ತುಮಕೂರು : ಶಕ್ತಿ ದೇವತೆ ಮಧುಗಿರಿ ದಂಡಿನ ಮಾರಮ್ಮ ಜಾತ್ರಾ ಮಹೋತ್ಸವದ ಹಿನ್ನಲೆ, ಸಂಪೂರ್ಣ ನಗರ ನವ ವಧುವಿನಂತೆ ಕಂಗೊಳಿಸುತ್ತಿದೆ. ವಿಧಾನ ಪರಿಷತ್ ಸದಸ್ಯ ರಾಜೇಂದ್ರರಾಜಣ್ಣ ನೇತೃತ್ವದಲ್ಲಿ
ದಂಡಿನ ಮಾರಮ್ಮನ ತೆಪ್ಪೋತ್ಸವವನ್ನ ಬಹಳ ಅದ್ದೂರಿಯಾಗಿ ಆಯೋಜಿಸಲಾಗಿದ್ದು, ಇದೇ 24ರಂದು ಅಂದರೆ ನಾಳೆ ರಾಜ್ಯ ಮಟ್ಟದ ತೆಪ್ಪೋತ್ಸವ ನಡೆಯಲಿದೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೆರೆಗಳ ಪಾಳ್ಯದ ಚೋಳೇನಹಳ್ಳಿ ಕೆರೆಯಲ್ಲಿ ನಾಳೆ ಸಂಜೆ ಗೋದೋಳಿ ಸಮಯದಲ್ಲಿ ಕಾಶಿ ಪಂಡಿತರು ಗಂಗಾ ಆರತಿ ಮಾಡಲಿದ್ದಾರೆ. ಹುದುಗಿ ಹೋಗಿದ್ದಂತಹ ತೆಪ್ಪೋತ್ಸವಕ್ಕೆ ಮತ್ತೆ ಮರು ಜೀವ ಬಂದಿದ್ದು, 50 ವರ್ಷಗಳ ನಂತರ ಅದ್ದೂರಿ ತೆಪ್ಪೋತ್ಸವ ನಡೆಯುತ್ತಿದೆ. ಇನ್ನೂ ತೆಪ್ಪೋತ್ಸವಕ್ಕೆ 70 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ಸಾಧ್ಯತೆ ಇದ್ದು, ಮುಜರಾಯಿ ಇಲಾಖೆ ಹಾಗೂ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ತೆಪ್ಪೋತ್ಸವ ನಡೆಯಲಿದೆ.
ಇನ್ನೂ, ತೆಪ್ಪೋತ್ಸವಕ್ಕೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ, ಸಹಕಾರ ಸಚಿವ ಕೆ.ಎನ್ ರಾಜಣ್ಣ. ಕೇಂದ್ರ ಸಚಿವ ವಿ. ಸೋಮಣ್ಣ, ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ. ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಶ್ರೀಗಳು, ಎಂ.ಎಲ್.ಸಿ ರಾಜೇಂದ್ರ ಹಾಗೂ ಮಧುಗಿರಿ ಉಪವಿಭಾಗಾಧಿಕಾರಿ ಸೇರಿ ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.