ಆಕೆ ಮುಖದಲ್ಲಿ ಎಂತಹ ಮಂದಹಾಸ.. ಆತನನ್ನ ಕಂಡರೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು. ಅವರು ಎಲ್ಲರನ್ನೂ ಕೂಡ ಸಮಾನವಾಗಿ ಕಾಣುತ್ತಾರೆ ಈ ರೀತಿಯ ಮಾತುಗಳನ್ನ ನಾವು ಆಗಾಗ ಕೇಳುತ್ತಿರುತ್ತೇವೆ. ಒಬ್ಬ ವ್ಯಕ್ತಿಯ ಬಗ್ಗೆ ಈ ರೀತಿಯ ಮಾತುಗಳು ಇನ್ನೊಬ್ಬ ವ್ಯಕ್ತಿಯ ಬಾಯಿಂದ ಬರುತ್ತಿವೆ ಎಂದರೆ ಅದು ಆ ವ್ಯಕ್ತಿಯ ಆಂತರ್ಯದಲ್ಲಿರುವ ಉತ್ತಮ ಗುಣಗಳಿಂದಾಗಿರುತ್ತದೆ.
ಪ್ರಸ್ತುತ ದಿನಗಳಲ್ಲಿ ಪ್ರೀತಿ, ಧಯೆ, ಸಹಾನುಭೂತಿ ಅನುಕಂಪಕ್ಕೆ ಜಾಗವೇ ಇಲ್ಲದಾಗಿದೆ. ಓಡುತ್ತಿರುವ ಜಗತ್ತಿನಲ್ಲಿ ಮನುಷ್ಯ ಕೂಡ ಒಂದು ಯಂತ್ರದಂತಾಗಿದ್ದಾನೆ. ಆದರೆ ಈ ಎಲ್ಲಾ ಅಡೆ-ತಡೆಗಳನ್ನೂ ದಾಟಿ ಮನಷ್ಯ ಮಾನವೀಯ ಗುಣಗಳನ್ನ ಬೆಳೆಸಿಕೊಂಡಿರಬೇಕು.
ಹಾಗಾದರೆ ಒಬ್ಬ ವ್ಯಕ್ತಿಯನ್ನ ಈತ ಒಳ್ಳೆಯವನು ಎಂದು ಗುರುತಿಸುವುದು ಹೇಗೆ ?
ಪ್ರೀತಿ
ಒಬ್ಬ ಮನುಷ್ಯನ ಪರಿಶುದ್ಧವಾದ ಆತ್ಮದೊಳಗೆ ಅಗಾಧವಾದ ಪ್ರೀತಿ ತುಂಬಿರುತ್ತದೆ. ಆಕೆ ಅಥವ ಆತ ಸಕಲ ಜೀವರಾಶಿಯಲ್ಲೂ ಪ್ರೇಮವನ್ನ ಕಾಣುತ್ತಾನೆ.. ಆ ಪ್ರೀತಿಯಿಂದಲೇ ಸದಾ ನವ ನವೀನವಾಗಿರುತ್ತಾನೆ. ಪ್ರತಿಯೊಬ್ಬರನ್ನೂ ಪ್ರೀತಿಯ ಮಾತುಗಳಿಂದ ತನ್ನತ್ತ ಸೆಳೆಯುತ್ತಾನೆ. ಹಿರಿಯರು-ಕಿರಿಯರನ್ನ ತನ್ನವರೆಂದು ನೋಡಿತ್ತಾನೆ.. ಈ ಗುಣವಿರುವ ವ್ಯಕ್ತಿ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ.
ಧಯೆ
ಧಯೆಯೇ ಧರ್ಮದ ಮೂಲವಯ್ಯ ಎಂಬಂದತೆ ವ್ಯಕ್ತಿ ಪ್ರತಿಬ್ಬರ ಮೇಲೆಯೂ ಸಹಾನುಭೂತಿ, ಅನುಕಂಪ ಹೊಂದಿರುತ್ತಾನೆ. ಅಸಹಾಯಕರು, ಅಸಮರ್ಥರು ಯಾರನ್ನೂ ಕಡೆಗಣಿಸದೇ ಅನುರಾಗಿಯಾಗಿರುತ್ತಾನೆ. ಅಷ್ಟೇ ಅಲ್ಲ ಯಾವ ವ್ಯಕ್ತಿ ಇನ್ನೊಬ್ಬರ ನೋವು-ನಲಿವು, ಕಷ್ಟ-ಸುಖಕ್ಕೆ ಕಿವಿಗೊಟ್ಟು ಕೇಳುತ್ತಾ.. ಸಹಾಯಕ್ಕೆ ಕೈ ಚಾಚುತ್ತಾನೋ ಅವನ ಆತ್ಮ ತುಂಬಾನೆ ಪರಿಶುದ್ಧವಾಗಿರುತ್ತದೆ.
