ತೆಲುಗು ಹಿರಿಯ ನಟ ಮಂಚು ಮೋಹನ್ ಬಾಬು ಕೊನೆಗೂ ಪತ್ರಕರ್ತರ ಬಳಿ ಕ್ಷಮೆ ಯಾಚಿಸಿದ್ದಾರೆ. ಕಳೆದ ವಾರ ಪತ್ರಕರ್ತರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಸುದ್ದಿಯಾಗಿದ್ದ ಮೋಹನ್ ಬಾಬು ಅವರು ಇದೀಗ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತನ ಆರೋಗ್ಯ ವಿಚಾರಿಸಿದ್ದಾರೆ. ನಟನ ಕೌಟುಂಬಿಕ ಕಲಹದ ವಿಚಾರವಾಗಿ ಪ್ರಶ್ನೆ ಕೇಳ್ತಿದ್ದ ಪತ್ರಕರ್ತರಿಂದ ಮೈಕ್ ಕಿತ್ತುಕೊಂಡು ಹಲ್ಲೆ ನಡೆಸಿದ್ದರು. ಹಿರಿಯ ನಟನ ವರ್ತನೆಗೆ ಭಾರೀ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಗಾಯಗೊಂಡಿರುವ ಪತ್ರಕರ್ತ ಹೈದರಾಬಾದ್‌ನ ಯಶೋದಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೀಗ ಪತ್ರಕರ್ತನ ಭೇಟಿಯಾಗಿ ತೆಲುಗ ನಟ ಮೋಹನ್ ಬಾಬು ಕ್ಷಮೆ ಕೇಳಿದ್ದಾರೆ. ಮೋಹನ್ ಬಾಬು ವರ್ತನೆ ಖಂಡಿಸಿ ಪತ್ರಕರ್ತರು ದೊಡ್ಡ ಮಟ್ಟದಲ್ಲಿ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಮತ್ತೊಂದೆಡೆ ಪೊಲೀಸರು ಮೋಹನ್ ಬಾಬು ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ರು. ಮೋಹನ್ ಬಾಬು ಈ ಪ್ರಕರಣದ ವಿಚಾರಣೆಗೆ ಹಾಜರಾಗಿಲ್ಲ. ಈ ಮಧ್ಯೆ ಇದೀಗ ತೆಲುಗು ಹಿರಿಯ ನಟ ಮಂಚು ಮೋಹನ್ ಬಾಬು ಕೊನೆಗೂ ಪತ್ರಕರ್ತನ ಬಳಿ ಕ್ಷಮೆ ಯಾಚಿಸಿದ್ದಾರೆ.