ಸ್ಪೆಷಲ್ ಸ್ಟೋರಿ

ಚೈತ್ರಾ ಮಾತಿನ ಭರಾಟೆಗೆ, ಭವ್ಯಾ ತಮಟೆ ಏಟು..!

ಬಿಗ್‌ಬಾಸ್‌ಮನೆಯಲ್ಲಿ ಇಂದು ಭವ್ಯ ಚೈತ್ರ ಕಾಲ ಎನ್ನುವಂತಾಗಿದೆ, ಇಲ್ಲಿ ಭವ್ಯಾ ಫಿಸಿಕಲಿ ಸ್ಟ್ರಾಂಗ್‌ಆದ್ರೆ, ಚೈತ್ರಾ ಮಾತಲ್ಲಿ ಪ್ರೋ ಪ್ಲೇಯರ್‌

ಬಿಗ್‌ಬಾಸ್‌ಮನೆಯಲ್ಲಿ ಇಂದು ಭವ್ಯ ಚೈತ್ರ ಕಾಲ ಎನ್ನುವಂತಾಗಿದೆ, ಇಲ್ಲಿ ಭವ್ಯಾ ಫಿಸಿಕಲಿ ಸ್ಟ್ರಾಂಗ್‌ಆದ್ರೆ, ಚೈತ್ರಾ ಮಾತಲ್ಲಿ ಪ್ರೋ ಪ್ಲೇಯರ್‌, ಮಾತು ಮನೆ ಕೆಡಸ್ತು ಅನ್ನೋ ಹಾಗೆ, ಬಿಗ್‌ಮನೆಯಲ್ಲಿ ಚೈತ್ರಾ ಮಾತು ಭವ್ಯಾ ಟಾಸ್ಕ್‌ ಕೆಡಿಸಿದೆ, ಕಲರ್ಸ್‌ಕನ್ನಡದಲ್ಲಿ ಇಂದು (ಶುಕ್ರವಾರ) ಬಿಡುಗಡೆಯಾಗಿರೋ ಪ್ರೋಮೋದಲ್ಲಿ ಚೈತ್ರಾ ಹಾಗೂ ಭವ್ಯಾ ಗೌಡ ಮಧ್ಯೆ ಮಾತಿನ ಸಮರ ತಾರಕ್ಕಕ್ಕೇರಿದೆ, ಇಲ್ಲಿ ಚೈತ್ರಾ ಎಂದಿನಂತೆ ತಮ್ಮ ಮಾತಿನ ಮೂಲಕ ಭವ್ಯಾ ಹಾಗೂ ತ್ರಿವಿಕ್ರಂ ಆಟವನ್ನ ಕೆಡಿಸೋದಕ್ಕೆ ಮುಂದಾಗ್ತಾರೆ, ಇದರಿಂದ ರವ ರವ ಕೆರಳಿದ ಭವ್ಯಾ ಗೌಡ ಅಲ್ಲೇ ಇದ್ದ ಮೇಜನ್ನ ತಮಟೆ ತಟ್ಟಿದ ಹಾಗೆ ತಟ್ಟಿ ಬಿಟ್ಟಿದ್ದಾರೆ, ಹೊಡೆದ ರಭಸಕ್ಕೆ ಭವ್ಯಾಗೌಡ ಹಾಕಿದ್ದ ಗಾಜಿನ ಬಳೆಗಳು ಪುಡಿ ಪುಡಿಯಾಗಿದೆ,

ಮನೆಯೊಂದು ಮೂರು ಬಾಗಿಲು ಅನ್ನೋ ಹಾಗೆ, ಬಿಗ್‌ಮನೆ ಎರಡು ಬಾಗಿಲಾಗಿದೆ, ಉಗ್ರಂ ಮಂಜು ತಂಡ ಒಂದು ಕಡೆಯಾದ್ರೆ ಮತ್ತೊಂದು ಕಡೆ ಮೋಕ್ಷಿತಾ ಪೈ ತಂಡ.


ಸ್ನೇಹಿತರೇ ಈ ಎರಡೂ ತಂಡಗಳು ಗೆಲುವಿಗಾಗಿ ಜಿದ್ದಾ ಜಿದ್ದಿಗೆ ಬಿದ್ದಿದೆ, ಉಗ್ರಂ ಮಂಜು ತಂಡದಲ್ಲಿ ನಾಯಕ ಮಂಜು ಅಗ್ರಸಿವ್‌ಪ್ಲೇಯರ್‌ಆದ್ರೆ ಮತ್ತೊಂದು ಟೀಂ ನಲ್ಲಿ ವೈಲ್ಡ್‌ಕಾರ್ಡ್‌ಎಂಟ್ರಿ ರಜತ್‌ ವೈಲ್ಡ್‌ಪ್ಲೇಯರ್‌ ಆಗಿ ಆಡ್ತಿದ್ದಾರೆ, ಬಿಗ್‌ಮನೆಗೆ ಎಂಟ್ರಿ ಕೊಟ್ಟಾಗ ತ್ರಿವಿಕ್ರಂನನ್ನ ಟಾರ್ಗೆಟ್‌ಮಾಡಿದ್ದ ರಜತ್‌ಗೆ ಇಂದು ಉಗ್ರಂ ಮಂಜು ಟಾರ್ಗೆಟ್‌ಆಗಿದ್ದಾರೆ, ಇಲ್ಲಿ ರಜತ್‌ಮಂಜಣ್ಣನನ್ನ ಟಾರ್ಗೆಟ್‌ಮಾಡೋದಕ್ಕೆ ಕಾರಣ, ಉಗ್ರಂ ಮಂಜು ರಜತ್‌ನನ್ನ ಕ್ಯಾಪ್ಟನ್ಸಿ ಓಟದಿಂದ ಹೊರಗಟ್ಟಿದ್ದು..
ಇವತ್ತಿನ ಟಾಸ್ಕ್‌ನಿಜಕ್ಕೂ ಮಜಾ ಇದೆ ಕಂಡ್ರಿ, ಎರಡೂ ತಂಡದ ನಾಯಕರ ಕಣ್ಣಿಗೆ ಬಟ್ಟೆ ಕಟ್ಟಿ ಬಂಧಿಸಲಾಗಿದೆ, ಯಾವ ತಂಡ ಹೆಚ್ಚಿನ ಟಾಸ್ಕ್‌ಗೆಲ್ಲತ್ತೋ ಆ ತಂಡದ ನಾಯಕ ಬಂಧ ಮುಕ್ತನಾಗುತ್ತಾನೆ, ಜೊತೆಗೆ ಕ್ಯಾಪ್ಟನ್ಸಿ ಓಟದಲ್ಲಿ ಗೆದ್ದ ತಂಡದ ಸದಸ್ಯರು ಇರ್ತಾರೆ, ಹೀಗಾಗಿ ಈ ಎರಡೂ ತಂಡಗಳು ಗೆಲುವಿಗಾಗಿ ಹಗ್ಗ ಜಗ್ಗಾಟಕ್ಕೆ ಇಳಿದಿರೋದು ನೀವು ಇವತ್ತಿನ ಪ್ರೋಮೋದಲ್ಲಿ ಕಾಣಬಹುದು, ನೋಡೋಣ ಇವತ್ತಿನ ಎಪಿಸೋಡ್‌ನಲ್ಲಿ ಯಾವ ತಂಡ ಗೆಲುವನ್ನ ಸಾಧಿಸುತ್ತೆ ಅಂತಾ..