ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಮೂರನೇ ಅವಧಿಯ ಎರಡನೇ ಬಜೆಟ್ ಇಂದು ಮಂಡನೆಯಾಗುತ್ತಿದೆ. ಈ ಬಾರಿಯ ಆಯವ್ಯಯದ ಮೇಲೆ ಕರ್ನಾಟಕದ ಜನತೆ ಹಲವು ನಿರೀಕ್ಷೆಗಳನ್ನ ಹೊಂದಿದ್ದಾರೆ. ರಾಜ್ಯದ ವಿವಿಧ ಕ್ಷೇತ್ರಗಳಿಗಳಲ್ಲೀಗ ವಿವಿಧ ಲೆಕ್ಕಾಚಾರಗಳು ಶುರುವಾಗಿವೆ.
ಸಿಎಂ ಸಿದ್ದರಾಮಯ್ಯ ಈಗಾಗಲೇ ಕೇಂದ್ರ ಸರ್ಕಾರದ ಎದುರು ಹತ್ತು-ಹಲವು ಪ್ರಸ್ತಾವನೆಯನ್ನಿಟ್ಟಿದಾರೆ. ಬೆಂಗಳೂರು ಅಭಿವೃದ್ಧಿ ಸೇರಿ ಕರ್ನಾಟಕದ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರ ಅನುದಾನ ನೀಡುವ ನಿರೀಕ್ಷೆಯಲ್ಲಿದ್ದಾರೆ. ರಾಜ್ಯದ ಕಾರ್ಮಿಕರು, ಉದ್ಯೋಗಿಗಳು, ರೈತರು, ಮಹಿಳೆಯರು, ಕೈಗಾರಿಕ ವಲಯದವರು ಇಂದಿನ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಯನ್ನ ಹೊಂದಿದ್ದಾರೆ.
ಕನ್ನಡಿಗರ ನಿರೀಕ್ಷೆಗಳು?
- ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಹಣವನ್ನು ಘೋಷಿಸಿತ್ತು ಆದರೆ 2023 ಮತ್ತು 2024ರಲ್ಲೂ ಯಾವುದೇ ಹಣ ಬಿಡುಗಡೆ ಮಾಡಿಲ್ಲ, ಈಗಿನ ಬಜೆಟ್ ನಲ್ಲಿ ಬಿಡುಗಡೆ ಮಾಡಬಹುದೆಂಬ ನಿರೀಕ್ಷೆ.
- ರಾಜ್ಯದ ಅಭಿವೃದ್ಧಿಗೆ ₹21,000 ಕೋಟಿ ಸೇರಿದಂತೆ ನಗರಗಳಿಗೆ ಸಮಗ್ರ ಮೂಲಸೌಕರ್ಯ ಒದಗಿಸಲು ಅಮೃತ್ ಅಡಿಯಲ್ಲಿ ₹10,000 ಕೋಟಿ ಅನುದಾನ ನೀಡಬಹುದೆಂಬ ನಿರೀಕ್ಷೆ.
- 15 ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ರಾಜ್ಯದ ಪಾಲು ಕಡಿತವನ್ನು ಸರಿದೂಗಿಸಲು ₹ 5,495 ಕೋಟಿ ನಿರೀಕ್ಷೆ.
- ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಒದಗಿಸುವ 5000 ಕೋಟಿ ರೂಪಾಯಿಗಳ ವಾರ್ಷಿಕ ಹಂಚಿಕೆಗೆ ಪೂರಕವಾಗಿ ಕೇಂದ್ರ ಬಜೆಟ್‌ನಲ್ಲಿ ಅನುದಾನ
- ಮೇಕೆದಾಟು ಸಮಾನಾಂತರ ಅಣೆಕಟ್ಟು ಯೋಜನೆಗೆ ಕೇಂದ್ರ ಜಲ ಆಯೋಗದಿಂದ ಮಂಜೂರಾತಿ ನಿರೀಕ್ಷೆ.
- ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಯ ವಿವರವಾದ ಯೋಜನಾ ವರದಿಗೆ ಕೇಂದ್ರ ಜಲವಿದ್ಯುತ್ ಸಚಿವಾಲಯ ಮತ್ತು ಪರಿಸರ ಮತ್ತು ಅರಣ್ಯ ಸಚಿವಾಲಯ ಹಸಿರು ನಿಶಾನೆ ತೋರಿಸಬೇಕೆಂಬ ನಿರೀಕ್ಷೆ.
- AIIMS ಸ್ಥಾಪನೆಗೆ ಅನುದಾನ ನೀಡಬಹುದೆಂಬ ನಿರೀಕ್ಷೆ.
ಬೆಂಗಳೂರಿಗೆ ನಿರೀಕ್ಷೆ?
- ಬೆಂಗಳೂರಲ್ಲಿ ಟ್ರಾಫಿಕ್ ನಿವಾರಣೆಗೆ ಟನಲ್ ರಸ್ತೆಗೆ ಅನುದಾನ
- ರಿಂಗ್ ರಸ್ತೆ ಮೇಲ್ದರ್ಜೆಗೆ 8,916 ಕೋಟಿ ಅನುದಾನ
- ಹೆಬ್ಬಾಳದ ಎಸ್ಟೀಮ್ ಮಾಲ್ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್
- ಉತ್ತರ-ದಕ್ಷಿಣ 18.5 ಕಿ.ಮೀ ಟನಲ್ ನಿರ್ಮಾಣಕ್ಕೆ ₹15 ಸಾವಿರ ಕೋಟಿ
- ಕೆ.ಆರ್.ಪುರ ವೃತ್ತದಿಂದ ನಾಯಂಡನಹಳ್ಳಿ ಜಂಕ್ಷನ್ ಟನಲ್ ರಸ್ತೆ‘
- 28.5 ಕಿ.ಮೀ ಟನಲ್ ರಸ್ತೆ ನಿರ್ಮಾಣಕ್ಕೆ ₹25 ಸಾವಿರ ಕೋಟಿ ವೆಚ್ಚ
- ಟನಲ್ ರಸ್ತೆ, ಪೆರಿಫೆರಲ್ ರಿಂಗ್ ರಸ್ತೆ, ಡಬಲ್ ಡೆಕ್ಕರ್ ಮೇಲ್ಸೇತುವೆ
- ಮೆಟ್ರೋ ರೈಲು ಮಾರ್ಗಗಳಿಗೆ 5 ಕಾರಿಡಾರು ವಿಸ್ತರಣೆಗೆ ಗುರುತು
- 17 ಮೇಲ್ಸೇತುವೆ, ಬಫರ್ ವಲಯ ನಿರ್ಮಾಣಕ್ಕೆ ಅನುದಾನದ ಮನವಿ
- ಬೆಂಗಳೂರಲ್ಲಿ ಮಳೆಯಿಂದಾಗುವ ಅವಘಡ ತಪ್ಪಿಸಲು ಯೋಜನೆ
- 8 ಪಥಗಳ 73.04 ಕಿ.ಮೀ ಉದ್ದದ ಬಿಸಿನೆಸ್ ಕಾರಿಡಾರ್ ಯೋಜನೆ
- ಕಾವೇರಿ 5ನೇ ಹಂತದ ಕುಡಿಯುವ ನೀರಿನ ಪೂರೈಕೆ ಮಾಡುವ ಯೋಜನೆ
- ಹೆಚ್ಚುವರಿ ಬೇಡಿಕೆ ಪೂರೈಸಲು ಕಾವೇರಿ 6ನೇ ಹಂತದ ಯೋಜನೆ ಬೇಡಿಕೆ