ಕರ್ನಾಟಕ

ಎರಡು ದಿನದಲ್ಲಿ UI ಕಲೆಕ್ಷನ್‌ ಎಷ್ಟು ಗೊತ್ತಾ?

ಇಂದು ಭಾನುವಾರ ಆದ ಕಾರಣ ಫ್ಯಾಮಿಲಿ ಮಂದಿ, ಫ್ರೆಂಡ್ಸ್ ಗ್ಯಾಂಗ್ ಉಪೇಂದ್ರ ಸಿನಿಮಾ ನೋಡಲು ಹೋಗೋದು ಪಕ್ಕಾ. ಸದ್ಯ ಎರಡೂ ದಿನಗಳಲ್ಲಿ ಆದ ಬೆಳವಣಿಗೆ, UI ರಿವ್ಯೂ, ಟ್ರೋಲ್ಸ್ ಎಲ್ಲವೂ ಸಿನಿ ಪ್ರಿಯರಿಗೆ UI ಸಿನಿಮಾ ನೋಡಲೇಬೇಕು ಎಂದು ಟ್ರಿಗರ್ ಮಾಡಿರುತ್ತೆ.

9 ವರ್ಷಗಳ ಬಳಿಕ ಡೈರೆಕ್ಷನ್ ಕ್ಯಾಪ್ ತೊಟ್ಟ ರಿಯಲ್‌ ಸ್ಟಾರ್‌ ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ಯುಐ ಸಿನಿಮಾ ಡಿಸೆಂಬರ್ 20ರಂದು ಬಿಡುಗಡೆಯಾಗಿ ಮೂರನೇ ದಿನಕ್ಕೆ ಯಶಸ್ವಿಯಾಗಿ ಕಾಲಿಟ್ಟಿದೆ. ಈ ನಡುವೆ UI ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಗಳಿಕೆ ಮಾಡಿದೆ ಎಂಬ ಕುತೂಹಲ ಮನೆ ಮಾಡಿದೆ. ಬಾಕ್ಸ್ ಆಫೀಸ್ ಪಂಡಿತರ ಪ್ರಕಾರ UI ಇದುವರೆಗೂ 13.69ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. 

ಹೌದು, ಇಂದು ಭಾನುವಾರ ಆದ ಕಾರಣ ಫ್ಯಾಮಿಲಿ ಮಂದಿ, ಫ್ರೆಂಡ್ಸ್ ಗ್ಯಾಂಗ್ ಉಪೇಂದ್ರ ಸಿನಿಮಾ ನೋಡಲು ಹೋಗೋದು ಪಕ್ಕಾ. ಸದ್ಯ ಎರಡೂ ದಿನಗಳಲ್ಲಿ ಆದ ಬೆಳವಣಿಗೆ, UI ರಿವ್ಯೂ, ಟ್ರೋಲ್ಸ್ ಎಲ್ಲವೂ ಸಿನಿ ಪ್ರಿಯರಿಗೆ UI ಸಿನಿಮಾ ನೋಡಲೇಬೇಕು ಎಂದು ಟ್ರಿಗರ್ ಮಾಡಿರುತ್ತೆ. ಹೀಗಾಗಿ ಮೂರನೇ ದಿನದ ಕಲೆಕ್ಷನ್ ಎಷ್ಟಾಗಬಹುದು ಎಂಬ ಪ್ರಶ್ನೆ ಕಾಡಿದೆ.