ಸನ್ನಡತೆ ಆಧಾರದ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರು ಜನ ಖೈದಿಗಳು ಕಲಬುರಗಿ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.ಸಾಬಣ್ಣ ಬನಾರ್, ಖಾಜಾಸಾಬ್, ಶಿವಶಂಕರ್, ಬಸವರಾಜ, ರವಿ, ಬೀರಪ್ಪ ಹಾಗೂ ಅಬೀದಾ ಬೇಗಂ ಕಲಬುರಗಿ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗಿರೋ ಕೈದಿಗಳು
ಜೈಲಿನಲ್ಲಿ ಸನ್ನಡತೆ ಆಧಾರದ ಹಿನ್ನೆಲೆಯಲ್ಲಿ ಕಾರಾಗೃಹ ಇಲಾಖೆ ಅವಧಿ ಪೂರ್ವ ಬಿಡುಗಡೆ ಮಾಡಿದೆ. ಕಾರಾಗೃಹ ಡಿಜಿ ನಿರ್ದೇಶನದ ಮೇರೆಗೆ ಕಲಬುರಗಿ ಜೈಲು ಅಧೀಕ್ಷಕಿ ಆರ್. ಅನಿತಾ ಬಿಡುಗಡೆಗೊಳಿಸಿ ಆದೇಶ ನೀಡಿದ್ದಾರೆ..