ಸದನದಲ್ಲಿ ಸಿ.ಟಿ. ರವಿ ಅಶ್ಲೀಲ ಪದ ಬಳಕೆ ಸಂಬಂಧ ಸಿಟಿ ರವಿ ಬಂಧನ ವಿಚಾರಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಮಂಡ್ಯದ ಮದ್ದೂರಿನಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿಯವರು, ನಮ್ಮಲ್ಲಿ ಈ ಹಿಂದೆ ಮೂವತ್ತು ವರ್ಷದಿಂದ ಒಂದು ಕಾನೂನು ಇತ್ತು. ಜನಪ್ರತಿನಿಧಿ ಯಾರೇ ತಪ್ಪು ಮಾಡಿದ್ರು ಮೊದಲು ಗಮನಕ್ಕೆ ತಂದು ಬಂಧನ ಮಾಡಿದ್ರು. ಆದ್ರೀಗ ಮೊದಲು ಬಂಧಿಸಿ ಆಮೇಲೆ ಯಾವ್ ಸೆಕ್ಷನ್ ಹಾಕಿ ಬಂಧಿಸಿದ್ದೀವಿ ಅಂತಾ ತಿಳಿಸ್ತಾರೆ. ಅಶ್ಲೀಲ ಪದ ಬಳಕೆ ವಿಚಾರದಲ್ಲಿ ನಾವು ನಮ್ಮದೇ ಚಾನೆಲ್ ಹಾಗೂ ಸೋರ್ಸ್ ಮೂಲಕ ನಾಲ್ಕು ಜನ ಸೇರಿ ಪರಿಶೀಲನೆ ಮಾಡಿದ್ದೀವಿ. ನಾವು ಅವುಗಳಲ್ಲಿ ಹುಡುಕಿದ್ರು ಸಿಗಲಿಲ್ಲ. ಈಗ ಅವ್ರು ಬೇರೆ ಬೇರೆ ಚಾನೆಲ್ ನಲ್ಲಿ ಬಂದಿದೆ ಅಂತಾ ದೂರು ಕೊಟ್ಟಿದ್ದಾರೆ. ಇನ್ನೂ ಕಾಲ ಮಿಂಚಿಲ್ಲ, ಅವುಗಳನ್ನು ಪರಿಶೀಲನೆ ಮಾಡ್ತೀವಿ. ಆ ರೀತಿ ಇದ್ದರೆ ಕ್ರಮ ಕೈಗೊಳ್ತೀವಿ ಎಂದಿದ್ದಾರೆ.