ಕರ್ನಾಟಕ

ಕುಂಭಮೇಳದಲ್ಲಿ ಪ್ರಕಾಶ್ ರೈ ಫೋಟೋ ವೈರಲ್; ಪ್ರಶಾಂತ್‌ ಸಂಬರ್ಗಿ ವಿರುದ್ಧ‌ FIR

ಯುವಕ ಯುವತಿಯರಿಗೆ ಪಾಠ ಆಗಬೇಕು. ಪ್ರಶಾಂತ್ ಸಂಬರ್ಗಿ ಇದೇ ರೀತಿ ಸಾಕಷ್ಟು ಜನರಿಗೆ ತೊಂದರೆ ಕೊಟ್ಟಿದ್ದಾನೆ. ಹಿಂದೆ ನಟಿಯರಿಗೂ ತೊಂದರೆ ಕೊಟ್ಟಿದ್ದಾನೆ. ಈ ಮನುಷ್ಯನಿಗೆ ಒಂದು ಪಾಠ ಕಲಿಸಬೇಕು. ತಪ್ಪು ಪ್ರಚಾರ ಮಾಡುವುದು ಅನುಮತಿ ಇಲ್ಲದೆ ಯಾರು ಫೋಟೊಗಳನ್ನ ಬಳಸಬಾರದು. ಇದು ಅಕ್ಷಮ್ಯ ಅಪರಾಧ. ಈ ಬಗ್ಗೆ ಗಂಭೀರವಾಗಿ ಯೋಚನೆ ಮಾಡುತ್ತಿದ್ದೇನೆ ಎಂದಿದ್ದಾರೆ.

ಮೈಸೂರು : ಕುಂಭಮೇಳದಲ್ಲಿ ನಟ ಪ್ರಕಾಶ್ ರೈ ಸ್ನಾನ ಮಾಡಿರುವ AI ಪೋಟೋ ವೈರಲ್ ಮಾಡುತ್ತಿರುವವರ ವಿರುದ್ಧ ನಟ ದೂರು ನೀಡಿದ್ದಾರೆ. ತಮ್ಮ ಪೋಟೋವನ್ನು ಎಐ ತಂತ್ರಜ್ಞಾನ ಬಳಸಿ ಅಪಪ್ರಚಾರ ಮಾಡುತ್ತಿರುವುದಾಗಿ ಮೈಸೂರಿನ ಲಕ್ಷ್ಮೀ ಪುರಂ ಪೊಲೀಸ್ ಠಾಣೆಗೆ ಆಗಮಿಸಿ ಪ್ರಕಾಶ್‌ ರೈ ದೂರು ನೀಡಿದ್ದಾರೆ. 

ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ನಟ ಪ್ರಕಾಶ್‌ ರೈ, ಪ್ರಶಾಂತ ಸಂಬರ್ಗಿ ವಿರುದ್ಧ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐ ಆರ್ ದಾಖಲಿಸಿದ್ದೇನೆ. ಕುಂಭಮೇಳದಲ್ಲಿ ನಾನು ಸ್ನಾನ ಮಾಡುತ್ತಿರುವ ರೀತಿಯ ಫೋಟೊ ವೈರಲ್ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕುಂಭಮೇಳದ ಪುಣ್ಯ ಸ್ನಾನ ನಡೆಯುತ್ತಿದೆ. ಹಿಂದು ಧರ್ಮದವರಿಗೆ ಹಾಗೂ ದೇವರನ್ನ ನಂಬುವವರಿಗೆ ಪುಣ್ಯವಾದ ಸ್ಥಳ. ಆದರೆ ಎಐ ಆ್ಯಪ್ ಬಳಿಸಿ ಪ್ರಕಾಶ್ ರೈ ಕುಂಭಮೇಳದಲ್ಲಿ ಸ್ನಾನ ಮಾಡಿದ್ರು ಎಂದು ಫೋಟೊ ವೈರಲ್ ಮಾಡುತ್ತಿದ್ದಾರೆ. ಮೊದಲಿನಿಂದಲೂ ನನ್ನನ್ನ ಹಿಂದು ವಿರೋಧಿ ಎಂದು ಸುಳ್ಳು ಸುದ್ದಿಯನ್ಬ ಹಬ್ಬಿಸಿಕೊಂಡು ಬಂದಿದ್ದಾರೆ. ಪ್ರಶಾಂತ ಸಂಬರ್ಗಿ ಪ್ರಖ್ಯಾತರೋ ಕುಖ್ಯಾತರೊ ಗೊತ್ತಿಲ್ಲ ನನಗೆ. ದೇಶದಲ್ಲಿ ಸುಳ್ಳು ಸುದ್ದಿಗಳನ್ನ ಹಬ್ಬಿಸುವುದು ಅಭ್ಯಸವಾಗಿ ಬಿಟ್ಟಿದೆ. ಆದರೆ ಇದನ್ನ ಯಾರು ಪ್ರಶ್ನೆ ಮಾಡುತ್ತಿಲ್ಲ. ಕೇವಲ ಧ್ವೇಷವನ್ನ ಹರಿಡಿಸುತ್ತಿದ್ದಾರೆ. ಇವರು ನಿಜವಾದ ಧರ್ಮದವರಲ್ಲ. ಜನರ ನಂಬಿಕೆಗೆ ಅಘಾತ ಮಾಡುತ್ತಿದ್ದಾರೆ. ನನ್ನ ವಿರುದ್ಧ ಸಾಕಷ್ಟು ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಹಾಗಾಗಿ ನಾನು ಪ್ರಶಾಂತ್‌ ಸಂಬರ್ಗಿ ವಿರುದ್ಧ ದೂರು ನೀಡಿದ್ದು, 15 ದಿನಗಳಲ್ಲಿ ಆ ವ್ಯಕ್ತಿ ಠಾಣೆಗೆ ಬಂದು ಉತ್ತರ ನೀಡಬೇಕು. ಸತ್ಯಾಸತ್ಯತೆ ಎಲ್ಲರಿಗೂ ತಿಳಿಯಬೇಕು. ಫೇಕ್ ನ್ಯೂಸ್ ಸಮಾಜವನ್ನ ಹಾಳು ಮಾಡುತ್ತಿದೆ ಎಂದು ಪ್ರಕಾಶ್‌ ರೈ ಆಕ್ರೋಶ ಹೊರಹಾಕಿದ್ದಾರೆ.

