ರಾಜ್ಯ ರಾಜಕೀಯದಲ್ಲಿ ಸಂಚಲನ ಎಬ್ಬಸಿದ್ದ ಮುಡಾ ಪ್ರಕರಣದ ತನಿಖೆ ಸಂಪೂರ್ಣ ಮುಗಿದಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಪತ್ನಿ ಯವರಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಮುಡಾ ಪ್ರಕರಣ ಸಂಬಂಧ ಲೋಕಾಯುಕ್ತ ತನಿಖೆಯಲ್ಲಿ ಸಿಎಂ ಮತ್ತು ಪತ್ನಿ ಪಾರ್ವತಿಯವರ ಪಾತ್ರ ಎಲ್ಲಿಯೂ ಕೂಡ ಕಂಡುಬಂದಿಲ್ಲದ ಹಿನ್ನೆಲೆ, ಲೋಕಾಯುಕ್ತ ವರದಿಯಲ್ಲಿ ಸಿಎಂ ಹಾಗೂ ಅವರ ಪತ್ನಿಗೆ ಕ್ಲೀನ್ ಚಿಟ್ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.
ಡಿನೋಟಿಫೈ ವೇಳೆ ಮುಡಾ ಆಯುಕ್ತರು, ಲೋಕಾಯುಕ್ತ ಅಧಿಕಾರಿಗಳು ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದೆಯೇ ಹೊರತು. ಇದರಲ್ಲಿ ಸಿಎಂ ಆಗಲೀ ಅವರ ಪತ್ನಿ ಪಾರ್ವತಿಯವರ ಪಾತ್ರವಿಲ್ಲ. ಸಿಎಂ ಕುರ್ಚಿಯನ್ನೇ ಅಲುಗಾಡಿಸಿದ ಮುಡಾ ಪ್ರಕರಣದ ತನಿಖೆ ಮುಗಿದಿದ್ದು, ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.