ಕರ್ನಾಟಕ

ಕನ್ನಡವನ್ನೇ ಮರೆತುಬಿಟ್ರಾ ರಿಷಬ್‌ ಶೆಟ್ಟಿ..?

ಕನ್ನಡದ ನಟ , ನಿರ್ದೇಶಕ ರಿಷಬ್ ಶೆಟ್ಟಿ, ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ..ಅದರಲ್ಲೂ ಹೆಚ್ಚು ಪರಭಾಷಾ ಸಿನಿಮಾಗಳ್ಲಲೇ ಬ್ಯುಸಿ…ಇದೆಲ್ಲದ್ರ ನಡುವೆ ಬೆಲ್‌ ಬಾಟಂ 2 ಸಿನಿಮಾ ಏನಾಯ್ತು ಅನ್ನೋದ್ರ ಬಗ್ಗೆ ಸಿನಿಪ್ರಿಯರ ಕುತೂಹಲ..

ಕನ್ನಡದ ನಟ , ನಿರ್ದೇಶಕ ರಿಷಬ್ ಶೆಟ್ಟಿ, ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ..ಅದರಲ್ಲೂ ಹೆಚ್ಚು ಪರಭಾಷಾ ಸಿನಿಮಾಗಳ್ಲಲೇ ಬ್ಯುಸಿ…ಕಾಂತಾರ 2 ಚಿತ್ರದ ಚಿತ್ರೀಕರಣ ಒಂದು ಕಡೆ ನಡೀತಿದೆ..ಮತ್ತೊಂದು ಕಡೆ ತೆಲುಗಿನ ಜೈ ಹನುಮಾನ್ ಸಿನಿಮಾದಲ್ಲಿ ನಟಿಸೋದು ಕನ್ಫರ್ಮ್ ಆಗಿದೆ.. ಅಷ್ಟೇ ಅಲ್ಲಾ ಮತ್ತೊಂದು ಪ್ಯಾನ್ ಇಂಡಿಯನ್ ಪ್ರಾಜೆಕ್ಟ್ ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರ ಕೂಡ ಅನೌನ್ಸ್ ಆಗಿದೆ.. ಆದ್ರೆ ಇದೆಲ್ಲದ್ರ ನಡುವೆ ಬೆಲ್‌ ಬಾಟಂ 2 ಸಿನಿಮಾ ಏನಾಯ್ತು ಅನ್ನೋದ್ರ ಬಗ್ಗೆ ಸಿನಿಪ್ರಿಯರ ಕುತೂಹಲ..

ಯೆಸ್..ಬೆಲ್‌ ಬಾಟಂ 2021ರ ಸೂಪರ್ ಹಿಟ್ ಸಿನಿಮಾ.. ರಿಷಬ್ ಶೆಟ್ಟಿಯನ್ನು ಫುಲ್ ಫ್ಲೆಡ್ಜ್ ಹೀರೋ ಆಗಿಸಿದ ಚಿತ್ರ.. ಸಿನಿಮಾ ಹಿಟ್ ಆಗ್ತಿದ್ದ ಹಾಗೆ ಅದೇ ತಂಡ ಬೆಲ್‌ ಬಾಟಂ 2 ಮಾಡೋದಾಗಿ ಅನೌನ್ಸ್ ಮಾಡಿತ್ತು..ಶೂಟಿಂಗ್ ಗೆ ತಯಾರಿ ಕೂಡ ನಡೆದಿತ್ತು..ಆದ್ರೆ ಕಾಂತಾರ ಹಿಟ್ ಆಗ್ತಿದ್ದ ಹಾಗೆ ಬೆಲ್‌ ಬಾಟಂ 2 ಚಿತ್ರವನ್ನು ಮರೆತು ಹೋದ್ರಾ ರಿಷಬ್ ಶೆಟ್ಟಿ ಅನ್ನುವ ಪ್ರಶ್ನೆ ಕಾಡ್ತಿದೆ..

ಅಷ್ಟೇ ಅಲ್ಲಾ..ಕನ್ನಡದಲ್ಲಿ ಅನೌನ್ಸ್ ಮಾಡಿದ್ದ ರುದ್ರಪ್ರಯಾಗ, ನಾಥೂರಾಮ್ ಚಿತ್ರಗಳ ಕಥೆ ಕೂಡ ಏನಾಯ್ತು ಅನ್ನೋ  ಅಪ್ಡೇಟ್ ಇಲ್ಲ.ಕನ್ನಡದಿಂದ ಪ್ಯಾನ್ ಇಂಡಿಯನ್ ಸಿನಿಮಾಗಳ ಕಡೆ ಮುಖ ಮಾಡಿರುವ ರಿಷಬ್ ಶೆಟ್ಟಿ ಕನ್ನಡದ ಪ್ರಾಜೆಕ್ಟ್ಗಳನ್ನು ಕೈ ಬಿಟ್ಟಿದ್ದಾರೆ ಅನ್ನೋ ಮಾತು ಶುರುವಾಗಿದೆ.


ಇದೆಲ್ಲ ಚರ್ಚೆಗಳು ಶುರುವಾಗ್ತಿದ್ದ ಹಾಗೆ ಬೆಲ್‌ ಬಾಟಂ 2 ಚಿತ್ರದ ನಿರ್ಮಾಪಕ ಸಂತೋಷ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.. ನನ್ನ ಮತ್ತು ರಿಷಬ್ ಶೆಟ್ಟಿ ಸ್ನೇಹ ಮೊದಲಿನ ರೀತಿಯಲ್ಲಿಯೇ ಇದೆ.. ನನ್ನ ಕಷ್ಟದ ದಿನಗಳಲ್ಲಿ ರಿಷಬ್ ಶೆಟ್ಟಿ ಜೊತೆಗೆ ನಿಂತಿದ್ದಾರೆ..ಮುಂದಿನ ದಿನಗಳಲ್ಲಿ ಬೆಲ್ ಬಾಟಂ ೨ ಬಂದೇ ಬರುತ್ತದೆ ಅಂತ ಹೇಳಿದ್ದಾರೆ..