ಸ್ಪೆಷಲ್ ಸ್ಟೋರಿ
2025ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಷ್ಟು ಸೇಫ್?
ಸಿದ್ದರಾಮಯ್ಯ ಪಟ್ಟುಗಳನ್ನ ಅರಿಯದ ಕೆಲವರು ದೆಹಲಿಗೆ ಶಿಫ್ಟ್ ಆದ್ರೆ ಹಲವರು ರಾಜ್ಯದಲ್ಲಿ ಸಿದ್ದರಾಮಯ್ಯ ಅವಧಿ ಮುಗಿದ್ರೆ ನಾನೇ ಅಂತ ಹೇಳಿಕೊಳ್ಳುತ್ತಿದ್ದಾರೆ.. ಹಾಗಾದ್ರೆ ಯಾರ್ಯಾರು? ಸಿದ್ದರಾಮಯ್ಯಗೆ ಈ ವರ್ಷ ಯಾಕೆ ಸೇಫ್ ಅಲ್ಲ 2010ರಲ್ಲಿ ಆರಂಭವಾದ ಸಿದ್ದರಾಮಯ್ಯ ಶುಕ್ರದೆಸೆ ಮುಗಿಯುತ್ತಾ ಬಂತಾ ಒಮ್ಮೆ ಇದನ್ನ ಓದು ಬಿಡಿ.
ಈ ವರ್ಷ ಸಿಎಂ ಸಿದ್ದರಾಮಯ್ಯ ಸೇಫ್ ಆಗಿದ್ದಾರೆ. ಆದ್ರೆ 2025ಕ್ಕೆ ಸಿಎಂ ಸ್ಥಾನ ಅಷ್ಟು ಸೇಫ್ ಅಲ್ಲ ಅನ್ನೋ ಚರ್ಚೆ ಕಾಂಗ್ರೆಸ್ ನಲ್ಲಿ ಆರಂಭವಾಗಿದೆ. ಸಿದ್ದರಾಮಯ್ಯ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಬಳಿಕ ನಿಷ್ಠಾವಂತ ಕಾಂಗ್ರೆಸ್ ನಾಯಕರಿಗಿಂತಲೂ ಹೆಚ್ಚು ಸ್ಥಾನಮಾನಗಳು ಅನುಭವಿಸಿದ್ದಾರೆ. ಕೆಲ ಸಮಯ ಅಧಿಕಾರ ಹುಡುಕಿಕೊಂಡು ಬಂದಿದೆ. ಕೆಲ ಸ್ಥಾನಮಾನಗಳನ್ನ ಪಡೆಯಲು ತಮ್ಮ ರಾಜಕೀಯ ಪಟ್ಟುಗಳಿಂದ ಕಿತ್ತುಕೊಂಡಿದ್ದು ಇದೆ. ಸಿದ್ದರಾಮಯ್ಯ ಅರ್ಹರಲ್ಲವೇ ಅಂತ ಕೇಳಿದ್ರೆ ಖಂಡಿತ ಅರ್ಹರೇ. ಅದ್ರೆ ಸಿದ್ದರಾಮಯ್ಯರಷ್ಟೇ ಅರ್ಹರು ಹಲವರು ಇದ್ದರು. ಅವರನ್ನ ದಾಟಿ ಆ ಜವಾಬ್ದಾರಿ, ಅಧಿಕಾರ ಪಡೆಯುವಲ್ಲಿ ಸಿಎಂ ಸಿದ್ದರಾಮಯ್ಯ ಸಕ್ಸಸ್ ಆಗಿದ್ದಾರೆ. ಸಿದ್ದರಾಮಯ್ಯ ಪಟ್ಟುಗಳನ್ನ ಅರಿಯದ ಕೆಲವರು ದೆಹಲಿಗೆ ಶಿಫ್ಟ್ ಆದ್ರೆ ಹಲವರು ರಾಜ್ಯದಲ್ಲಿ ಸಿದ್ದರಾಮಯ್ಯ ಅವಧಿ ಮುಗಿದ್ರೆ ನಾನೇ ಅಂತ ಹೇಳಿಕೊಳ್ಳುತ್ತಿದ್ದಾರೆ.. ಹಾಗಾದ್ರೆ ಯಾರ್ಯಾರು? ಸಿದ್ದರಾಮಯ್ಯಗೆ ಈ ವರ್ಷ ಯಾಕೆ ಸೇಫ್ ಅಲ್ಲ 2010ರಲ್ಲಿ ಆರಂಭವಾದ ಸಿದ್ದರಾಮಯ್ಯ ಶುಕ್ರದೆಸೆ ಮುಗಿಯುತ್ತಾ ಬಂತಾ ಒಮ್ಮೆ ಇದನ್ನ ಓದು ಬಿಡಿ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆರು ತಿಂಗಳು ಮುಗಿದು ಹೋಗಿದೆ.2023 ಹಾಗೂ 2024 ಎರಡು ವರ್ಷಗಳನ್ನ ಯಶಸ್ವಿಯಾಗಿ ಪೂರೈಸಿದ ಸಿಎಂ ಸಿದ್ದರಾಮಯ್ಯಗೆ 2025 ಅಷ್ಟು ಸುಲಭವಲ್ಲ ಅನ್ನೋ ಚರ್ಚೆ ನಡೆಯುತ್ತಿದೆ.