ದೇಶ

ನಮ್ಮ ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ ; ಸಿಎಂ ಸಿದ್ದರಾಮಯ್ಯ

ನಾವು ಸಚಿವ ಕೃಷ್ಣ ಭೈರೇಗೌಡರನ್ನು ಕಳುಹಿಸಿದ್ದೆವು. ಆದರೆ ನಾವು ಸಲ್ಲಿಸಿದ್ದ ಯಾವುದೇ ಬೇಡಿಕೆಗಳನ್ನು ಬಜೆಟ್ ನಲ್ಲಿ ಈಡೇರಿಸಿಲ್ಲ‌. 50 ಲಕ್ಷದ 65,345 ಕೋಟಿ ಮೊತ್ತದ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ನ ಗಾತ್ರ ಕಡಿಮೆಯಾಗಿದೆ‌.

ಮೈಸೂರು : ಕೇಂದ್ರದ ಬಜೆಟ್ ಬಹಳ ನಿರಾಸದಾಯಕವಾದ ಬಜೆಟ್. ದೂರದೃಷ್ಟಿ ಇಲ್ಲದ ಬಜೆಟ್ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ. ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಹಿನ್ನೆಲೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ,  ನಮ್ಮ ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ ಒಂದನ್ನೂ ಈಡೇರಿಸಿಲ್ಲ. ಈ ಬಾರಿಯ ಕೇಂದ್ರ ಬಜೆಟ್ ದೇಶದ ಹಿತದೃಷ್ಟಿಯಿಂದ ಅದರಲ್ಲೂ ಕರ್ನಾಟಕದ ಹಿತದೃಷ್ಟಿಯಿಂದ ಬಹಳ ನಿರಾಶಾದಾಯಕ ಬಜೆಟ್ ಆಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದು ಯಾವುದೇ ದೂರದೃಷ್ಟಿ ಇಲ್ಲದ ಬಜೆಟ್. ಬಜೆಟ್ ಪೂರ್ವಭಾವಿ ಸಭೆಗೆ ನಮ್ಮನ್ನು ಕರೆದಿದ್ದರು. ನಾವು ಸಚಿವ ಕೃಷ್ಣ ಭೈರೇಗೌಡರನ್ನು ಕಳುಹಿಸಿದ್ದೆವು. ಆದರೆ ನಾವು ಸಲ್ಲಿಸಿದ್ದ ಯಾವುದೇ ಬೇಡಿಕೆಗಳನ್ನು ಬಜೆಟ್ ನಲ್ಲಿ ಈಡೇರಿಸಿಲ್ಲ‌. 50 ಲಕ್ಷದ 65,345 ಕೋಟಿ ಮೊತ್ತದ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ನ ಗಾತ್ರ ಕಡಿಮೆಯಾಗಿದೆ‌. ಕಳೆದ ಬಾರಿಯ ಬಜೆಟ್ ನಲ್ಲಿ ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಹಾಗಾಗಿ ಈ ಬಾರಿಯ ಬಜೆಟ್ ನ ಗಾತ್ರವೂ ಕಡಿಮೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ವರ್ಷ 50 ಲಕ್ಷದ 65 ಸಾವಿರದ 345 ಕೋಟಿ ಬಜೆಟ್ ಮಂಡಿಸಿದ್ದಾರೆ. ಕಳೆದ ವರ್ಷ 48 ಲಕ್ಷದ 20 ಸಾವಿರ ಕೋಟಿ ಬಜೆಟ್ಟ ಮಂಡಿಸಿದ್ರು. 1 ,ಲಕ್ಷದ 4 ಸಾವಿರ ಕೋಟಿ ಕಡಿಮೆ ಬಜೆಟ್ ಮಂಡಿಸಿದ್ದಾರೆ. ತೆರಿಗೆ ಅಂದಾಜಿನಷ್ಟು ಕಲೆಕ್ಟ್ ಮಾಡಿದ್ರೆ ರಿವೈಜ್ ಬಜೆಡ್ ಆಗ್ತಾ ಇರಲಿಲ್ಲ. ಈ ಬಜೆಟ್ ಗಾತ್ರದಲ್ಲಿ ಕೇಂದ್ರ ಸಾಲ ತಗೊಂಡಿರೋದು 15 ,ಲಕ್ಷದ 68 ಸಾವಿರದ 936 ಕೋಟಿ. 12 ಲಕ್ಷದ 70 ಸಾವಿರ ಕೋಟಿ ಬಡ್ಡಿ ಪಾವತಿಗೆ ಕೊಟ್ಟಿದ್ದಾರೆ. ದೇಶದ ಮೇಲೆ ಸಾಲ 202 ಲಕ್ಷ ಕೋಟಿಯಿಂದ 205 ಲಕ್ಷಕೋಟಿ ಸಾಲ ಹೆಚ್ಚಾಗಿದೆ ಎಂದು ಸಿಎಂ ಆಕ್ರೋಶ ಹೊರಹಾಕಿದ್ದಾರೆ.