ಜೀವನವನ್ನ ಒಂದೇ ಸಮನಾಗಿ ನೋಡುವುದು
ಬದುಕು ಎಂದಮೇಲೆ ಏರಿಳಿತಗಳು ಸರ್ವೇ ಸಾಮಾನ್ಯ. ಹಾಗಾಗಿ ಜೀವನವೇ ಒಂದು ಪಾಠ. ನಿತ್ಯವು ಕಲಿಯುವುದು ಇದ್ದೇ ಇದೆ. ಇಲ್ಲಿ ಪರಿಸ್ಥಿತಿಗಳು ನಮ್ಮ ಆತ್ಮಸ್ಥೈರ್ಯವನ್ನ ಹೆಚ್ಚಿಸುತ್ತವೆ ಎಂದುಕೊಂಡು ಕಷ್ಟದಲ್ಲಿ ಕುಗ್ಗದೇ.. ಸಂಪತ್ತಿದ್ದಾಗ ಹಿಗ್ಗದೇ ಬದುಕು ಬಂದಂತೆ ಸ್ವೀಕರಿಸುವಾತ ಉತ್ತಮನಾಗಿರುತ್ತಾನೆ.
ಆಧ್ಯಾತ್ಮಿಕತೆ
ಧ್ಯಾನ, ಯೋಗ, ಪ್ರಣಾಯಾಮದ ಮೂಲಕ ಮನಸ್ಸನ್ನ ಶಾಂತವಾಗಿಟ್ಟುಕೊಳ್ಳುವ ವ್ಯಕ್ತಿ ತನ್ನೆಲ್ಲ ಭಾವನೆಗಳನ್ನ ನಿಯಂತ್ರಣದಲ್ಲಿಟ್ಟುಕೊಂಡಿರುತ್ತಾನೆ. ಪ್ರಶಾಂತ ಮನಸ್ಸು ವ್ಯಕ್ತಿಯನ್ನ ವಿಚಲಿತವಾಗಲು ಬಿಡದೇ.. ಭಾವಗಳಲ್ಲಿ ಬಂಧಿಯಾಗದೇ ವಾಸ್ತವದಲ್ಲಿ ಬದುಕಲು ಸಹಕಾರಿಯಾಗಿರುತ್ತದೆ.. ಈ ಗುಣಗಳನ್ನ ಬೆಳೆಸಿಕೊಂಡಿರಯವ ವ್ಯಕ್ತಿಯಲ್ಲಿ ಒಳ್ಳೆತನ ಮೈಗೂಡಿರುತ್ತದೆ.
ವಿಮರ್ಶೆಗೆ ಹೋಗುವುದಿಲ್ಲ
ಉತ್ತಮ, ಸದ್ಗುಣಗಳಿರುವ ವ್ಯಕ್ತ ಒಮ್ಮೆಲೆ ಯಾರನ್ನೂ ಜಡ್ಜ್ ಮಾಡುವುದಿಲ್ಲ. ಅವರು ಹೀಗೆ.. ಇವರು ಹೀಗಲ್ಲ. ನಾನೇ ಸರಿ ಎಂಬ ಅಭಿಪ್ರಾಯಕ್ಕೆ ಬರುವುದಿಲ್ಲ. ಎಲ್ಲರ ಅಭಿಪ್ರಾಯಕ್ಕೂ ಮನ್ನಣೆ ನೀಡಿ, ತನಗೇನು ಬೇಕು ಅದಷ್ಟನ್ನೇ ಸ್ವೀಕರಿಸಿ ಮುಂದೆ ಹೋಗುತ್ತಾನೆ.
ನಿಸ್ವಾರ್ಥ
ಸ್ವಾರ್ಥವಿಲ್ಲದ ವ್ಯಕ್ತಿ ಆತ್ಮವು ಎಂದಿಗೂ ಇನ್ನೊಬ್ಬರ ಕೆಡುಕನ್ನ ಬಯಸುವುದಿಲ್ಲ. ಆತ ಉದ್ದಾರದ ಜೊತೆಜೊತೆಗೆ ಇನ್ನೊಬ್ಬರ ಏಳಿಗೆಯ ಬಗ್ಗೆಯೂ ಚಿಂತೆ ಮಾಡುತ್ತಾನೆ. ಯಾರ ಗೆಲುವಿಗೂ ಅಸೂಹೆ ಪಡದೇ. ಎಲ್ಲರ ಖುಷಿಯಲ್ಲಿ ತಾನೂ ಭಾಗಿಯಾಗುತ್ತಾನೆ.
ಒಬ್ಬ ಒಳ್ಳೆಯ ವ್ಯಕ್ತಿಯ ಗುಣ-ನಡತೆಗಳನ್ನ ತಿಳಿದುಕೊಳ್ಳುವ ಆತನಲ್ಲಿ ಈ ಗುಣಗಳಿದ್ದರೆ ಸಾಕು.. ಇವುಗಳಿಂದಲೇ ಆತನ ಹೃದಯ ವೈಶಾಲ್ಯತೆಯನ್ನ ತಿಳಿದುಕೊಳ್ಳಬಹುದು