ಸ್ಪೆಷಲ್ ಸ್ಟೋರಿ
ಬೀದಿ ನಾಯಿಗಳಿಗೆ ಆಶ್ರಯ ತಾಣ ಚಾರ್ಲಿ ಅನಿಮಲ್ ಪೆಟ್ ಕೇರ್ ಸೆಂಟರ್..!
ನೀವೇನಾದ್ರೂ ಕೊಳವೆ , ಕಟ್ಟಡ , ಬಾವಿ ಎಲ್ಲಾದರೂ ಪ್ರಾಣಿ ಸಿಕ್ಕಿಕೊಂಡಿದ್ರೆ ಈ ಚಾರ್ಲಿ ಸೆಂಟರ್ ಗೆ ಕರೆ ಮಾಡಿ ರೆಸ್ಕ್ಯೂ ಮಾಡುತ್ತಾರೆ. ಸಿನಿಮಾ ಚಾರ್ಲಿ ಸಾಂಗ್ ಇನ್ಸ್ ಪೀರೇಶನ್ ಗೂ ಈ ಸೆಂಟರ್ ತುಂಬಾನೆ ಇನ್ಸ್ ಪೀರೇಶನ್ ಆಗಿದೆಯಂತೆ. ಸೋ. ಮಗ್ದ ಮನಸ್ಸುಗಳು ಪ್ರಾಣಿ ಪ್ರಿಯರಿಗಂತೂ ಈ ಸೆಂಟರ್ ನಿಜಕ್ಕೂ ಹಾರ್ಟ್ ಫೇವರೆಟ್. ನೀವು ಈ ಸೆಂಟರ್ ಬೇಕಾದರೂ ಸಹಾಯ ಮಾಡಿ
ಚಾರ್ಲಿ 777 ಸಿನಿಮಾ ಎಷ್ಟು ಫೇಮಸೋ.. ಹಾಗೇ ಈ ಚಾರ್ಲಿ ಅನಿಮಲ್ ಪೆಟ್ ಕೇರ್ ಸೆಂಟರ್ ಕೂಡ ತುಂಬಾನೇ ಫೇಮಸ್.
ರಕ್ಷಿತ್ ಶೆಟ್ಟಿ , ರಾಜ್ ಬಿ ಶೆಟ್ಟಿ , ಹೀರೋಯಿನ್ ಗಳು ನಿರ್ದೇಶಕರು ಪ್ರತಿಯೊಬ್ಬರು ಈ ಸೆಂಟರ್ ಗೆ ಗ್ರೇಟ್ ಫ್ಯಾನ್. ಕಾರಣ , ಈ ಸೆಂಟರ್ ನಲ್ಲಿ ನ್ಯೂನತೆ ಇರುವ ಪ್ರಾಣಿಗಳ ಕೇರ್ ಮಾಡ್ತಾ ಇದ್ದಾರೆ. ಬರೋಬ್ಬರಿ 600 ಪೆಟ್ ಗಳ ಕೇರ್ ಮಾಡ್ತಾ ಇದ್ದಾರೆ. ಕೆಲವು ಪ್ರಾಣಿಗಳಿಗೆ ಕಣ್ಣು, ಕೈ-ಕಾಲು ಕೂಡ ಇಲ್ಲ. ಚರ್ಮ ಸಮಸ್ಯೆ ಇದ್ರೂ ಲೈಫ್ ಲಾಂಗ್ ಈ ಪೆಟ್ ಕೇರ್ ಮಾಡಲು ಸಂಸ್ಥೆ ನಿರ್ಧಾರ ಮಾಡಿದೆ.
ಪ್ರಾಣಿಗಳ ಐಸಿಯು , ವೆಕ್ಯೂಬಿಲೆಟರ್ , ಆಪರೇಷನ್ ಥಿಯೇಟರ್ , ಎಕ್ಸರೇ ಸಲಕರಣೆ ಹಾಗೂ ಲೇಸರ್ ಲೈಟ್ ಚಿಕಿತ್ಸೆ ಎಲ್ಲ ಕೊಡುವ ಸೆಂಟರ್ ಇದ್ದಾಗಿದೆ. ಈ ಸೆಂಟರ್ ನಲ್ಲಿ ಜನರು ತಮ್ಮ ವೀಕೆಂಡ್.. ವೀಕ್ ಡೇಸ್ ಕಳೆಯಲು ಇಷ್ಟ ಪಡುತ್ತಾರೆ.
ಈ ಸೆಂಟರ್ ನಲ್ಲಿ ಆರೋಗ್ಯವಾಗಿರುವ ಪ್ರಾಣಿಗಳನ್ನ ಸಾಕಲು ಕೊಡಲಾಗುತ್ತದೆ. ಒಂದೊಮ್ಮೆ ಮನೆಯ ಸಾಕಲು ಜಾಗ ಇಲ್ಲದೇ ತಿಂಗಳು ನಿಗದಿತ ಮೊತ್ತ ಕೊಟ್ಟರೆ ಆಗಲು ಈ ಪೆಟ್ ನ್ನ ಸಾಕಾಲಾಗುತ್ತಿದೆ.
ಕಾರ್ಪೋರೆಟ್ ಸೋಷಿಯಲ್ ರೆಸ್ಪಾಬ್ಸಿಬಲ್ ಫಂಡ್ , ಜನರ ದೇಣಿಗೆಯಿಂದ ತಿಂಗಳಿಗೆ 40 ಲಕ್ಷದಂತೆ 20 ಸಿಬ್ಬಂದಿ ಪೆಟ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಇನ್ನೂ , ನೀವೇನಾದ್ರೂ ಕೊಳವೆ , ಕಟ್ಟಡ , ಬಾವಿ ಎಲ್ಲಾದರೂ ಪ್ರಾಣಿ ಸಿಕ್ಕಿಕೊಂಡಿದ್ರೆ ಈ ಚಾರ್ಲಿ ಸೆಂಟರ್ ಗೆ ಕರೆ ಮಾಡಿ ರೆಸ್ಕ್ಯೂ ಮಾಡುತ್ತಾರೆ. ಸಿನಿಮಾ ಚಾರ್ಲಿ ಸಾಂಗ್ ಇನ್ಸ್ ಪೀರೇಶನ್ ಗೂ ಈ ಸೆಂಟರ್ ತುಂಬಾನೆ ಇನ್ಸ್ ಪೀರೇಶನ್ ಆಗಿದೆಯಂತೆ. ಸೋ. ಮಗ್ದ ಮನಸ್ಸುಗಳು ಪ್ರಾಣಿ ಪ್ರಿಯರಿಗಂತೂ ಈ ಸೆಂಟರ್ ನಿಜಕ್ಕೂ ಹಾರ್ಟ್ ಫೇವರೆಟ್. ನೀವು ಈ ಸೆಂಟರ್ ಬೇಕಾದರೂ ಸಹಾಯ ಮಾಡಿ , ನೀವು ಒಂದ್ ಪೆಟ್ ಪಡೆಯಬಹುದು.