ಕರ್ನಾಟಕ
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ರಾಣಾ..!
ಕ್ರೇಜಿ ಕ್ವೀನ್ ರಕ್ಷಿತಾ ಸಹೋದರ ರಾಣಾ ಮದುವೆ ಇಂದು ಅದ್ದೂರಿಯಾಗಿ ನೆರವೇರಿದೆ..ನಟಿ ರಕ್ಷಿತಾ ಪ್ರೇಮ್ ತಮ್ಮನ ಮದುವೆ ಯಲ್ಲಿ ಇಂದು ಸ್ಯಾಂಡಲ್ ವುಡ್ ತಾರೆಯರ ಸಮಾಗಮವಾಗಿತ್ತು..
ರಕ್ಷಿತಾ ಸಹೋದರ ರಾಣಾ ಏಳು ವರ್ಷದ ಗೆಳತಿ ರಕ್ಷಿತಾರನ್ನು ಪ್ರೀತಿಸಿ ,ಮನೆಯವರನ್ನು ಒಪ್ಪಿಸಿ ಇಂದು ಸಪ್ತಪದಿ ತುಳಿದ್ರು..ರಕ್ಷಿತಾ ಫ್ಯಾಷನ್ ವೃತ್ತಿಯಲ್ಲಿ ಡಿಸೈನರ್ ಆಗಿದ್ದು, ಇಬ್ಬರು ಪರಸ್ಪರ ಪ್ರೀತಿಸಿ ಇಂದು ಸತಿ ಪತಿ ಗಳಗಿದ್ದಾರೆ..ಇನ್ನು ರಕ್ಷಿತಾ ಪ್ರೇಮ್ ತಮ್ಮನ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದು, ಇಡೀ ಇಂಡಸ್ಟ್ರಿಗೆ ಆಮಂತ್ರಣ ಪತ್ರಿಕೆ ನೀಡಿ ತಮ್ಮನ ಮದುವೆಗೆ ಆಹ್ವಾನಿಸಿದ್ರು..ಅಂತೇಯೇ ರಾಣ ಮದುವೆಗೆ ಸುದೀಪ್, ರಮೇಶ್ ಅರವಿಂದ್, ಹಿರಿಯ ನಟಿ ಅಂಬಿಕ, ಉಪೇಂದ್ರ ಸೇರಿದಂತೆ ಅನೇಕ ನಟನಟಿಯರು ಭಾಗಿಯಾಗಿದ್ರು...ಇನ್ನು ನಾಳೆ ಅರಮನೆ ಮೈದಾನದ ಗೇಟ್ ನಂ.1 ರಲ್ಲಿ ರಾಣಾ , ರಕ಼ಿತಾ ರಿಸೆಪ್ಶನ್ ಇದ್ದು , ನಾಳೆಯೂ ಈ ಜೋಡಿಗಳ ಆರತಕ್ಷತೆಗೆ ಚಂದನವನದ ತಾರೆಯರು ಭಾಗಿಯಾಗಲಿದ್ದಾರೆ..