ಸ್ಪೆಷಲ್ ಸ್ಟೋರಿ

ಪ್ರೇಯಸಿ ಹತ್ಯೆ ಮಾಡಿ ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ವಾರಣಸಿಯಲ್ಲಿ ಸುತ್ತಾಟ..

ಪ್ರೇಯಸಿಯನ್ನು ಹತ್ಯೆಗೈದು ಪರಾರಿಯಾಗಿದ್ದ ಹಂತಕ ಪೊಲೀಸ್ ವಶಕ್ಕೆ

ಇಂದಿರಾನಗರದ ಹೋಟೆಲ್ ಒಂದರಲ್ಲಿ ಪ್ರೇಯಸಿಯನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ದೇವನಹಳ್ಳಿಯಲ್ಲಿ ಕೊನೆಗೂ ಸೆರೆ ಸಿಕ್ಕಿದ್ದಾನೆ, ವಶಕ್ಕೆ ಪಡೆಯಲಾದ ಆರೋಪಿಯನ್ನು ಆರವ್ ಹನೋಯ್ ಎಂದು ಗುರುತಿಸಲಾಗಿತ್ತು. ಆರೋಪಿ ತನ್ನ ಪ್ರೇಯಸಿ ಮಾಯ ಗೊಗಾಯ್ ಎಂಬಾಕೆಯನ್ನು ಭೀಕರವಾಗಿ ಹತ್ಯೆ ಮಾಡಿದ್ದ. ಆತನ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿತ್ತು.
ಪ್ರೇಯಸಿಯನ್ನು ಹತ್ಯೆಗೈಯ್ಯಲು ಆರೋಪಿ ಹಗ್ಗ ಹಾಗೂ ಚಾಕುವನ್ನು ಆರ್ಡರ್ ಮಾಡಿ ಹೊಟೆಲ್‌ಗೆ ತರಿಸಿಕೊಂಡಿದ್ನಂತೆ. ಕೊಲೆಗಾರನ ಹಿನ್ನಲೆ ಏನು ಅನ್ನೋದನ್ನ ನೋಡೋದಾದ್ರೆ, ಆತ ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದು,  ಖಾಸಗಿ ಕಂಪನಿಯಲ್ಲಿ ಇಂಟರ್ನ್‌ಶೀಪ್ ಮಾಡುತ್ತಿದ್ನಂತೆ. ಇಬ್ಬರೂ ಆಪ್ ಮೂಲಕ ಪರಿಚಯ ಆಗಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಪ್ರೇಯಸಿಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಶವದ ಬಳಿ ಎರಡು ದಿನಗಳ ಕಾಲ ಕಳೆದಿದ್ದಾನೆ, ಬಳಿಕ ಅಲ್ಲಿಂದ ಪರಾರಿಯಾಗಿದ್ದ. ಆರೋಪಿ ಹೋಟೆಲ್‌ನಲ್ಲೇ ಶವ ಬಿಟ್ಟು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದವರೆಗೂ ಹೋಗಿ. ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಅಲ್ಲಿಂದ ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ವಾರಣಸಿಗೆ ಹೋಗಿದ್ದ. ಅಲ್ಲಿಂದ ಕೊನೆಗೆ ದಾರಿ ಕಾಣದೆ ದೇವನಹಳ್ಳಿಗೆ ಬಂದಿದ್ದಾನೆ. ಈ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.