ಯಾಕಂದ್ರೆ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳು ಸಾಲುಗಟ್ಟಿ ನಿಂತಿದ್ದು ಸಿದ್ದರಾಮಯ್ಯ ಅಧಿಕಾರ ಅನುಭವಿಸಿದ್ದಾಯಿತು ನಮಗೂ ಅವಕಾಶ ಕೊಡಿ ಎಂದು ಹೈಕಮಾಂಡ್ ಮೇಲೆ ಒತ್ತಾಯ ತರುತ್ತಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ಗೆ ಬಂದ ದಿನದಿಂದಲೂ ಒಂದಲ್ಲಾ ಒಂದು ಅಧಿಕಾರವನ್ನ ಅನುಭವಿಸಿದ್ದಾರೆ.ಹಾಗೇ ನೋಡಿದ್ರೆ ಜನತಾ ಪರಿವಾರಕಿಂತಲೂ ಹೆಚ್ಚು ಅಧಿಕಾರವನ್ನ ಕಾಂಗ್ರೆಸ್ ನೀಡಿದೆ.ಹೀಗಾಗಿ ಸಿದ್ದರಾಮಯ್ಯ ಅವರನ್ನ ಇಳಿಸಿ ನಮಗೆ ಅವಕಾಶ ಮಾಡಿಕೊಡಿ ಅನ್ನೋ ಕೂಗು ಸದ್ದಿಲ್ಲದೇ ಶುರುವಾಗಿದೆ.
ದಳ ತೊರೆದ ಸಿದ್ದರಾಮಯ್ಯ ಯಾರ್ಯರಿಗೆ ಮುಳುವಾದ್ರು..?
ಎಲ್ಲವೂ ಸರಿಯಾಗಿ ನಡೆದಿದ್ದರೆ ದೇವೇಗೌಡರು ಮನಸು ಮಾಡಿದ್ರೆ ಸಿದ್ದರಾಮಯ್ಯ 2004ರ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಬೇಕಿತ್ತು ಆದ್ರೆ ಅಂದು ದೇವೇಗೌಡ ಕುಮಾರಸ್ವಾಮಿ ಸೇರಿ ಸಿಎಂ ಸ್ಥಾನವನ್ನ ಕಾಂಗ್ರೆಸ್ಗೆ ಬಿಟ್ಟುಕೊಟ್ಟ ಪರಿಣಾಮ ಸಿದ್ದರಾಮಯ್ಯ ಡೆಪ್ಯುಟಿ ಸಿಎಂ ಆದ್ರೂ. ಬಳಿಕ ಅಹಿಂದ ಸಮಾವೇಶಗಳಲ್ಲಿ ಸಿದ್ದರಾಮಯ್ಯ ಪದೇ ಪದೇ ಕಾಣಿಸಿಕೊಂಡಿದ್ದು ದೇವೇಗೌಡರ ಕೋಪಕ್ಕೆ ಕಾರಣವಾಗಿ ಜೆಡಿಎಸ್ ಪಕ್ಷದಿಂದ ಉಚ್ಚಾಟನೆಗೊಂಡರು.ತದ ಬಳಿಕ ಸಿದ್ದರಾಮಯ್ಯ ಸ್ವಂತ ಪಕ್ಷ ಕಟ್ಟಿದ್ರೂ ಸಹ ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದ ಕಾಂಗ್ರೆಸ್ ಜತೆ ವೀಲಿನ ಮಾಡಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.2006ರಲ್ಲಿ ನಡೆದ ಚಾಮುಂಡೇಶ್ವರಿ ಚುನಾವಣೆ ಸಿದ್ದರಾಮಯ್ಯ ರಾಜಕೀಯ ಜೀವನಕ್ಕೆ ತಿರುವು ಕೊಡ್ತು.