ದೇಶ

ದೇಗುಲ ಬೆನ್ನಲ್ಲೇ ಭಗ್ನಗೊಂಡಿರುವ ಮೂರ್ತಿಗಳು ಪತ್ತೆ

ಉತ್ತರಪ್ರದೇಶದ ಸಂಭಾಲ್‌ ಜಿಲ್ಲೆಯಲ್ಲಿ ಒತ್ತುವರಿ ತೆರವು ವೇಳೆ ಪತ್ತೆಯಾಗಿದ್ದ ಶಿವ-ಹನುಮಾನ್ ದೇವಾಲಯದಲ್ಲಿ ಇಂದು ಕೂಡ ಪರಿಶೀಲನೆ ಮುಂದುವರೆದಿದೆ.

ಉತ್ತರಪ್ರದೇಶದ ಸಂಭಾಲ್‌ ಜಿಲ್ಲೆಯಲ್ಲಿ ಒತ್ತುವರಿ ತೆರವು ವೇಳೆ ಪತ್ತೆಯಾಗಿದ್ದ ಶಿವ-ಹನುಮಾನ್ ದೇವಾಲಯದಲ್ಲಿ ಇಂದು ಕೂಡ ಪರಿಶೀಲನೆ ಮುಂದುವರೆದಿದೆ. ಇಂದಿನ ಪರಿಶೀಲನೆ ವೇಳೆ ದೇವಾಲಯ ಆವರಣದಲ್ಲಿನ ಬಾವಿ ಅಗೆಯುವಾಗ ಮುರಿದ ವಿಗ್ರಹಗಳು ಪತ್ತೆಯಾಗಿವೆ. ಗಣೇಶನ ವಿಗ್ರಹವಿದೆ. ಇನ್ನೊಂದು ಭಗವಾನ್ ಕಾರ್ತಿಕೇಯನದು ಎಂದು ಕಾಣಿಸುತ್ತಿದೆ ಅಂತಾ ಸಂಭಾಲ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ ಚಂದ್ರ ಹೇಳಿದ್ದಾರೆ.

ಬಾವಿಯಲ್ಲಿ ಅವಶೇಷಗಳು ಮತ್ತು ಮಣ್ಣಿತ್ತು, ಹೀಗಾಗಿ ಅಗೆದಾಗ ವಿಗ್ರಹಗಳು ಪತ್ತೆಯಾಗಿವೆ ಎಂದಿದ್ದಾರೆ.. ಉತ್ಖನ್ನವನ್ನು ಸುಗಮವಾಗಿ ಮಾಡಲು ಈ ಪ್ರದೇಶವನ್ನು ಭದ್ರಪಡಿಸಲಾಗಿದೆ.. ಸಂಭಾಲ್‌ನಲ್ಲಿನ ಶಿವ-ಹನುಮಾನ್ ದೇವಾಲಯದ ಬಳಿಯ ಬಾವಿಯಿಂದ ಮೂರು ವಿಗ್ರಹಗಳನ್ನು ತೆರಯಲಾಗಿದೆ.

1978 ರಿಂದ ಈ ದೇವಾಲಯವನ್ನು ಮುಚ್ಚಲಾಗಿದೆ. ನಾವೀಗ ದೇವಾಲಯವನ್ನು ತೆರೆದು ಸ್ವಚ್ಛಗೊಳಿಸಿದ್ದೇವೆ. ದೇವಾಲಯದ ಸುತ್ತ ಅತಿಕ್ರಮಣಗೊಂಡ ಪ್ರದೇಶವನ್ನು ತೆರವುಗೊಳಿಸುತ್ತೇವೆ ಅಂತಾ ಅಧಿಕಾರಿಗಳು ಹೇಳಿದ್ದಾರೆ..