ಕರ್ನಾಟಕ

ಕಿರುತೆರೆ ನಟಿ ವಿರುದ್ಧ ಕಿರುಕುಳ ಆರೋಪ; ವಿಚಾರಣೆಗೆ ಹಾಜರಾಗುವಂತೆ ನಟಿ ಶಶಿಕಲಾಗೆ ನೋಟಿಸ್

ನಟಿ ಶಶಿಕಲಾ ವಿರುದ್ಧ ಪತಿ ಹರ್ಷವರ್ಧನ್ ಅವರು ಕಿರುಕುಳ ಆರೋಪ ಮಾಡಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು. ಈಗಾಗಲೇ ದೂರುದಾರ ಶಶಿಕಲಾ ಪತಿ ಹರ್ಷವರ್ಧನನ ವಿಚಾರಣೆ ನಡೆಸಿರುವ ಪೊಲೀಸರು ಹರ್ಷವರ್ಧನ ಆರೋಪಕ್ಕೆ ಕೆಲ ದಾಖಲೆಗಳನ್ನು ಕೇಳಿದ್ದಾರೆ.

ಕಿರುತೆರೆ ನಟಿ ಶಶಿಕಲಾ ವಿರುದ್ಧ ಕಿರುಕುಳ ಆರೋಪ ಪ್ರಕರಣ ಸಂಬಂಧ ವಿಚಾರಣೆ ಹಾಜರಾಗುವಂತೆ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ರೂ ಡೋಟ್‌ ಕೇರ್‌ ಎಂದ ನಟಿಗೆ 2ನೇ ಬಾರಿಗೆ ವಿದ್ಯಾರಣ್ಯಪುರ ಪೊಲೀಸರು ನೋಡಿಸ್‌ ಜಾರಿ ಮಾಡಿದ್ದಾರೆ. 

ನಟಿ ಶಶಿಕಲಾ ವಿರುದ್ಧ ಪತಿ ಹರ್ಷವರ್ಧನ್ ಅವರು ಕಿರುಕುಳ ಆರೋಪ ಮಾಡಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು. ಈಗಾಗಲೇ ದೂರುದಾರ ಶಶಿಕಲಾ ಪತಿ ಹರ್ಷವರ್ಧನನ ವಿಚಾರಣೆ ನಡೆಸಿರುವ ಪೊಲೀಸರು ಹರ್ಷವರ್ಧನ ಆರೋಪಕ್ಕೆ ಕೆಲ ದಾಖಲೆಗಳನ್ನು ಕೇಳಿದ್ದಾರೆ. ದಾಖಲೆಗಳ ಜೊತೆ ಹಾಜರಾಗುತ್ತೆನೆ ಎಂದು ಹರ್ಷವರ್ದನ್‌ ಹೇಳಿದ್ದಾರೆ. ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ನಟಿಗೆ 2ನೇ ನೋಟಿಸ್‌ ನೀಡಲಾಗಿದೆ. ಇದಕ್ಕೂ ಹಾಜರಾಗದಿದ್ದರೇ 3ನೇ ನೋಟಿಸ್ ಅನ್ನು ನೀಡಲಾಗುತ್ತದೆ. ಒಂದು ವೇಳೆ ಮೂರನೇ ನೋಟಿಸ್ಗೂ ನಟಿ ಉತ್ತರ ಕೊಡದಿದ್ದರೇ ಅರೆಸ್ಟ್ ಮಾಡುವ ಸಾಧ್ಯತೆ ಇದೆ.