ಸದೃಢವಾದ ದೇಹದಲ್ಲಿ ಸದೃಡವಾದ ಮನಸ್ಸಿರುತ್ತದೆ. ಸದೃಡವಾದ ದೇಹಕ್ಕೆ ಏನು ಬೇಕು? ಒಳ್ಳೆಯ ಆಹಾರ, ನಿದ್ಧೆ, ಉತ್ತಮವಾದ ವಾತಾವರಣ. ಇದೆಲ್ಲದರ ಜೊತೆಗೆ ವ್ಯಾಯಾಮವು ನಮ್ಮ ದೇಹವನ್ನ ಸದೃಢವಾಗಿಟ್ಟುಕೊಳ್ಳಲು ಮುಖ್ಯವಾಗಿದೆ. ಅದರಲ್ಲೂ ಮೂರು ಹೊತ್ತು ಅಡುಗೆ, ಮನೆ, ಕೆಲಸ, ಅದು-ಇದು ಅಂತಾ ಬ್ಯೂಸಿಯಾಗಿರುವ ಮಹಿಳೆಯರಂತು ತಮಗಾಗಿ ತಾವು ಸಮುಯವನ್ನೇ ನೀಡುವುದಿಲ್ಲ.. ತಮಗಾಗಿ ಕೊಂಚ ಬಿಡುವನ್ನ ತೆಗೆದುಕೊಂಡು ವ್ಯಾಮಾವನ್ನೂ ಮಾಡುವುದಿಲ್ಲ.
ನಮ್ಮ ಮಹಿಳೆಯರಿಗೆ ದಿನನಿತ್ಯ ಬಿಡುವಿನ ಸಮಯ, ಮುಂಜಾನೆ, ಸಂಜೆ ಸ್ವಲ್ಪ ವ್ಯಾಯಾಮ ಮಾಡಿ ಎಂದರೆ, ನಾವು ನಿತ್ಯ ಸಾಕಷ್ಟು ಮನೆ ಕೆಲಸಗಳನ್ನ ಮಾಡ್ತೇವೆ. ಅದೇ ನಮ್ಮ ದೇಹಕ್ಕೆ ಸಾಕಾಗುತ್ತೆ.. ಆ ಕೆಲಸಗಳೇ ನಮ್ಮನ್ನ ಫಿಟ್‌ಆಗಿರಲು ಸಹಾಯ ಮಾಡುತ್ತೆ ಎಂದುಕೊಂಡಿರುತ್ತೇವೆ. ಆದರೆ, ಮನೆಗೆಲಸ ಮಾಡಿದರೂ ವ್ಯಾಯಾಮ ಮಾಡುವುದು ಅತಿ ಮುಖ್ಯ. ಆರೋಗ್ಯವನ್ನು ಕಾಪಾಡಲು ದಿನನಿತ್ಯ ಮಾಡುವ ಮನೆಕೆಲಸ ಸಾಕಾಗುವುದಿಲ್ಲ, ದೈಹಿಕ ವ್ಯಾಯಾಮವು ಅಗತ್ಯ. ಮನೆಕೆಲಸಗಳನ್ನು ಮಾಡಿದರೂ ವ್ಯಾಯಾಮ ಅತೀ ಮುಖ್ಯ ಕಾರಣ ಇಲ್ಲಿದೆ ನೋಡಿ..
ಮನೆ ಕೆಲಸದ ಹೊರತಾಗಿಯೂ ಮಹಿಳೆಯರು ಏಕೆ ವ್ಯಾಯಾಮ ಮಾಡಬೇಕು
1) ಮನೆಗೆಲಸಗಳಲ್ಲಿ ತೀವ್ರತೆಯ ಕೊರತೆಯಿರುತ್ತದೆ. ನೀವು ಎಲ್ಲಾ ಕೆಲಸಗಳನ್ನು ಸಂಪೂರ್ಣ ಆರಾಮದಿಂದ ಮಾಡುತ್ತೀರಿ. ಇದು ಹೃದಯ ಬಡಿತವನ್ನು ಹೆಚ್ಚಿಸುವುದಿಲ್ಲ ಅಥವಾ ಕ್ಯಾಲೊರಿಗಳನ್ನು ವೇಗವಾಗಿ ಕಳೆದುಕೊಳ್ಳಲು ಸಾಧ್ಯವಾಗಿಸುವುದಿಲ್ಲ.
2) ಪ್ರತಿದಿನ ಒಂದೇ ರೀತಿಯ ಮನೆಕೆಲಸಗಳನ್ನು ಮಾಡುವ ಮೂಲಕ, ದೇಹವು ಅದಕ್ಕೆ ಒಗ್ಗಿಕೊಳ್ಳುತ್ತದೆ. ಇದು ನಿಮ್ಮ ಫಿಟ್ನೆಸ್ ಮಟ್ಟದ ಮೇಲೆ ಪರಿಣಾಮ ಬೀರುವುದಿಲ್ಲ. ವ್ಯಾಯಾಮ ಮಾಡುವಾಗ ಫಿಟ್ನೆಸ್ ಹೆಚ್ಚಾಗುತ್ತದೆ ಮತ್ತು ದೇಹದ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
3) ಮನೆಕೆಲಸಗಳನ್ನು ಮಾಡುವುದರಿಂದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವುದಿಲ್ಲ. ಹೀಗಾಗಿ ವ್ಯಾಯಾಮ ಮಾಡುವುದು ಅತಿ ಅಗತ್ಯ.
4) ಮನೆಕೆಲಸಗಳು ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. . ಆದರೆ, ವ್ಯಾಯಾಮ ಮಾಡಿದಾಗ, ಅದು ಗಮನವನ್ನು ಸುಧಾರಿಸುತ್ತದೆ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿದೆ.
5) ಮನೆಕೆಲಸಗಳಿಂದ ಸ್ನಾಯುಗಳಿಗೆ ಯಾವುದೇ ರೀತಿಯಲ್ಲಿ ಶಕ್ತಿ ಸಿಗುವುದಿಲ್ಲ. ಅಲ್ಲದೆ, ಹೃದಯರಕ್ತನಾಳದ ಆರೋಗ್ಯದ ಮೇಲೆ ಮನೆಕೆಲಸಗಳನ್ನು ಮಾಡುವುದರಿಂದ ಯಾವುದೇ ಪರಿಣಾಮವಿಲ್ಲ.
6) ಕಸ ಗುಡಿಸುವುದು ಮತ್ತು ಒರೆಸುವ ಮೂಲಕ ಬಹಳ ಸೀಮಿತ ದೈಹಿಕ ಕೆಲಸವಾಗುತ್ತದೆ. ನೀವು ಕೈಗಳ ಸಹಾಯದಿಂದ ಮಾತ್ರ ಗುಡಿಸುತ್ತೀರಿ ಮತ್ತು ಒರೆಸುತ್ತೀರಿ. ಈ ಕಾರಣದಿಂದಾಗಿ ಕಾಲು ಮತ್ತು ಸೊಂಟದ ಸ್ನಾಯುಗಳನ್ನು ಗುರಿಯಾಗಿಸಲಾಗುವುದಿಲ್ಲ.