ಅಂಬೇಡ್ಕರ್ ಕುರಿತು ಕೇಂದ್ರ ಸಚಿವ ಅಮಿತ್ ಶಾ ನೀಡಿದ್ದಾರೆ ಎನ್ನುವ ಹೇಳಿಕೆ ಕುರಿತು ಆಕ್ರೋಶ ಹೆಚ್ಚಾಗಿದೆ.. ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ವಿಪಕ್ಷ ನಾಯಕರು ಸೆಷನ್‌ಗೂ ಮುನ್ನ ಪ್ರತಿಭಟನೆ ನಡೆಸಿದ್ದಾರೆ... ʼʼಯಾವಾಗ ನೋಡಿದರೂ ಅಂಬೇಡ್ಕರ್.. ಅಂಬೇಡ್ಕರ್ ಎಂದು ಹೇಳುವುದು ಒಂದು ಶೋಕಿಯಾಗಿ ಬಿಟ್ಟಿದೆ.. ಅಂಬೇಡ್ಕರ್ ಬದಲಿಗೆ ದೇವರ ಹೆಸರನ್ನು ಜಪಿಸಿದ್ದರೆ ಇಷ್ಟು ಹೊತ್ತಿಗೆ ಸ್ವರ್ಗವಾದರೂ ಪ್ರಾಪ್ತಿಯಾಗಿ ಬಿಡುತ್ತಿತ್ತು’’ ಎಂದು ಅಮಿತ್ ಶಾ ಹೇಳಿಕೆ ನೀಡಿದ್ದಾರೆಂದು ಇಂಡಿಯಾ ಕೂಟ ಅಕ್ರೋಶ ವ್ಯಕ್ತಪಡಿಸಿದೆ.. ದೆಹಲಿಯ ಪಾರ್ಲಿಮೆಂಟ್‌ನಲ್ಲಿರುವ ಅಂಬೇಡ್ಕರ್ ಪ್ರತಿಮೆ ಎದುರು ಬಾಬಾ ಸಾಹೇಬರ ಭಾವಚಿತ್ರ ಹಿಡಿದು ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದ್ದಾರೆ.. ದೇಶದ ಜನರ ಕ್ಷಮೆ ಕೇಳಿ, ಅಮಿತ್ ಶಾ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.. ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಪತಿಭಟನೆ ನಡೆದಿದ್ದು, ಪ್ರಿಯಾಂಕಾ ಗಾಂಧಿ ಸೇರಿ ಹಲವು ಸದಸ್ಯರು ಧರಣಿಯಲ್ಲಿ ಭಾಗಿಯಾಗಿದ್ದರು..