ಸ್ಪೆಷಲ್ ಸ್ಟೋರಿ

ಬೆಂಗಳೂರಿನಲ್ಲಿ ಮಿತಿಮೀರಿದ ವ್ಹೀಲಿಂಗ್ ಪುಂಡರ ಹಾವಳಿ

ಆನೇಕಲ್ ಭಾಗದಲ್ಲಿ ಅತೀ ಹೆಚ್ಚಾಗಿ ವೀಲಿಂಗ್ ಮಾಡೋ ಪುಂಡರ ಸಂಖ್ಯೆ ಹೆಚ್ಚಾಗಿದೆ..ಇಲ್ಲಿ ಹೇಳೋರಿಲ್ಲ, ಕೇಳೋರಿಲ್ಲ..

ಇತ್ತೀಚೆಗೆ ಚಿಗುರು ಮೀಸೆ ಹುಡುಗರ ಶೋಕಿ ಹೆಚ್ಚಾಗಿ ಹೋಗ್ತಿದೆ, ಅದ್ರಲ್ಲೂ ಬೈಕ್ ಇದ್ರೆ ಸಾಕು, ಹುಚ್ಚಾಟಗಳನ್ನ ಎಗ್ಗಿಲ್ಲದೆ ಮಾಡ್ತಾರೆ, ಇಲ್ಲಿ ಪೋಷಕರೂ ಕೂಡಾ ವಯಸ್ಸಲ್ಲದ ವಯಸ್ಸಲ್ಲಿ  ತಮ್ಮ ಮಕ್ಕಳಿಗೆ ದ್ವಿಚಕ್ರ ವಾಹನಗಳನ್ನ ಕೊಡಿಸೋ ಪರಿಣಾಮ, ಓದೋ ವಯಸ್ಸಿನ ಮಕ್ಕಳು,     ವ್ಹೀಲಿಂಗ್ ಮಾಡೋ ಕಡೆ ಗಮನ ಕೊಡ್ತಿದ್ದಾರೆ, ಈ ವೀಲಿಂಗ್ ಭೂತಕ್ಕೆ ಈ ಹಿಂದಿನಿಂದಲೂ ಸಾಕಷ್ಟು ಜನ ಬಲಿಯಾಗಿರೋದು ಬೆಳಕಿಗೆ ಬಂದರೂ ಕೂಡಾ, ಇದಕ್ಕೆ ಕಡಿವಾಣ ಬೀಳದಿರೋದು ನಿಜಕ್ಕೂ ದುರಂತ..
ಮತ್ತೊಂದು ಕಡೆ ವೀಲಿಂಗ್ ಮಾಡೋರ ಕೈಗೆ ಕೋಳ ಹಾಕೋಕೆ ಪೊಲೀಸರು ಇನ್ನೂ ಒದ್ದಾಡ್ತಾನೇ ಇದ್ದಾರೆ.. ಆನೇಕಲ್ ಭಾಗದಲ್ಲಿ ಅತೀ ಹೆಚ್ಚಾಗಿ ವೀಲಿಂಗ್ ಮಾಡೋ ಪುಂಡರ ಸಂಖ್ಯೆ ಹೆಚ್ಚಾಗಿದೆ.. ವೀಲಿಂಗ್ ಹಾವಳಿಯ ಬಗ್ಗೆ ಪೊಲೀಸ್ ಠಾಣೆಗೆ ತೆರಳಿ ದೂರನ್ನ ನೀಡಿದ್ರೂ ಯಾವುದೇ ಆ್ಯಕ್ಷನ್ ತೆಗೆದುಕೊಳ್ತಿಲ್ಲ ಅಂತ ಜನ ಕಿಡಿಕಾರಿದ್ದಾರೆ..