ಸ್ಪೆಷಲ್ ಸ್ಟೋರಿ

ನಿಮ್ಮ ಹಲ್ಲು ನೋವಿಗೆ ಇಲ್ಲಿದೆ ಪರಿಹಾರ, ಹೀಗೆ ಮಾಡಿ ಹಲ್ಲು ನೋವಿನಿಂದ ಮುಕ್ತಿ ಪಡೆಯಿರಿ..

ಬುದ್ಧಿವಂತಿಕೆಯ ಹಲ್ಲು ನೋವು ನಿವಾರಣೆಗೆ ಈ ಮನೆಮದ್ದನ್ನ ಬಳಸಿ ಹೀಗೆ ಮಾಡಿ..

ಹಲ್ಲುಗಳು ಸುಂದರವಾಗಿದ್ದಷ್ಟು, ಮುಖದ ಸೌಂದರ್ಯ್ಯ ಹೆಚ್ಚುತ್ತದೆ. ಕೈ , ಕಾಲು, ಮುಖ, ಕೂದಲು ಹೀಗೆ ಇವುಗಳ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೋ ಹಾಗೇ ಹಲ್ಲುಗಳ ಬಗ್ಗೆ ಕಾಳಜಿ ವಹಿಸಬೇಕು. 

ನಮಗೆಲ್ಲಾ ಗೊತ್ತೇ ಇರುವ ಹಾಗೆ ಹಲ್ಲಿನ ಸ್ವಚ್ಛತೆಯನ್ನು, ಸರಿಯಾಗಿ ನಿರ್ವಹಿಸದೆ ಇದ್ದಾಗ ಹಲ್ಲು ಬಹುಬೇಗ ಹುಳುಕಾಗುವುದು ಹಾಗೂ ವಿಪರೀತ ನೋವು ಕಾಣಿಸಿಕೊಳ್ಳಲು ಶುರುವಾಗುವುದು. ಪ್ರಮುಖವಾಗಿ ರಾತ್ರಿ ಊಟ ಮಾಡಿದ ಬಳಿಕ ಹಲ್ಲುಜ್ಜದೆ ಇರುವುದರಿಂದ, ಹಲ್ಲಿನ ಸಂದಿಗಳಲ್ಲಿ ಆಹಾರದ ಕಣಗಳು ಹಾಗೆಯೇ ಉಳಿದುಕೊಳ್ಳುತ್ತವೆ. ಇದರಿಂದಲೇ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗಿ ಹಲ್ಲಿನ ಆರೋಗ್ಯವನ್ನು ಹಾಳು ಮಾಡುವುದು ಮಾತ್ರವಲ್ಲದೆ, ತಡೆದುಕೊಳ್ಳಲಾಗದಷ್ಟು ನೋವನ್ನು ಉಂಟು ಮಾಡುತ್ತದೆ.

ಇಂತಹ ಸಮಯದಲ್ಲಿ ಕೆಲವೊಂದು ಮನೆಮದ್ದುಗಳನ್ನು ಪ್ರಯತ್ನಿಸಿ ನೋವನ್ನು ಶಮನಗೊಳಿಸಬಹುದು. ಬನ್ನಿ ಹಲ್ಲುಗಳ ಹಾಗೂ ವಸಡುಗಳ ಸಮಸ್ಯೆಯನ್ನು ದೂರ ಮಾಡುವ ಕೆಲವೊಂದು ಪರಿಣಾಮಕಾರಿಯಾದ ಸಲಹೆಗಳ ಮಾಹಿತಿ ಇಲ್ಲಿದೆ ನೋಡಿ..

ಲವಂಗ ಎಣ್ಣೆ: ಹತ್ತಿ ಸ್ವ್ಯಾಬ್ ಬಳಸಿ ಪೀಡಿತ ಪ್ರದೇಶಕ್ಕೆ ಸ್ವಲ್ಪ ಪ್ರಮಾಣದ ಲವಂಗ ಎಣ್ಣೆಯನ್ನು ಅನ್ವಯಿಸಿ. ಲವಂಗ ಎಣ್ಣೆಯು ನೈಸರ್ಗಿಕ ನೋವು ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಅದು ನೋವನ್ನು ನಿವಾರಿಸಲು ಮತ್ತು ಸೋಂಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

                                                                                                                                                                         ಲವಂಗ ಎಣ್ಣೆ

ಪುದೀನಾ ಎಣ್ಣೆ 
ಪುದೀನಾ ಎಣ್ಣೆ ಎಣ್ಣೆ ಮನೆಯಲ್ಲಿ ಬಳಸುವ ಎಣ್ಣೆಗಳಲ್ಲಿ ಒಂದಾಗಿದೆ. ಪ್ಲೇಕ್ ಅನ್ನು ಕಡಿಮೆ ಮಾಡಲು ಮತ್ತು ಹಲ್ಲು ಮತ್ತು ಒಸಡುಗಳನ್ನು ಸ್ವಚ್ಛಗೊಳಿಸಲು ಇದು ಪರಿಣಾಮಕಾರಿ ಕೆಲಸ ಮಾಡುತ್ತದೆ. ಹತ್ತಿ ಸ್ವ್ಯಾಬ್ ಬಳಸಿ ಸ್ವಲ್ಪ ಪ್ರಮಾಣದ ಪುದೀನಾ ಎಣ್ಣೆಯನ್ನ ತೆಗೆದುಕೊಂಡು ಒಸಡುಗಳಿಗೆ ಹಚ್ಚಿ ಸ್ವಚ್ಛಗೊಳಿಸಿ. ಹೀಗೆ ನಿಮ್ಮ ಬಾಯಿಯ ಆರೋಗ್ಯವನ್ನ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.

ಪುದೀನಾ ಎಣ್ಣೆ 

ಉಪ್ಪು ನೀರು
ಉಪ್ಪು ನೀರು ಬಳಸುವುದರಿಂದ ನಿಮ್ಮ ಹಲ್ಲುಗಳ ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಷ್ಟೆ ಅಲ್ಲಾ ಹಾನಿಗೊಳಗಾದ ಹಲ್ಲುಗಳನ್ನು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ. 

                                                                                                                                                                         ಉಪ್ಪು ನೀರು

ಉಪ್ಪು ನೀರಿನಿಂದ ಹಲ್ಲು ತೊಳೆಯುವುದರಿಂದ ಹಲ್ಲು ಹಾಗೂ ಒಸಡುಗಳಲ್ಲಿ ಸಿಲುಕಿರುವ ಆಹಾರ ಕಣಗಳು ತೆಗೆದುಹಾಕಲು ಸಹಾಯ ಮಾಡುತ್ತದೆ.