ಕರ್ನಾಟಕ
ವೈದ್ಯರ ನಿರ್ಲಕ್ಮ್ಯ ಆರೋಪ ; ಆಸ್ಪತ್ರೆಯಲ್ಲಿ ಬಾಲಕಿ ಸಾವು
ಶಸ್ತ್ರಚಿಕಿತ್ಸೆ ಮಾಡಿದ್ದ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಬಾಲಕಿ ಸಾವು ಎಂದು ಆರೋಪಿಸಿ, ಜನತಾ ನಗರದ ಆಸ್ಪತ್ರೆ ಮುಂದೆ ಬಾಲಕಿ ಪೋಷಕರು ಹಾಗೂ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ.
ಮೈಸೂರು : ವೈದ್ಯರ ನಿರ್ಲಕ್ಷ್ಯ ಆರೋಪ ಅನಾರೋಗ್ಯದಿಂದ ಆಸ್ಪತ್ರೆಗೆ ದಾಕಲಾಗಿದ್ದ ಬಾಲಕಿ ಮೃತೊಟ್ಟಿದ್ದಾಳೆ. ಜನತಾ ನಗರದ ನಿವಾಸಿ ಲಕ್ಷ್ಮಿ(14) ಎಂಬ ಬಾಲಕಿ ಹೊಟ್ಟೆ ನೋವಿನಿಂದ ಡಿಸೆಂಬರ್ 19ರಂದು ಜನತಾ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. 20 ರಂದು ಶಸ್ತ್ರಚಿಕಿತ್ಸೆ ನೀಡಿ, ಬಳಿಕೆ 21 ರಂದು ಮತ್ತೊಂದು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಇಂದು ಬೆಳಗಿನ ಜಾವ ಲಕ್ಷ್ಮಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಶಸ್ತ್ರಚಿಕಿತ್ಸೆ ಮಾಡಿದ್ದ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಬಾಲಕಿ ಸಾವು ಎಂದು ಆರೋಪಿಸಿ, ಜನತಾ ನಗರದ ಆಸ್ಪತ್ರೆ ಮುಂದೆ ಬಾಲಕಿ ಪೋಷಕರು ಹಾಗೂ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.