ನವದೆಹಲಿ - ಅದಾನಿ ಕಂಪನಿಯು ಭಾರತದ ವಿವಿಧ ರಾಜ್ಯಗಳಲ್ಲಿ ಸೌರಶಕ್ತಿ ಘಟಕಗಳನ್ನು ಸ್ಥಾಪನೆ ಮಾಡಿದೆ. ತನ್ನ ವಿದ್ಯುತ್ ಖರೀದಿಸಲು ವಿವಿಧ ರಾಜ್ಯ ಸರ್ಕಾರಗಳ ಜತೆ ಒಪ್ಪಂದವಾಗಿದೆ.
ಮಾರುಕಟ್ಟೆ ದರಕ್ಕಿಂತ ಅತಿ ಹೆಚ್ಚಿನ ಬೆಲೆಗೆ ವಿದ್ಯುತ್ ಖರೀದಿ ಮಾಡುವಂತೆ ಅಧಿಕಾರಿಗಳಿಗೆ ಲಂಚ ಆಮಿಷ ನೀಡಿರುವ ಆರೋಪ ಹೊರಬಿದ್ದಿದೆ.
ಆಂದ್ರಪ್ರದೇಶ , ಒಡಿಶಾ, ತಮಿಳುನಾಡು , ಕಾಶ್ಮೀರ ಹಾಗೂ ಛತ್ತೀಸ್ ಗಢ ಅಧಿಕಅರಿಗಳಿಗೆ 2100 ಕೋಟಿ ರೂ ಲಂಚ ನೀಡಿದೆ ಎಂದು ಆರೋಪವನ್ನ ಅಮೆರಿಕಾ ಕಾನೂನು ಇಲಾಖೆ ವರದಿ ನೀಡಿದೆ. ಈ ರೀತಿ ಕಾನೂನು ಗಾಳಿಗೆ ತೂರಿ 20 ವರ್ಷದ ಒಪ್ಪಂದ ಮಾಡಿಕೊಂಡರೆ ಗೌತಮ್ ಅದಾನಿ ಕಂಪನಿಗೆ ಬರೋಬ್ಬರಿ 16 ಸಾವಿರ ಕೋಟಿ ರೂ. ಆದಾಯ ಬರುವ ಸಾಧ್ಯತೆ ಇದೆ ಎಂದು ಇಲಾಖೆ ವರದಿ ನೀಡಿದೆ.
ಭಾರತದಲ್ಲಿ ಆಗಿದೇ ಎನ್ನದ ವ್ಯವಹಾರಕ್ಕೆ ಅಮೆರಿಕಾ ಕೋರ್ಟ್ ವರದಿ ಯಾಕೆ?
ಅದಾನಿ ಗ್ರೀನ್ ಎನರ್ಜಿಯಲ್ಲಿ ಅಮೆರಿಕಾ ಕಂಪನಿಗಳು ಹಣ ಹೂಡಿಕೆ ಮಾಡಿದೆ. ಇದೇ ವೇಳೆ ಹೂಡಿಕೆಗಾಗಿ ಅಮೆರಿಕದ ಬ್ಯಾಂಕುಗಳಿಂದ ಅದಾನಿ ವಿದ್ಯುತ್ ಘಟಟಕಕ್ಕೆ ಸಾಲ ಪಡೆದಿದ್ದಾರೆ. ಈ ವ್ಯವಹಾರದಲ್ಲಿ ಭ್ರಷ್ಟಚಾರ ನಡೆದಿ್ಲಲ ಎಂದು ಲಿಖಿತ ಹೇಳಿಕೆಯನ್ನು ನೀಡಿದ್ದಾರೆ. .ಆದರೆ , ಈಗ ಲಂಚ ಪಡೆದಿರುವ ವಿಚಾರ ಬಂದಿರುವ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಭ್ರಷ್ಟಚಾರ ಕೇಸ್ ದಾಖಲಾಗಿದೆ.
ಅದಾನಿಗೆ ಆರ್ಥಿಕ ಹೊಡೆತ !
ಅದಾನಿ ಕಂಪನಿಯ ವರ್ಚಸ್ಸಿನ ಮೇಲೆ ಜಾಗತಿ ಪರಿಣಾಮ ಬೀರಲಿದೆ. ಅಮೆರಿಕ ಮಾರುಕಟ್ಟೆಯಿಂದ ಅದಾನಿಗೆ ಹಣ ಸಂಗ್ರಹ ಅಸಾಧ್ಯವಾಗಬಹುದಾಗಿದೆ. ಸದ್ಯ ಅದಾನಿ ಸೇರಿ 7 ಮಂದಿಗೆ ವಾರೆಂಟ್ ಆಗಿರುವ ಹಿನ್ನೆಲೆಯಲ್ಲಿ ವಿದೇಶ ಪ್ರವಾಸ ಬಹುತೇಕ ಕಷ್ಟವಾಗಬಹುದಾಗಿದೆ. ಇನ್ನೂ ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಅದಾನಿ ಗ್ರೂಪ್ ಹಣ ಹೂಡಿಕೆ ವೇಳೆ ತೊಂದರೆ ಆಗುವ ಸಾಧ್ಯತೆ ದಟ್ಟವಾಗಿದೆ. ಸದ್ಯ ದೇಶದ 5 ರಾಜ್ಯಗಳಲ್ಲೂ ಬಹುತೇಕ ತನಿಖೆಯನ್ನ ಅದಾನಿ ಎದುರಿಸಬೇಕಾಗಬಹುದಾಗಿದೆ.
ಕುಸಿದ ಅದಾನಿ ಷೇರುಗಳು ?
ಅದಾನಿ ಮೇಲೆ ಲಂಚದ ಆರೋಪದ ಕೇಸ್ಗಳು ಕೇಳಿ ಬಂದ ಬೆನ್ನಲ್ಲೇ ಸದ್ಯ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅದಾನಿ ಕಂಪನಿ ಮೌಲ್ಯ 2 ಲಕ್ಷ ಕೋಟಿ ಕುಸಿತ ಕಂಡಿದೆ.
--------------