ಹಾಸನ ಜಿಲ್ಲೆಯ ಕೃಷಿಕ ಸಂಘದ ಜಿಲ್ಲಾಧ್ಯಕ್ಷರಾಗಿ ಎಂಟಿ ರಂಗಸ್ವಾಮಿಯವರು ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ...ಕೃಷಿಕ ಸಂಘದ ಚುನಾವಣೆಯಲ್ಲಿ ಸುಮಾರು 10 ಮತಗಳನ್ನು ಪಡೆಯೋ ಮೂಲಕ ಮೊದಲ ಬಾರಿಗೆ ರಂಗಸ್ವಾಮಿ ಆಯ್ಕೆಯಾದ್ರು...
ನೂತನ ಕೃಷಿಕ ಸಂಘದ ಜಿಲ್ಲಾಧ್ಯಕ್ಷರಾಗಿರೋ ಎಂಟಿ ರಂಗಸ್ವಾಮಿಯವರ ಹಿನ್ನಲೆ ಏನು ಅನ್ನೋದನ್ನ ನೋಡೋದಾದ್ರೆ, ಇವರದ್ದು ಕೃಷಿಕ ಕುಟುಂಬ, ಬಾಲ್ಯದಿಂದಲೇ ಕೃಷಿಯಲ್ಲಿ ಆಸಕ್ತಿ ಹೊಂದಿದ್ದ ರಂಗಸ್ವಾಮಿಯವರಿಗೆ ಭೂಮಿ ತಾಯಿ ಕೈ ಹಿಡಿದ್ದಿದ್ದಾಳೆ, ಇವರು ಅರಕಲಗೂಡಿನ ಹೆಮ್ಮೆಯ ಕೃಷಿಕ ಎಂದೆ ಹೆಸರುವಾಸಿ, ಕೃಷಿಯ ಮೂಲಕವೇ ಹತ್ತಾರು ಪ್ರಶಸ್ತಿಗಳಿಗೆ ರಂಗಸ್ವಾಮಿಯವರು ಭಾಜನರಾಗಿದ್ದಾರೆ..ಈಗ ಕೃಷಿಕ ಸಂಘದ ಜಿಲ್ಲಾಧ್ಯಕ್ಷರಾಗಿ ಮೊಟ್ಟ ಮೊದಲ ಬಾರಿಗೆ ಆಯ್ಕೆಯಾಗಿರೋ ರಂಗಸ್ವಾಮಿಯವರ ಗೆಲುವಿಗೆ ಅರಕಲಗೂಡು ಕೃಷಿ ಸಮುದಾಯ ಹರ್ಷ ವ್ಯಕ್ತಪಡಿಸಿದೆ..ರಂಗಸ್ವಾಮಿಯವರ ಗೆಲುವು ಯಾವಾಗ ಖಚಿತವಾಯ್ತೋ ಅರಕಲಗೂಡಿನಲ್ಲಿ ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ..