ಕರ್ನಾಟಕ
ಡಿ ಗ್ಯಾಂಗ್ ಆರೋಪಿ ಜೈಲಿಂದ ರಿಲೀಸ್.. ಕೈಯಲ್ಲಿ ಭಗವದ್ಗೀತೆ..!
ದರ್ಶನ್ & ಗ್ಯಾಂಗ್‌ನ ಮತ್ತೊಬ್ಬ ಸದಸ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗಿದ್ದಾನೆ..
ದರ್ಶನ್ & ಗ್ಯಾಂಗ್‌ನ ಮತ್ತೊಬ್ಬ ಸದಸ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗಿದ್ದಾನೆ.. ರೇಣುಕಾಸ್ವಾಮಿ ಕೊಲೆ ಪ್ರಕರಣದ A-7 ಅನುಕುಮಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.. ಕಳೆದ ಶುಕ್ರವಾರ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.. ಆದ್ರೆ ಜಾಮೀನು ಶ್ಯೂರಿಟಿ ತಡವಾದ ಹಿನ್ನೆಲೆ ಇಂದು ರಿಲೀಸ್ ಆಗಿದ್ದಾರೆ.. ಬಿಡುಗಡೆ ಬಳಿಕ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಸಹೋದರನ ಜೊತೆ ಅನುಕುಮಾರ್ ತೆರಳಿದ್ದಾರೆ.. ಮತ್ತೊಂದು ಗಮನಸೆಳೆದ ವಿಚಾರವೆಂದರೆ ಕೊಲೆ ಆರೋಪಿ ಅನುಕುಮಾರ್ ಕೈಯಲ್ಲಿ ಭಗವದ್ಗೀತೆ ಪುಸ್ತಕ ಹಿಡಿದು ಜೈಲಿಂದ ಹೊರಬಂದಿದ್ದಾರೆ.. ಸೆಂಟ್ರಲ್ ಜೈಲಿನಲ್ಲಿದ್ದ ವೇಳೆ ಭೇಟಿಗೆ ಬಂದಿದ್ದ ಸ್ನೇಹಿತರು ಭಗವದ್ಗೀತೆ ಪುಸ್ತಕವನ್ನ ದರ್ಶನ್‌ಗೆ ನೀಡಿದ್ದರು.. ಆದ್ರೆ ರಾಜಾತಿಥ್ಯ ಪ್ರಕರಣದ ನಂತರ ದರ್ಶನ್ ಅವರನ್ನ ಬೇರೆ ಜೈಲಿಗೆ ಶಿಫ್ಟ್ ಮಾಡುವ ವೇಳೆ ಆರೋಪಿ ಅನುಕುಮಾರ್‌ಗೆ ಈ ಪುಸ್ತಕ ತಲುಪಿಸಲಾಗಿತ್ತು.. ದರ್ಶನ್ ನೀಡಿದ್ದ ಭಗವದ್ಗೀತೆ ಪುಸ್ತಕ ಜೋಪಾನವಾಗಿಟ್ಟುಕೊಂಡಿರುವ ಅನುಕುಮಾರ್ ಇದೀಗ ಜೈಲಿನಿಂದ ರಿಲೀಸ್ ಆಗಿದ್ದಾರೆ..