ಕರ್ನಾಟಕ

ಮದ್ಯಪ್ರಿಯರಿಗೆ ಬಿಗ್‌ ಶಾಕ್‌.. ನಾಳೆ ʼಎಣ್ಣೆʼ ಸಿಗೋದಿಲ್ಲ..!

ನಾಳೆ ರಾಜ್ಯಾದ್ಯಂತ ಎಲ್ಲ ರೀತಿಯ ಮದ್ಯದ ಅಂಗಡಿಗಳು ಬಂದ್ ಇರಲಿದ್ದು, ಎಲ್ಲೂ ಕೂಡ ʼಎಣ್ಣೆʼಸಿಗೋದಿಲ್ಲ. ಹೀಗಾಗಿ ನಾಳೆ ʼಎಣ್ಣೆʼ ಕಿಕ್‌ನೊಂದಿಗೆ ರಿಲ್ಯಾಕ್ಸ್‌ ಮಾಡೋಣ, ಪಾರ್ಟಿ ಅಂತಾ ಚಿಲ್‌ ಮಾಡೋಣ ಅನ್ನೋರಿಗೆ ವಾರದ ಮಧ್ಯೆಯೇ ಶಾಕ್‌ ಎದುರಾಗಿದೆ.

ಮದ್ಯಪ್ರಿಯರಿಗೆ ಬಿಗ್‌ ಶಾಕ್‌ ಎದುರಾಗಿದೆ. ನಾಳೆ ರಾಜ್ಯದಲ್ಲಿ ಕಿಕ್‌ ಪ್ರಿಯರಿಗೆ ಡ್ರೈ ಡೇ ಎದುರಾಗಿದೆ. ಏನೇ ಆಗ್ಲಿ ನಾಳೆ ಕಿಕ್‌ ಕೊಡೋ ʼಎಣ್ಣೆʼ ಜೊತೆ ಪಾರ್ಟಿ ಅಂತಾ ಚಿಲ್‌ ಮಾಡೋಣ ಅನ್ನೋರಿಗೆ ಶಾಕ್‌ ಕೊಟ್ಟಿದೆ ಮದ್ಯದಂಗಡಿ ಮಾಲೀಕರ ಅಸೋಸಿಯೇಷನ್‌.

ನವೆಂಬರ್ 20ರಂದು ಅಂದರೆ ನಾಳೆ ರಾಜ್ಯದಲ್ಲಿ ಮದ್ಯದಂಗಡಿಗಳು ಬಂದ್ ಆಗಲಿವೆ. ಅಬಕಾರಿ ಇಲಾಖೆ ಅಧಿಕಾರಿಗಳು ಕೊಡುತ್ತಿರುವ ಕಿರುಕುಳದ ವಿರುದ್ಧ ಬೇಸತ್ತಿರುವ ಮದ್ಯ ಮಾರಾಟಗಾರರ ಸಂಘ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದು, ಪ್ರತಿಭಟನೆಗೆ ಮುಂದಾಗಿದೆ. ಹಣ ವಸೂಲಿ, ಲೈಸೆನ್ಸ್ ನವೀಕರಣಕ್ಕೆ ಲಂಚ ಸೇರಿ ಅನೇಕ ರೀತಿಯಲ್ಲಿ ತೊಂದರೆ ಕೊಡುತ್ತಿದ್ದು, ಇದರ ವಿರುದ್ಧ ಮದ್ಯದಂಗಡಿ ಬಂದ್ ಮಾಡಿ ಪ್ರತಿಭಟನೆ ಮಾಡಲು ಮುಂದಾಗಿವೆ.. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಳೆ ರಾಜ್ಯಾದ್ಯಂತ ಬಂದ್‌ಗೆ ಮದ್ಯ ಮಾರಾಟಗಾರರ ಸಂಘ ನಿರ್ಧರಿಸಿದೆ. ಒಟ್ಟಿನಲ್ಲಿ ನಾಳೆ ರಾಜ್ಯಾದ್ಯಂತ ಎಲ್ಲ ರೀತಿಯ ಮದ್ಯದ ಅಂಗಡಿಗಳು ಬಂದ್ ಇರಲಿದ್ದು, ಎಲ್ಲೂ ಕೂಡ ʼಎಣ್ಣೆʼಸಿಗೋದಿಲ್ಲ. ಹೀಗಾಗಿ ನಾಳೆ ʼಎಣ್ಣೆʼ ಕಿಕ್‌ನೊಂದಿಗೆ ರಿಲ್ಯಾಕ್ಸ್‌ ಮಾಡೋಣ, ಪಾರ್ಟಿ ಅಂತಾ ಚಿಲ್‌ ಮಾಡೋಣ ಅನ್ನೋರಿಗೆ ವಾರದ ಮಧ್ಯೆಯೇ ಶಾಕ್‌ ಎದುರಾಗಿದೆ.