ಕರ್ನಾಟಕ

ದೇಶದ ಮರು ನಿರ್ಮಾಣಕ್ಕಾಗಿ ಬೆಳಗಾವಿಯಲ್ಲಿ ಸಮಾವೇಶ ನಡೆಯಲಿದೆ

ಬಾಬಾಸಾಹೇಬ್ ಅಂಬೇಡ್ಕರ್, ಸಂವಿಧಾನಕ್ಕೆ ಬಿಜೆಪಿ ಅಪಮಾನಿಸುವ ಕೆಲಸ ಮಾಡುತ್ತಿದೆ. ಅಮಿತ್ ಶಾ ಅವರೇ ಅಂಬೇಡ್ಕರ್ ಬಗ್ಗೆ ಅಪಮಾನಿಸಿದ್ದಾರೆ. ಬಿಜೆಪಿ ನಾರಿ ವಿರೋಧಿ, ಕಿಸಾನ್ ವಿರೋಧಿ, ದಲಿತ ವಿರೋಧಿ. ಜೊತೆಗೆ ಒಬ್ಬ ಸಚಿವೆಗೆ ಬಿಜೆಪಿ ಎಂಎಲ್‌ಸಿ ಹೊಲಸು ಭಾಷೆಯನ್ನ ಬಳಸಿದೆ ಎಂದು ಕಿಡಿಕಾರಿದರು.

ಬೆಳಗಾವಿ : ಬೆಳಗಾವಿ ಹಿಂದೂಸ್ತಾನದ ಅವಿಸ್ಮರಣೀಯ ಸ್ಥಳವಾಗಿದೆ. ಮಹಾತ್ಮಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಅಧಿವೇಶನದಲ್ಲಿ ನಡೆದಿತ್ತು. 1924ರಲ್ಲಿ ನಡೆದ ಅಧಿವೇಶನ ಸ್ವಾತಂತ್ರ್ಯ ಕ್ಕಾಗಿ ಹೋರಾಟ ಆರಂಭವಾಗಿತ್ತು. ಇಡೀ ದೇಶದಲ್ಲಿ ಹೊಸ ಆಂದೋಲನಕ್ಕೆ ಬೆಳಗಾವಿಯಿಂದಲೇ ಗಾಂಧೀಜಿ ಚಾಲನೆ ನೀಡಿದ್ರು. ಜಾತಿ, ಧರ್ಮ ಬೇದ ಭಾವ ಅಳಸಿ ಹಾಕಿ, ಒಗ್ಗೂಡಿಸಿ ಸ್ವಾತಂತ್ರ್ಯ ಹೋರಾಟ ಆರಂಭವಾಯ್ತು ಎಂದು ಸುರ್ಜೇವಾಲಾ ಹೇಳಿದ್ದಾರೆ. 

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸುರ್ಜೇವಾಲಾ, ಈಗ ಮತ್ತೊಮ್ಮೆ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ನಡೆಯುತ್ತಿದೆ. ಡಿಸೆಂಬರ್ 26 ರಂದು ಎಐಸಿಸಿ ಕಾರ್ಯಕಾರಣಿ ಸಭೆ ನಡೆಯಲಿದೆ. ಡಿಸೆಂಬರ್ 27 ರಂದು ಜನ ಸಮಾವೇಶ ನಡೆಯಲಿದೆ. ಅಂದು ಗಾಂಧಿಯವರು ಸತ್ಯಾಗ್ರಹ, ಅಹಿಂಸೆ ದಾರಿಯಲ್ಲಿ ಸ್ವಾತಂತ್ರ್ಯ ಹೋರಾಟ ಮಾಡಿದ್ರು. ಈಗಲೂ ಸತ್ಯಾಗ್ರಹ ದಾರಿಯಲ್ಲಿ ಸಾಗಿ ಮತ್ತೊಮ್ಮೆ ಹೋರಾಟವನ್ನ ಬೆಳಗಾವಿಯಿಂದ ಆರಂಭವಾಗಲಿದೆ. ಮಹಾತ್ಮಾ ಗಾಂಧಿ ಅಧ್ಯಕ್ಷತೆ ವಹಿಸಿದ್ದ ಸ್ಥಳದಲ್ಲಿ ಎಐಸಿಸಿ ಕಾರ್ಯಕಾಣಿ ಸಭೆ ನಡೆಯಲಿದೆ. ಸುವರ್ಣ ವಿಧಾನಸೌಧದಲ್ಲಿ ಗಾಂಧಿ ಮೂರ್ತಿ ಅನಾವರಣ ಆಗಲಿದ್ದೇದು, ದೇಶದ ಮರು ನಿರ್ಮಾಣಕ್ಕಾಗಿ ಸಮಾವೇಶ ನಡೆಯಲಿದೆ. ಸಂವಿಧಾನವೇ ನಮಗೆ ಗ್ರಂಥವಾಗಿದ್ದು, ಬಿಜೆಪಿ ಬಾಬಾಸಾಹೇಬ್ ಅಂಬೇಡ್ಕರ್, ಸಂವಿಧಾನಕ್ಕೆ ಅಪಮಾನಿಸುವ ಕೆಲಸ ಮಾಡುತ್ತಿದೆ. ಅಮಿತ್ ಶಾ ಅವರೇ ಅಂಬೇಡ್ಕರ್  ಬಗ್ಗೆ ಅಪಮಾನಿಸಿದ್ದಾರೆ. ಬಿಜೆಪಿ ನಾರಿ ವಿರೋಧಿ, ಕಿಸಾನ್ ವಿರೋಧಿ, ದಲಿತ ವಿರೋಧಿ. ಜೊತೆಗೆ ಒಬ್ಬ ಸಚಿವೆಗೆ ಬಿಜೆಪಿ ಎಂಎಲ್‌ಸಿ ಹೊಲಸು ಭಾಷೆಯನ್ನ ಬಳಸಿದೆ ಎಂದು ಕಿಡಿಕಾರಿದರು.