ದೇಶ

ಆದಾಯ ತೆರಿಗೆದಾರರಿಗೆ ಬಜೆಟ್‌ನಲ್ಲಿ ಬಂಪರ್‌ ಗಿಫ್ಟ್..!

ಆದಾಯ ತೆರಿಗೆ ಬಹುಮುಖ್ಯವಾದ ಭಾಗವಾಗಿದ್ದು, ಈ ಬಾರಿಯ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ದೇಶದ ಮಧ್ಯಮ ವರ್ಗದ ಆದಾಯ ತೆರಿಗೆ ಪಾವತಿದಾರರಿಗೆ ಬಿಗ್ ರಿಲೀಫ್ ನೀಡಿದೆ.

ನವದೆಹಲಿ : 2025ರ ಕೇಂದ್ರ ಆಯವ್ಯಯುದಲ್ಲಿ ವೇತನದಾರರು , ಮಧ್ಯಮ ವರ್ಗಕ್ಕೆ ಗುಸ್‌ ನ್ಯೂಸ್‌ ನೀಡಿದ್ದು, 12 ಲಕ್ಷದ ವರೆಗೆ ತೆರಿಗೆಯಲ್ಲಿ ಅತೀದೊಡ್ಡ ವಿನಾಯಿತಿ ನೀಡಲಾಗಿದೆ. ಆದಾಯ ತೆರಿಗೆ ಬಹುಮುಖ್ಯವಾದ ಭಾಗವಾಗಿದ್ದು, ಈ ಬಾರಿಯ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ದೇಶದ ಮಧ್ಯಮ ವರ್ಗದ ಆದಾಯ ತೆರಿಗೆ ಪಾವತಿದಾರರಿಗೆ ಬಿಗ್ ರಿಲೀಫ್ ನೀಡಿದೆ. ಹೊಸ ತೆರಿಗೆ ಪದ್ದತಿಯಲ್ಲಿ ಭಾರೀ ಬದಲಾವಣೆ ಮಾಡಿದ್ದು, 4 ಲಕ್ಷದ ವರೆಗೆ ತೆರಿಗೆ ವಿನಾಯಿತಿ ನೀಡಲಾಗಿದೆ. 

4 ರಿಂದ 8 ಲಕ್ಷದ ವರೆಗೆ 5% ತೆರಿಗೆ, 8 ರಿಂದ 12 ಲಕ್ಷದ ವರೆಗೆ  10% ತೆರಿಗೆ, 12 ರಿಂದ 16 ಲಕ್ಷದವರೆಗೆ  15% ಹಾಗೂ 16 ರಿಂದ 20 ಲಕ್ಷದವರೆಗೆ  20% ತೆರಿಗೆ, 20 ರಿಂದ 24 ಲಕ್ಷದ ವರೆಗೆ 25ರಷ್ಟು ತೆರಿಗೆ ವಿಧಿಸಿದೆ. ಇನ್ನೂ 25 ಲಕ್ಷ ಮೇಲ್ಪಟ್ಟವರು 30ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ.  

ಆದಾಯ ತೆರಿಗೆ ವಿನಾಯಿತಿ

0 ರಿಂದ 4 ಲಕ್ಷ - 00%
4 ರಿಂದ 8 ಲಕ್ಷ  -  5%
8 ರಿಂದ 12 ಲಕ್ಷ  -  10%
12 ರಿಂದ 16 ಲಕ್ಷ  -  15%
16 ರಿಂದ 20 ಲಕ್ಷ  -  20%
20 ರಿಂದ 24 ಲಕ್ಷ -  25%
above 24- 30%