ದೇಶ

ಮೊಬೈಲ್‌ ಖರೀದಿ ಮಾಡೋರಿಗೆ ಬಂಪರ್..‌ ಬಜೆಟ್‌ನಲ್ಲಿ ಹಲವು ವಸ್ತುಗಳ ಬೆಲೆ ಇಳಿಕೆ

ಮೊಬೈಲ್‌ ಫೋನ್‌ ಜೊತೆಗೆ ಲೀಥಿಯಂ ಬ್ಯಾಟರಿಗಳ ಬೆಲೆಯಲ್ಲಿ ಇಳಿಕೆ ಹಾಗೂ ಕ್ಯಾನ್ಸರ್ ಔಷಧಿಗಳ ಬೆಲೆ, ಎಲೆಕ್ಟ್ರಿಕ್ ಬೈಕ್ ಸೇರಿ ಚರ್ಮೋತ್ಪನ್ನಗಳ ಬೆಲೆಯನ್ನೂ ಕೇಂದ್ರ ಸರ್ಕಾರ ಇಳಿಕೆ ಮಾಡಿದೆ.

2025-26ರ ಕೇಂದ್ರ ಬಜೆಟ್‌ನಲ್ಲಿ ಹಲವು ವಸ್ತುಗಳ ಬೆಲೆಯನ್ನ ಇಳಿಕೆ ಮಾಡಲಾಗಿದೆ. ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ನೀಡಿದ ಸರ್ಕಾರ ಹಲವು ಹಲವು ವಸ್ತುಗಳ ಬೆಲೆಯನ್ನೂ ಕೂಡ ಇಳಿಸಿದೆ. 

ಹೌದು, ಈ ಬಾರಿ ಬಜೆಟ್‌ ಮೊಬೈಲ್‌ ಬಳಕೆದಾರರಿಗೆ ಖುಷಿತಂದಿದ್ದು, ಮೊಬೈಲ್‌ ಫೋನ್‌ಗಳ ಬೆಲೆಯನ್ನ ಇಳಿಕೆ ಮಾಡಿದೆ. ಮೊಬೈಲ್‌ ಫೋನ್‌ ಜೊತೆಗೆ ಲೀಥಿಯಂ ಬ್ಯಾಟರಿಗಳ ಬೆಲೆಯಲ್ಲಿ ಇಳಿಕೆ ಹಾಗೂ ಕ್ಯಾನ್ಸರ್ ಔಷಧಿಗಳ ಬೆಲೆ, ಎಲೆಕ್ಟ್ರಿಕ್ ಬೈಕ್  ಸೇರಿ ಚರ್ಮೋತ್ಪನ್ನಗಳ ಬೆಲೆಯನ್ನೂ ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. ಈ ಮೂಲಕ ಕೇಂದ್ರ ಖರೀದಿದಾರ ಖುಷಿಯನ್ನ ಇಮ್ಮಡಿಗೊಳಿಸಿದೆ. 

ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಇಂಡಿಯಾವನ್ನು ಪದೇ ಪದೇ ಶ್ಲಾಘಿಸಿದ್ದಾರೆ.  ಹಾಗಾಗಿ ಜನಸಾಮಾನ್ಯರು ಹೆಚ್ಚು ಡಿಜಿಟಲ್ ಉತ್ಪನ್ನಗಳನ್ನು ಬಳಸಲು ಪ್ರೋತ್ಸಾಹಿಸುವ ಸಲುವಾಗಿ ಈ ಬಾರಿಯ ಬಜೆಟ್‌ನಲ್ಲಿ ಡಿಜಿಟಲ್ ಉತ್ಪನ್ನಗಳ ಬೆಲೆಯನ್ನ ಇಳಿಕೆ ಮಾಡಿದ್ದಾರೆ. 

ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆ?
- ಚರ್ಮೋತ್ಫನ್ನಗಳು
- ಕೋಬಾಲ್ಟ್‌ ಝಿಂಕ್‌
- ಮೊಬೈಲ್‌
- ಎಲೆಟ್ರಿಕ್‌ ವಾಹನ
- ಥೀಲಿಯಂ ಬ್ಯಾಟರಿ
- ಕ್ಯಾನ್ಸರ್‌ ಔಷಧ
- ಮೊಬೈಲ್‌
- ಎಲ್‌ಇಡಿ ಟಿವಿ
- ಸ್ವದೇಶಿ ಬಟ್ಟೆಗಳು