ಸಿದ್ದರಾಮಯ್ಯ ಅವರನ್ನ ಸೋಲಿಸಲೇಬೇಕು ಅಂತ ಹಠ ತೊಟ್ಟಿದ್ದ ದೇವೇಗೌಡರು ಹಾಗು ಕುಮಾರಸ್ವಾಮಿ ಕ್ಷೇತ್ರದಲ್ಲಿ ಟೀಕಾಣಿ ಹಾಕಿ ಇನ್ನಿಲ್ಲದ ಕಸರತ್ತು ಮಾಡಿದ್ರು. ಆದ್ರೆ ಅಂದು ಸಿದ್ದರಾಮಯ್ಯ ಗೆಲುವಿಗೆ ಕಾರಣವಾದವರು ಮಲ್ಲಿಕಾರ್ಜುನ ಖರ್ಗೆ,ವಿಶ್ವನಾಥ್,ಸಿ.ಎಂ ಇಬ್ರಾಹಿಂ ಕೂಡಿ ಮಾಡಿದ ಪ್ಲಾನ್ ಸಕ್ಸಸ್ ಆಗಿ ಸಿದ್ದರಾಮಯ್ಯ ಕೇವಲ 260 ಮತಗಳ ಅಂತರದಿಂದ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದರು.ಒಂದು ವೇಳೆ ಅಂದು ಸಿದ್ದರಾಮಯ್ಯ ಸೋತಿದ್ರೆ ಸಿದ್ದರಾಮಯ್ಯ ಎರಡು ಬಾರಿ ವಿಪಕ್ಷ ನಾಯಕ ಎರಡು ಬಾರೀ ಸಿಎಂ ಆಗೋದು ಕನಸಿನ ಮಾತಾಗುತ್ತಿತ್ತು.
ಚಾಮುಂಡೇಶ್ವರಿ ಗೆಲುವು ಸಿಎಂ ಮಾಡಿಬಿಡ್ತು.. ರಾಜಕೀಯ ಪೆಟ್ಟು ತಿಂದ ಆ ಮೂವರು ನಾಯಕರು
ಚಾಮುಂಡೇಶ್ವರಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆಲುವು ದಾಖಲಿಸಿದ ಬಳಿಕ ಅವರ ರಾಜಕೀಯ ಗ್ರಾಪ್ ಏರಿಕೆ ಶ್ರೇಣಿಯಲ್ಲಿ ಬೆಳೆಯಿತು. ಸಿದ್ದರಾಮಯ್ಯ ಕಾಂಗ್ರೆಸ್ಗೆ ಬಂದಿದ್ದರಿಂದ ವಿಶ್ವನಾಥ್ ಸಂಸದರಾಗಿ ದೆಹಲಿ ಪೊಲಿಟಿಕ್ಸ್ಗೆ ಶಿಫ್ಟ್ ಆದ್ರು. ಸಿದ್ದರಾಮಯ್ಯ ಕುರುಬ ಸಮುದಾಯಕ್ಕೆ ರಾಜ್ಯದಲ್ಲಿ ಪ್ರಶ್ನೇತಿತಾ ನಾಯಕರಾಗಿ ಬಳಿಕ ಅಹಿಂದದ ಪರಮೊಚ್ಚನಾಯಕರಾಗಿ ಬೆಳೆದರು. ಸಿದ್ದರಾಮಯ್ಯ ಎಂಟ್ರಿ ಇಂದ ಮಲ್ಲಿಕಾರ್ಜುನ ಖರ್ಗೆ ಅವರನ್ನ ಹೈಕಮಾಂಡ್ ದೆಹಲಿ ರಾಜಕಾರಣಕ್ಕೆ ಕರೆಸಿಕೊಳ್ತು ಅಲ್ಲಿಗೆ ಖರ್ಗೆ ರಾಜ್ಯ ಮರೆತು ಹೈಕಮಾಂಡ್ ಮನೆ ಮುಂದೆಯೇ ಇರುವಂತಾಯಿತು. ಇತ್ತ ರಾಜ್ಯ ಕಾಂಗ್ರೆಸ್ಗೆ ಒಬ್ಬೊಬ್ಬರೇ ತಮ್ಮ ಹಿಂಬಾಲಕರನ್ನ ಸಿದ್ದರಾಮಯ್ಯ ಸೇರಿಸಿಕೊಂಡು ದಿನೇ ದಿನೇ ಸ್ಟ್ರಾಂಗ್ ಆಗುತ್ತಾ ಹೋದ್ರು.
