ಅಂದು march 23, 1931 ಭಾರತವೆಂಬ ಸಮೃಧ್ಧ ದೇಶವನ್ನ ಆಂಗ್ಲರ ಕಪಿ ಮುಷ್ಟಿಯಿಂದ ಮುಕ್ತಿಗೊಳಿಸಬೇಕು ಎಂದು ಪಣತೊಟ್ಟಿದ್ದ ಮೂವರು ನವ ಊತ್ಸಾಹಿ ತರುಣರು ತಮ್ಮ ಪ್ರಾಣವನ್ನ ತಾಯಿ ಭಾರತೀಗೆ ಸಮರ್ಪಿಸಲು ಸಿದ್ದರಾಗಿದ್ದರು. ಮಹದಾನಂದ ಮತ್ತು ಉತ್ಸಾಹ ಆ ಮೂವರು ಯುವಕರ ಮುಖದಲ್ಲಿ ವ್ಯಕ್ತವಾಗ್ತಿತ್ತು.
ಈ ಮೂವರನ್ನ ಗಲ್ಲಿಗೆರಿಸಲು 5 ಜನ ಪೊಲೀಸ್ ಅಧಿಕಾರಿಗಳು ಸಿದ್ಧರಾಗಿದ್ದರು. ಆ ಮೂವರು ಯುವಕರ ಮೋಗದಲ್ಲಿರುವ ಮಂದಹಾಸವನ್ನ ಗಮನಿಸಿದ ಒಬ್ಬ ಪೊಲೀಸ್ ಅಧಿಕಾರಿ ಆ ಯುವಕರನ್ನ ಪ್ರಶ್ನೆ ಮಾಡ್ತಾನೆ.."ನಿಮ್ಮ ಮುಖದಲ್ಲಿರುವ ಮಂದಹಾಸಕ್ಕೆ ಕಾರಣ ಏನು ಅಂತ" ?
ಆ ಒಬ್ಬ ಯುವಕ ಉತ್ತರಿಸುತ್ತಾನೆ. ನಾಡ ಮುಕ್ತಿಗಾಗಿ ಈ ದೇಶದ ಯುವಕರು ನಗ್ತಾ, ನಗ್ತಾ ಗಲ್ಲಿಗೆರುವುದನ್ನ ನೋಡೊ ಭಾಗ್ಯ 37 ಕೋಟಿ ಜನರಲ್ಲಿ ನಿಮ್ಮ 5 ಮಂದಿಗೆ ಇದೆ ಅಲ್ವಾ, ಇದು ನಿಮ್ಮ ಭಾಗ್ಯ ಅಲ್ವಾ ಅಂತಾ. ಹೀಗೆ ಸಾವಿನಲ್ಲೂ ಮತ್ತೊಬ್ಬರ ಭಾಗ್ಯವನ್ನ ಹೊಗಳಿದ ಆ ವೀರ ಯುವಕನೇ ಭಗತ್ ಸಿಂಗ್. ಆತನ ಜೊತೆಗಿದ್ದವರೆ ಶಿವರಾಮ್ ಹರಿ ರಾಜಗುರು, ಸುಖದೇವ್ ಥಾಪರ್.