ಬಜೆಟ್‌ಗೂ ಮುನ್ನವೇ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆ ಮಾಡಿದೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 7 ರೂ. ಇಳಿಕೆಯಾಗಿದ್ದು, ಆ ಮೂಲಕ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಇಳಿಕೆ ಮಾಡಿವೆ. ಇದರಿಂದಾಗಿ ಹೋಟೆಲ್‌ಗಳು, ರೆಸ್ಟೋರೆಂಟ್ ಮಾಲೀಕರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಜಾಗತಿಕ ಕಚ್ಚಾ ತೈಲ ದರಗಳಲ್ಲಿನ ಬದಲಾವಣೆಯ ಆಧಾರದ ಮೇಲೆ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಇಳಿಕೆಯಾಗಿದ್ದು, ಗೃಹಬಳಕೆಯ LPG ಸಿಲಿಂಡರ್‌ಗಳ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ.
ಚೆನ್ನೈನಲ್ಲಿ ರೂ. 30 ಕಡಿತಗೊಂಡಿದ್ದು, ರೂ. 1960.50 ಇದ್ದ ದರವು ರೂ. 1,930 ಆಗಿದೆ. ಕೋಲ್ಕತ್ತಾದಲ್ಲಿ ರೂ. 1,911 ಇದ್ದ ವಾಣಿಜ್ಯ ಸಿಲಿಂಡರ್ ದರವು ಇಂದಿನಿಂದ ರೂ. 1,879 ಆಗಿದೆ. ಇನ್ನೂ ಸ್ಥಳೀಯ ತೆರಿಗೆಗಳನ್ನು ಆಧರಿಸಿ ವಾಣಿಜ್ಯ ಸಿಲಿಂಡರ್‌ಗಳ ದರ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿದೆ