ಕರ್ನಾಟಕ
ಎಲ್ಲಾ ಅಪರಾಧಿಗಳು ಜೀವ ಭಯ ಇದೆ ಅಂತಾ ಹೇಳ್ತಾರೆ ; ಸಿಎಂ ಸಿದ್ದರಾಮಯ್ಯ
ಮಂಡ್ಯದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಿಟಿ ರವಿಯವರು ನಾನು ಹೇಳಿದ್ದು ಸುಳ್ಳು, ನಾನು ತಪ್ಪು ಮಾಡಿದ್ದೀನೀ, ಅವಾಚ್ಯ ಶಬ್ಧಗಳಿಂದ ಮಾತಾಡಿದ್ದೀನಿ ಅಂತಾ ಒಪ್ಪಿಕೊಳ್ತಾರ ಎಂದು ಕಿಡಿಕಾರಿದ್ದಾರೆ.
ಮಂಡ್ಯ : ಒಬ್ಬ ಹೆಣ್ಣುಮಗಳಿಗೆ ಬಹಳ ತುಚ್ಚೀಕರಣವಾಗಿ, ಅವಹೇಳನಕಾರಿಯಾಗಿ ಮಾತಾಡಿದ್ರು ಕೂಡ ಸಪೋರ್ಟ್ ಮಾಡ್ತಾರ ಅವರು ಎಂದು ಸಿಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ,
ಸಿಟಿ ರವಿಯವರು ನಾನು ಹೇಳಿದ್ದು ಸುಳ್ಳು, ನಾನು ತಪ್ಪು ಮಾಡಿದ್ದೀನೀ, ಅವಾಚ್ಯ ಶಬ್ಧಗಳಿಂದ ಮಾತಾಡಿದ್ದೀನಿ ಅಂತಾ ಒಪ್ಪಿಕೊಳ್ತಾರ ಎಂದು ಕಿಡಿಕಾರಿದ್ದಾರೆ.
ಜೀವ ಭಯ ಇದೆ ಅನ್ನೋ ಸಿ.ಟಿ. ರವಿ ಹೇಳಿಕೆ ವಿಚಾರಕ್ಕು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಾ ಅಪರಾಧಿಗಳು ಜೀವ ಭಯ ಇದೆ ಅಂತಾ ಹೇಳ್ತಾರೆ. ಆಗಂತಾ ಪ್ರಾಸಿಕ್ಯೂಟ್ ಮಾಡೋ ಹಾಗಿಲ್ವ. ಸಿ.ಟಿ.ರವಿ ಹಿತದೃಷ್ಟಿಯಿಂದಲೇ ಪೊಲೀಸರು ಓಡಾಡಿಸಿದ್ದಾರೆ. ಜನ ಗಲಾಟೆ ಮಾಡ್ತಾರೆ ಅಂತಾ ಸುತ್ತಾಡಿಸಿದ್ದಾರೆ ಎಂಸು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.