ಈ ವಾರ ಬಿಗ್ ಮನೆಯಲ್ಲಿ ಸುದ್ದಿ ಆಗೋರು ಎರಡು ಸುದ್ದಿ ವಾಹಿನಿ ತೆರದಿದ್ದಾರೆ, ಹೌದು ಬಿಗ್ ಮನೆ ಈಗ ನ್ಯೂಸ್ ಚಾನಲ್ಗಳಾಗಿವೆ, ಒಂದು ಎಮ್ ಎಮ್ ಟಿವಿ ಮತ್ತೊಂದು ಡಿ ಡಿ ಟಿ.ವಿ ಅಂತೇಳಿ ಹೆಸರಿಡಲಾಗಿದೆ, ಈ ಚಾನಲ್ನಲ್ಲಿ ನ್ಯೂಸ್ ಓದೋದು, ಅಡುಗೆ ಕಾರ್ಯಕ್ರಮ ಹೀಗೆ ಮನರಂಜನೆಯ ಹತ್ತು ಹಲವು ಆಯಾಮಗಳೊಂದಿಗೆ ಈ ವಾರ ಬಿಗ್ ಮನೆಯ ಸ್ಪರ್ಧಿಗಳು ಅಖಾಡಕ್ಕೆ ಇಳಿದ್ದಿದ್ದಾರೆ, ಈ ವಾರ ಮತ್ತೊಂದು ವಿಷಯ ಏನಪ್ಪ ಅಂದ್ರೆ ಈ ಎರಡೂ ಚಾನಲ್ಗಳಲ್ಲಿ ಯಾವ ಚಾನಲ್ ಚನ್ನಾಗಿ ಮೂಡಿ ಬಂದಿದೆ ಎಂದು ಬಿಗ್ ಮನೆ ಮಂದಿ ಡಿಸೈಡ್ ಮಾಡ್ತಿಲ್ಲಾ ಬದಲಾಗಿ ವೀಕ್ಷಕರಿಗೆ ಈ ಅಭಿಪ್ರಾಯ ತಿಳಿಸೋದಕ್ಕೆ ಸೂಚಿಸಲಾಗಿದೆ, ಅದು ಹೇಗೆ ಅಂತೀರಾ..? ಈ ಹೇಳ್ತೀವಿ ನೋಡಿ..
ಹೌದು ನಿಮಗೆ ಯಾವ ಚಾನಲ್ ಇಷ್ಟವಾಯಿತು ಅನ್ನೋದನ್ನ ವೀಕ್ಷಕರು ನಿರ್ಧಾರ ಮಾಡಬೇಕಿದೆ, ಜಿಯೋ ಸಿನಿಮಾ ಆಪ್ನಲ್ಲಿ ತಮ್ಮ ಮೆಚ್ಚಿನ ಟಿವಿ ಚಾನಲ್ ಯಾವುದು ಅಂತೇಳಿ ಜನಗಳೇ ವೋಟ್ ಮಾಡೋ ಮುಖಾಂತರ ಆರಿಸಿಕೊಳ್ತಾರೆ, ಬಿಗ್ ಬಾಸ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಅತೀ ಹೆಚ್ಚು ಮನರಂಜನೆ ಕೊಟ್ಟ ಚಾನಲ್ ಯಾವುದು ಅನ್ನೋದನ್ನ ವೀಕ್ಷಕರು ನಿರ್ಧಾರ ಮಾಡಲಿದ್ದಾರೆ..