ನಟ ದರ್ಶನ್ ತೂಗುದೀಪ, ನಟಿ ಪವಿತ್ರಾಗೌಡ ಸೇರಿದಂತೆ 6 ಜನರ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್ನಲ್ಲಿ ದರ್ಶನ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡನೆ ಆರಂಭಿಸಿ ರೇಣುಕಾಸ್ವಾಮಿ ಕಿಡ್ನಾಪ್ ಮಾಡುವುದರಲ್ಲಿ ದರ್ಶನ್ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಕಿಡ್ನಾಪ್ ಆಗಬೇಕಾದರೆ ಕಾನೂನು ಬದ್ದ ಪೋಷಕರಿಂದ ಕರೆದೊಯ್ಯುವುದು. ಅಥವಾ ವಿದೇಶಕ್ಕೆ ಕರೆದೊಯ್ದು ಒತ್ತೆಯಾಳಾಗಿ ಇಡುವುದು. ಆದರೆ, ಈ ಕೇಸಲ್ಲಿ ಇದ್ಯಾವುದು ನಡೆದಿಲ್ಲ. ಹೀಗಾಗಿ ಕಿಡ್ನಾಪ್ ಮಾಡಿಲ್ಲ, ಆತನ ಕರೆದೊಯ್ಯಲು ಯಾವುದೇ ಬಲಪ್ರಯೋಗ ಇಲ್ಲ. ರೇಣುಕಾಸ್ವಾಮಿ ಕರೆದುಕೊಂಡು ಬಂದಾಗ ಯಾವುದೇ ಬಲಪ್ರಯೋಗ ಮಾಡಿಲ್ಲ. ರೇಣುಕಾಸ್ವಾಮಿ ಸ್ವ-ಇಚ್ಛೆಯಿಂದ ಬಂದಿದ್ದಾನೆ ಎಂದು ಹೇಳಿದ್ದಾರೆ.
ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ನಡೆದಿದೆ.. ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಬಗ್ಗೆ ನ್ಯಾಯಲಯಕ್ಕೆ ತಿಳಿಸಲಾಗಿದೆ.. ಪವಿತ್ರ ಮಾತ್ರವಲ್ಲದೇ ಅನೇಕ ಮಹಿಳೆಯರಿಗೂ ಕೆಟ್ಟದಾಗಿ ಮೆಸೇಜ್ ಮಾಡಿದ್ದು ಗಮನಕ್ಕೆ ತರಲಾಗಿದೆ.. ಸದ್ಯ ಸಿವಿ ನಾಗೇಶ್ ವಾದ ಆಲಿಸಿದ ಜಡ್ಜ್ ವಿಚಾರಣೆ ಮುಂದೂಡಿದ್ದಾರೆ.