ಕರ್ನಾಟಕ

ಹಾಸನದಲ್ಲಿ ಎಚ್‌ಡಿಕೆ ಟೆಂಪಲ್‌ ರನ್‌.. ರೇವಣ್ಣ ಎಲ್ಲಿ ರೀ.!?

ದೇವಸ್ಥಾನಕ್ಕೆ ಬಂದಿಳಿದ ತಕ್ಷಣವೇ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಅವರು ತಮ್ಮ ಸಹೋದರ ಹೆಚ್‌.ಡಿ. ರೇವಣ್ಣ ಎಲ್ಲಿ ಅಂತಾ ಕೇಳಿದ್ದಾರೆ. ಇದೇ ವೇಳೆ ರೇವಣ್ಣ ಕೂಡ ದೇವಸ್ಥಾನಕ್ಕೆ ಆಗಮಿಸಿದ್ದು ದೇವೇಗೌಡರ ಕುಟುಂಬ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದೆ..

ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಇಂದು ಹಾಸನ ಜಿಲ್ಲೆಗೆ ಆಗಮಿಸಿದ್ದು ಸಚಿವರಾದ ಬಳಿಕ ಮೊದಲ ಬಾರಿಗೆ ಮನೆ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಯಲಿಗೂರು ಗ್ರಾಮದಲ್ಲಿರುವ ದೇವೀರಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದು, ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಹಾಗೂ ನಿಖಿಲ್ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ. ದೇವಸ್ಥಾನಕ್ಕೆ ಬಂದಿಳಿದ ತಕ್ಷಣವೇ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಅವರು ತಮ್ಮ ಸಹೋದರ ಹೆಚ್‌.ಡಿ. ರೇವಣ್ಣ ಎಲ್ಲಿ ಅಂತಾ ಕೇಳಿದ್ದಾರೆ. ಇದೇ ವೇಳೆ ರೇವಣ್ಣ ಕೂಡ ದೇವಸ್ಥಾನಕ್ಕೆ ಆಗಮಿಸಿದ್ದು ದೇವೇಗೌಡರ ಕುಟುಂಬ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದೆ..