ಚಿಕ್ಕಮಗಳೂರು: ಪೋಷಕರು ಎಷ್ಟು ಎಚ್ಚರವಾಗಿದ್ರೂ ಸಾಲೋದಿಲ್ಲ. ಅದ್ರಲ್ಲೂ ಮನೆಯಲ್ಲಿ ಪುಟ್ಟ ಮಕ್ಕಳಿದ್ದರಂತೂ ಎಷ್ಟು ಹುಷಾರಾಗಿದ್ರೂ ಕೂಡ ಕಡಿಮೆಯೇ. ಹೌದು, ಆಟವಾಡ್ತಿದ್ದ ಮಗು ನೀರಿನ ಬಕೆಟ್ಗೆ ಬಿದ್ದು ಪ್ರಾಣ ಬಿಟ್ಟಿದೆ. ಚಿಕ್ಕಮಗಳೂರಿನ ಎನ್.ಆರ್. ಪುರ ತಾಲೂಕಿನ ಮೀನುಕ್ಯಾಂಪ್ ರಾವೂರು ಗ್ರಾಮದಲ್ಲಿ ಇಂತಹದೊಂದು ದಾರುಣ ಘಟನೆ ನಡೆದಿದೆ.
ಪೂರ್ವಿ ಎಂಬ ಒಂದೂವರೆ ವರ್ಷದ ಮಗು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಪ್ರಾನ ಬಿಟ್ಟಿದೆ. ಡಿಸೆಂಬರ್ 19ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