ್ದು ಆರು ಗಂಟೆಗಳಲ್ಲಿ ಸುಮಾರು 15 ಚದರ ಮೈಲುಗಳ ಅರಣ್ಯ ಪ್ರದೇಶವನ್ನ ಭ್ರಸ್ಮಮಾಡಿದೆ.

ಕ್ಯಾಲಿಫೋರ್ನಿಯಾ: ಲಾಸ್‌ ಏಂಜಲೀಸ್‌ನ ಕ್ಯಾಸ್ಟೈಕ್ ಕಡಿದಾದ ಪರ್ವತಗಳಲ್ಲಿ ಕಾಡ್ಗಿಚ್ಚಿನ ಕ್ರೌರ್ಯ ಹೆಚ್ಚಾಗಿದ್ದು, 31,000 ಜನರನ್ನ ಸ್ಥಳಾಂತರಿಸಲು ಆದೇಶ ನೀಡಲಾಗಿದೆ. ಮುಂಜಾಗೃತ ಕ್ರಮವಾಗಿ ಸಾರ್ವಜನಿಕರಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗಲು ಅಗ್ವಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. 

ಕಾಡ್ಗಿಚ್ಚಿನ ತೀವ್ರತೆ ದಿನೇದಿನೇ ಹೆಚ್ಚಾಗುತ್ತಿದ್ದು, ಬೆಳಗಿನ ಜಾವದಲ್ಲಿ ಆವರಿಸಿದ್ದು ಆರು ಗಂಟೆಗಳಲ್ಲಿ ಸುಮಾರು 15 ಚದರ ಮೈಲುಗಳ ಅರಣ್ಯ ಪ್ರದೇಶವನ್ನ ಭ್ರಸ್ಮಮಾಡಿದೆ. ಕ್ಯಾಸ್ಟೇಕ್‌ ಸರೋವರದ ಸುತ್ತಾಮುತ್ತಲಿನ 31,000 ಜನರನ್ನ ಸ್ಥಳಾಂತರಿಸಲು ಆದೇಶ ಹೊರಡಿಸಲಾಗಿದೆ. ಲಾಸ್‌ ಏಂಜಲೀಸ್‌ನ ಉತ್ತರಕ್ಕೆ ಹೊಸದಾಗಿ ಬೆಂಕಿ ಕಾಣಿಸಿಕೊಂಡ ನಂತರ ಈ ಪ್ರದೇಶದ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ.