ಬೆಂಗಳೂರು - ಉದ್ಯಾನನಗರಿ ಬೆಂಗಳೂರಿನಲ್ಲಿ ಕೃಷಿ ಮೇಳ ನಡೆಯುತ್ತಿದೆ. ಹಳ್ಳಿ ವಾತಾವರಣಕ್ಕಾಗಿ ಕೃಷಿ ಮೇಳಕ್ಕೆ ಬಂದ ಜನರು ಕನಿಷ್ಠ ವಾಹನ ಪಾರ್ಕಿಂಗ್ ನಿಂದ ಕೃಷಿ ಮೇಳದ ಜಾಗಕ್ಕೆ ತಲುಪಲು 2 ಕಿ.ಮೀ. ನಡೆಯಲೇ ಬೇಕಾಗುತ್ತದೆ. ಇದರ ಫಲವಾಗಿ ಮೇಳ ನೋಡುವ ಮುನ್ನ ಊಟ ತಾಳ ಹಾಕುತ್ತಿದೆ ಎಂದು ಫುಡ್ ಕೌಂಟರ್ ಬಳಿ ಸಾಗುವವರೇ ಹೆಚ್ಚಾಗಿದ್ದಾರೆ.
ಇದನ್ನೇ ಬಂಡವಾಳ ಮಾಡಿಕೊಂಡ ಜಿಕೆವಿಕೆ ಸದ್ಯ ಬಾಡಿಗೆ ನೀಡಿರುವ ಊಟದ ಮಳಿಗೆಗಳಿಗೆ ಯಾವುದೇ ಮೂಲಭೂತ ಸೌಕರ್ಯ ಒದಗಿಸಲ್ಲ.
ಊಟ ತಯಾರಿಸುವ ಸ್ಥಳದಲ್ಲಿ ಹಿಂದೆಯೆಲ್ಲ ಬರೀ ಗಬ್ಬುನಾತ , ದೊಡ್ಚ ವಲಸು ಮನೆ ಮಾಡಿದೆ. ಸಾಂಬರು ಪೌಡರ್ಗಳನ್ನ ಎಂಜಲು ಮಾಡಿ ಆಹಾರಕ್ಕೆ ಮಿಶ್ರಣ ಮಾಡುತ್ತಿದ್ದಾರೆ. ಹಾಗೇ ನಾಯಿ ಅಲ್ಲೇ ಬಂದು ತಿನ್ನುತ್ತೆ , ಜನರಿಗೆ ಮುಂದೆ ಊಟ ಹಾಕುತ್ತಿದ್ಧಾರೆ. ಇದ್ಯಾವುದೇ ಗೊತ್ತಿಲ್ಲದೇ ಜನರು ಊಟದ ಸವಿಯನ್ನ ಸವಿಯುತ್ತಿದ್ದಾರೆ.
ವಿಚಿತ್ರವೆಂದರೆ ಜಿಕೆವಿಕೆ ಆಡಳಿತ ಮಂಡಳಿ ಮೇಳ ಆಯೋಜನೆ ಸಂದರ್ಭದಲ್ಲಿ ಒಂದು ಮಳಿಗೆ ನಾಲ್ಕು ದಿನ ಬಾಡಿಗೆ ಕೊಡಲು ಬರೋಬ್ಬರಿ 26 ಸಾವಿರ ಕಟ್ಟಲೇಬೇಕು.ಹೀಗಿರುವಾಗ ಮೂಲಭೂತ ನೀರಿನ ವ್ಯವಸ್ಥೆ , ಸ್ವಚ್ಚತೆ ಹಾಗೂ ಕುರ್ಚಿ ವ್ಯವಸ್ಥೆ ಆದ್ಯತೆ ನೀಡಿಲ್ಲ. ಇದು ಅವ್ಯವಸ್ಥೆಗೆ ಕಾರಣ ಅನ್ನೊದು ವ್ಯಾಪಾರಿಗಳ ಮಾತು.
ಇನ್ನೂ ಗ್ರಾಹಕರಂತೂ ತ್ಯಾಜ್ಯ ನಡುವೆ ಊಟ ಕಂಡು ಆಕ್ರೋಶ ಹೊರಹಾಕಿದ್ದಾರೆ.