ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ಹತ್ತಾರು ಸಮಸ್ಯೆ ನಿತ್ಯ ಮನುಷ್ಯನನ್ನ ಬಾದಿಸುತ್ತಿರುತ್ತೇ.. ನಿನ್ನೆ ತಲೆನೋವು.. ಇಂದು ಕಾಲು ಊತ.. ನಾಳೆ ಮತ್ತೊಂದು. ಹೀಗೆ ಒಂದಲ್ಲಾ ಒಂದು ಕಾಯಿಲೆಗಳು ನಮ್ಮನ್ನ ಬಿಡದೇ ಕಾಡುತ್ತವೆ.
ಈಗಂತು ನಮ್ಮ ಜನ ಸಣ್ಣ-ಪುಟ್ಟ ಕಾಯಿಲೆಗಳಿಗೂ ಆಸ್ಪತ್ರೆಯ ಬಾಗಿ ಬಡಿದು, ಸಾವಿರಾರು ರುಪಾಯಿ ವೈದ್ಯರಿಗೆ ಸುರಿದು ಬರ್ತಾರೆ. ಆದ್ರೆ ಹಿತ್ತಲ ಗಿಡ ಮದ್ದಲ್ಲ ಅನ್ನೂ ಹಾಗೆ ನಮ್ಮ ಮನೆಯಲ್ಲಿಯೇ ಇರುವ ಮನೆಮದ್ದು ಕೂಡ ಅದೆಷ್ಟೋ ಕಾಯಿಯನ್ನ ಗುಣಪಡಿಸುತ್ತೆ. ಆದರೆ ಸಾಕಷ್ಟು ಜನರಿಗೆ ಈ ಬಗ್ಗೆ ಮಾಹಿತಿ ಸ್ವಲ್ಪ ಕಡಿಮೆ.. ಆದ್ರೆ ನಾಟಿ ಔಷಧಿಯಿಂದ ಕಾಯಿಲೆಗಳನ್ನ ಹೇಗೆ ಗುಣಪಡಿಸಿಕೊಳ್ಳಬಹುದು ಇಲ್ಲಿದೆ ಮಾಹಿತಿ..
ಕೊತ್ತಂಬರಿ : ನಮ್ಮ ಮನೆಯ ಸಾಂಬಾರು ಪಾದಾರ್ಥಗಳೊಂದಿಗಿರುವ ಕೊತ್ತಂಬರಿ ಬೀಜ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸ್ಪಲ್ಪ ಕೊಂತ್ತಂಬರಿಯನ್ನ ತೆಗೆದುಕೊಂಡು ಕಷಾಯ ಮಾಡಿ ದನದ ಹಾಲು ಮತ್ತು ಸಕ್ಕರೆ ಹಾಕಿ ರಾತ್ರಿ ಮಲಗುವ ಮುನ್ನ ಕುಡಿದರೆ ಎದೆ ನೋವು ಮಾಯವಾಗುತ್ತೆ.
ಒಣ ದ್ರಾಕ್ಷಿ: ರಾತ್ರಿ ಒಣದ್ರಾಕ್ಷಿಯನ್ನ ನೆನೆಸಿಟ್ಟು ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೊಟ್ಟೆಯ ಉರಿ ನಿವಾರಣೆಯಾಗುತ್ತದೆ.
ಬಾಳೆದಿಂಡು : ಬಾಳೆ ದಿಂಡು ಹತ್ತು-ಹಲವು ಕಾಯಿಲೆಗಳಿಗೆ ಮಹಾ ಮದ್ದು. ಬಾಳೆಯ ಗಿಡದ ಅಡಿಯಿಂದ ಹಿಡಿದು ಬುಡದ ವರೆಗೂ ಔಷಧಿಯ ಗುಣವನ್ನ ಹೊಂದಿದೆ. ಬಾಳೆಯ ದಿಂಡಿನ ಪಲ್ಯಮಾಡಿ ಊಟದ ಜೊತೆ ಸೇವಿಸಿದರೆ ಕರುಳಿನಲ್ಲಿರುವ ಕ್ರಿಮಿಗಳು ನಾಶವಾಗಗುತ್ತದೆ. ಜೊತೆಗೆ ಹೊಟ್ಟೆನೋವು ಕೂಡ ಕಡಿಮೆಯಾಗುತ್ತದೆ.
ತುಳಸಿರಸ : ಉಪ್ಪಿನ ಜೊತೆ ತುಳಸಿ ರಸವನ್ನ ಮಿಶ್ರಣ ಮಾಡಿ ಕಿವಿಯೊಳಗೆ ಹಾಕಿದರೆ ಕಿವಿಯೋಳಗಿನ ಕ್ರಿಮಿಗಳು ಸತ್ತು, ನೋವು ನಿವ ಆರಣೆಯಾಗುತ್ತದೆ.
ವೀಳ್ಯದ ಎಲೆ : ವೀಲ್ಯದೆಲೆ, ಕಪ್ಪು ತುಳಸಿ ಮತ್ತು ಲವಂಗವನ್ನು ಅರೆದು ಜೇನು ಹನಿಯೊಂದಿಗೆ ಬೆರೆಸಿ ಸೇವನೆ ಮಾಡಿದರೆ ಕಫ ಮತ್ತು ಕೆಮ್ಮು ಮಾಯವಾಗುತ್ತದೆ.