ಯುವಕ ಯುವತಿಯರಿಗೆ ಪಾಠ ಆಗಬೇಕು. ಪ್ರಶಾಂತ್ ಸಂಬರ್ಗಿ ಇದೇ ರೀತಿ ಸಾಕಷ್ಟು ಜನರಿಗೆ ತೊಂದರೆ ಕೊಟ್ಟಿದ್ದಾನೆ. ಹಿಂದೆ ನಟಿಯರಿಗೂ ತೊಂದರೆ ಕೊಟ್ಟಿದ್ದಾನೆ. ಈ ಮನುಷ್ಯನಿಗೆ ಒಂದು ಪಾಠ ಕಲಿಸಬೇಕು. ತಪ್ಪು ಪ್ರಚಾರ ಮಾಡುವುದು ಅನುಮತಿ ಇಲ್ಲದೆ ಯಾರು ಫೋಟೊಗಳನ್ನ ಬಳಸಬಾರದು. ಇದು ಅಕ್ಷಮ್ಯ ಅಪರಾಧ. ಈ ಬಗ್ಗೆ ಗಂಭೀರವಾಗಿ ಯೋಚನೆ ಮಾಡುತ್ತಿದ್ದೇನೆ ಎಂದಿದ್ದಾರೆ.

ಕುಂಭಮೇಳೆ ಪುಣ್ಯ ಸ್ನಾನ...ಸ್ನಾನ ಮಾಡುವುದರಲ್ಲಿ ತಪ್ಪೇನಿದೆ. ಅದು ಅವರವರ ನಂಬಿಕೆ. ಆದರೆ, ನನಗೆ ದೇವರ ಮೇಲೆ ನಂಬಿಕೆ ಇಲ್ಲ. ನನಗೆ ಮನ್ಯುಷ್ಯರ ಮೇಲೆ ನಂಬಿಕೆ. ದೇವರಿಲ್ಲದೆ ಬದುಕಬಹುದು. ಆದರೆ..ಮನುಷ್ಯರಿಲ್ಲದೆ ಬದುಕಲು ಸಾಧ್ಯವಿಲ್ಲ. ಹಾಗಾಂತ ಬೇರೆಯವರ ನಂಬಿಕೆಯನ್ನ ನಾನು ಪ್ರಶ್ನೆ ಮಾಡಲ್ಲ. ನನ್ನ ಹೆಂಡತಿ ಮಗಳು ದೇವಸ್ಥಾನಕ್ಕೆ ಹೋಗಿ ಹೋಮ ಮಾಡುತ್ತಾರೆ. ಆದರೆ ಇಬ್ಬರು ಸಾಮರಸ್ಯದಿಂದ ಇದ್ದೇವೆ. ಮೂಡ ನಂಬಿಕೆಯನ್ನ ಮಾತ್ರ ಪ್ರಶ್ನೆ ಮಾಡುತ್ತೇನೆ. 
ಸಂಬರ್ಗಿ ಯಾರು ಅಂತನೇ ಗೊತ್ತಿಲ್ಲ.. ಆದರೆ ಅವರು ಧರ್ಮದ ಧರ್ಮದ ಮೇಲೆ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆಅನ್ನೋದು ಗೊತ್ತು ಎಂದು ಮೈಸೂರಿನಲ್ಲಿ ನಟ ಪ್ರಕಾಶ್ ರೈ ಹೇಳಿದ್ದಾರೆ