ವಿದೇಶ

ಇಷ್ಟವಿಲ್ಲದ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾಳೆ ಎಂದು ಪ್ರೇಯಸಿಯನ್ನೇ ಇರಿದು ಕೊಂದ..!

He stabbed his girlfriend to death because she had a hairstyle that he didn't like..!

ತನ್ನ ಗೆಳತಿ ತನಗೆ ಇಷ್ಟವಿಲ್ಲದ ಹೊಸ ಲುಕ್ ನಲ್ಲಿ ಹೇರ್ ಕಟ್ ಮಾಡಿಸಿಕೊಂಡಿದ್ದಾಳೆಂದು ಆಕೆಯ ಬಾಯ್ ಫ್ರೆಂಡ್ ಆಕೆಯನ್ನು ಇರಿದುಕೊಂದಿರುವ ಘಟನೆ ಅಮೆರಿಕಾದ ಪೆನ್ಸುಲ್ವೇನಿಯಾದಲ್ಲಿ ನಡೆದಿದೆ. 49 ವರ್ಷದ ಬೆಂಜಮಿನ್ ಗಾರ್ಸಿಯಾ ಗೌಲ್ ಎಂಬಾತ ತನ್ನ ಗೆಳತಿಯನ್ನು ಕ್ಷುಲ್ಲಕ ಕಾರಣಕ್ಕೆ ಇರಿದು ಕೊಂದಿದ್ದಾನೆ. ಇದೀಗ ಈತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಈತ ರಕ್ತಸಿಕ್ತ ಚೂರಿಯೊಂದಿಗೆ ಮತ್ತು ಗರ್ಲ್ ಫ್ರೆಂಡ್ ಮೃತದೇಹದೊಂದಿಗೆ ನಿಂತಿದ್ದ. ಘಟನೆಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದಾರೆ.

ಘಟನೆಯ ಹಿನ್ನೆಲೆ ಏನಂದರೆ, 50 ವರ್ಷದ ಕಾರ್ಮೆನ್ ಮಾರ್ಟಿನೆಝ್ಸಿಲ್ವಾ ಹೊಸ ರೀತಿಯೊಂದರಲ್ಲಿ ಹೇರ್ ಕಟ್ ಮಾಡಿಸಿಕೊಂಡಿದ್ದರು. ಈಕೆ ಹೊಸ ಲುಕ್ ನಲ್ಲಿ ಮನೆಗೆ ಬಂದಾಗ ಆಕೆಯ ಬಾಯ್  ಫ್ರೆಂಡ್ ಗೆಳತಿಯ ಹೊಸ ಲುಕ್ ನೋಡಿ ಕೆಂಡಾಮಂಡಲನಾಗಿದ್ದಾನೆ. ಇನ್ನು ಸಿಟ್ಟಿನಲ್ಲಿ ಇವನೇನು ಮಾಡ್ತಾನೋ ಎಂಬ ಭಯದಿಂದ ಆಕೆ ತನ್ನ ಮಗಳ ಮನೆಯಲ್ಲಿ ರಾತ್ರಿ ಕಳೆದಿದ್ದಾಳೆ. ಆಗಲೇ ಸಿಕ್ಕಾಪಟ್ಟೆ ಅಪ್ ಸೆಟ್ ಆಗಿದ್ದ ಬೆಂಜಮಿನ್ ನನ್ನ ತಾಯಿಯನ್ನು ಚೂರಿಯಿಂದ ಇರಿಯುವುದಾಗಿ ಕಿರಿಚಾಡುತ್ತಿದ್ದ ಎಂದು ಸಂತ್ರಸ್ತೆಯ ಮಗಳು ಪೊಲೀಸರೊಂದಿಗೆ ಹೇಳಿಕೊಂಡಿದ್ದಾಳೆ.

ಮಗಳ ಮನೆಯಲ್ಲಿದ್ದಾಗಲೂ ಬೆಂಜಮಿನ್ ಬಗ್ಗೆ ಭಯಗೊಂಡಿದ್ದ ಕಾರ್ಮೆನ್ ಅಲ್ಲಿಂದ ತನ್ನ ಸಹೋದರನ ಮನೆಗೆ ಹೋಗಿದ್ದಾಳೆ ಮತ್ತುನನ್ನ ಮತ್ತು ನಿನ್ನ ಸಂಬಂಧ ಇಲ್ಲಿಗೆ ಮುಗಿಯಿತು..’ ಎಂದು ಬೆಂಜಮಿನ್ ಬಳಿ ಹೇಳುವಂತೆ ತನ್ನ ಗೆಳತಿಯ ಮೂಲಕ ಹೇಳಿ ಕಳುಹಿಸಿದ್ದಾಳೆ. ಮಾತನ್ನು ಕೇಳಿ ಇನ್ನಷ್ಟು ಕೋಪಗೊಂಡ ಬೆಂಜಮಿನ್ ಆಕೆಯ ಸಹೋದರನ ಮನೆಗೆ ಹೋಗಿ ಆಕೆ ಎಲ್ಲಿದ್ದಾಳೆಂದು ಕೇಳಿದ್ದಾನೆ. ಪ್ರಾರಂಭದಲ್ಲಿ ಆಕೆಯ ಸಹೋದರ ಆಕೆ ಇಲ್ಲಿ ಇಲ್ಲ ಎಂದು ಸುಳ್ಳು ಹೇಳಿ ಕಳುಹಿಸಿದ್ದಾನೆ. ಮಾತನ್ನು ಕೇಳಿ ಹಿಂದಿರುಗಿ ಹೋದ ಬೆಂಜಮಿನ್ ಮತ್ತೆ ಸ್ವಲ್ಪ ಹೊತ್ತಿನಲ್ಲೇ ವಾಪಾಸು ಬಂದು ಬಾಗಿಲು ಬಡಿದಿದ್ದಾನೆ.

ಕಾರ್ಮೆನ್ ಸಹೋದರ ಬಾಗಿಲು ತೆಗೆದ ತಕ್ಷಣ ಬೆಂಜಮಿನ್ ಆತನಿಗೆ ಚೂರಿಯಿಂದ ಇರಿದಿದ್ದಾನೆ. ಇದನ್ನು ಕಂಡು ತನ್ನ ಸಹೋದರನ ರಕ್ಷಣೆಗೆ ಧಾವಿಸಿದ ಕಾರ್ಮೆನ್ ಮೇಲೂ ಬೆಂಜಮಿನ್ ಚೂರಿಯಿಂದ ದಾಳಿ ನಡೆಸಿದ್ದಾನೆ. ಈಕೆಯ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದಂತೆ ಅದನ್ನು ತಡೆಯಲು ಬಂದ ಇನ್ನೊಬ್ಬರ ಮೇಲೂ ಬೆಂಜಮಿನ್ ದಾಳಿ ನಡೆಸಿದ್ದಾನೆ. ಹೀಗೆ ಅಲ್ಲಿದ್ದವರೆಲ್ಲರ ಮೇಲೂ ಯದ್ವಾತದ್ವಾ ಚೂರಿಯಿಂದ ದಾಳಿ ನಡೆಸಿದ ಬೆಂಜಮಿನ್ ದಾಳಿಯ ತೀವ್ರತೆಗೆ ಕಾರ್ಮೆನ್ ಜೀವತೆತ್ತಿದ್ದಾಳೆ.