2013ರಲ್ಲಿ ಪಕ್ಷ ಗೆಲ್ಲಿಸಿ ತಾನು ಸೋತ ಪರಮೇಶ್ವರ್
ಕಾಂಗ್ರೆಸ್ ಯಾರ ಅಧ್ಯಕ್ಷತೆಯಲ್ಲಿ ಅಧಿಕಾರಕ್ಕೆ ಬರುತ್ತೋ ಅವರು ಸಿಎಂ ಸ್ಥಾನ ಅಲಂಕಾರಿಸುತ್ತಾರೆ.ಅದು ಎಸ್ಎಂ ಕೃಷ್ಣ ಇರೋವರೆಗೂ ನಡೆಯಿತು. ಆದ್ರೆ 2013ರಲ್ಲಿ ಪರಮೇಶ್ವರ್ ಕೊರಟಗೆರೆಯಲ್ಲಿ ಗೆರೆ ದಾಟಲು ಆಗದೇ ಜೆಡೆಎಸ್ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದರು. ಅಂದು ವಿಪಕ್ಷ ನಾಯಕನಾಗಿದ್ದ ಸಿದ್ದರಾಮಯ್ಯ ಸಲೀಸಾಗಿ ಸಿಎಂ ಸ್ಥಾನದಲ್ಲಿ ಕೂತು ಬಿಟ್ರು. ಅಲ್ಲಿಂದ ಸಿದ್ದರಾಮಯ್ಯ್ ಕಾಂಗ್ರೆಸ್ ಲ್ಲಿ ಡಬಲ್ ಪವರ ಬಂತು. ಹೈಕಮಾಂಡ್ 2014ರ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಬಳಿಕ ಸಿದ್ದರಾಮಯ್ಯ ನಾಗಲೋಟಕ್ಕೆ ಬ್ರೇಕ್ ಹಾಕದ ಪರಿಸ್ಥಿತಿ ನಿರ್ಮಾಣವಾಯಿತು. 2018ರಲ್ಲಿ ಸಿದ್ದರಾಮಯ್ಯ ಬಾದಾಮಿಯಲ್ಲಿ ಗೆಲ್ಲೋ ಮೂಲಕ ಮತ್ತೆ ರಾಜಕೀಯ ಹುಟ್ಟು ಪಡೆದರು ಯಾಕಂದ್ರೆ ಅಂದು ಮತದಾರ ಸಮ್ಮಿಶ್ರ ಸರ್ಕಾರ ರಚಿಸುವಂತೆ ಆದೇಶ ಮಾಡಿದ್ದ ಆಗ ಕುಮಾರಸ್ವಾಮಿ ಸಿಎಂ ಆದ್ರೂ. ಈ ಮೈತ್ರಿ ಬಹಳ ದಿನ ಉಳಿಯಲಿಲ್ಲ 2019 ಜುಲೈ ತಿಂಗಳಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಯಾಯಿತು ಸಿದ್ದರಾಮಯ್ಯ ಮತ್ತೆ ವಿರೋಧ ಪಕ್ಷದ ನಾಯಕರಾದ್ರು. ಬಳಿಕ ನಡೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನ ಗೆದ್ದ ಪರಿಣಾಮ ಡಿಕೆ ಶಿವಕುಮಾರ್ ಗುದ್ದಾಟದ ನಡುವೆಯೂ ಸಿದ್ದರಾಮಯ್ಯ ಮೊದಲ ಪಾಳಿಗೆ ಸಿಎಂ ಆದ್ರು.
ಎರಡನೇ ಪಾಳಿಗೆ ಸಿಎಂ ಯಾರು?
ಅಂದು ಡಿಕೆ ಶಿವಕುಮಾರ್ ನಾನು ಪಕ್ಷದ ಅಧ್ಯಕ್ಷನಾಗಿರುವುದರಿಂದ ನನಗೆ ಅವಕಾಶ ಕೊಡಬೇಕು ಅಂತ ಪಟ್ಟು ಹಿಡಿದ್ರು. ಆದೆ ಸಿದ್ದರಾಮಯ್ಯ ನಾನು ಸಿನಿಯರ್ ಇದ್ದೇನೆ 2024 ರ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿ ಇಟ್ಕೊಂಡು ನನಗೆ ಅವಕಾಶ ಕೊಡಿ ಎಂದು ಪಟ್ಟು ಹಿಡಿದ್ರು.ಲೋಕಸಭಾ ಚುನಾವಣೆ ಮುಗಿಯಿತು.ಸಿದ್ದರಾಮಯ್ಯ ಸಿಎಂ ಆಗಿ ಎರಡು ವರ್ಷಗಳನ್ನ ಕಂಪ್ಲೀಟ್ ಮಾಡ್ತಿದ್ದಾರೆ ಹೀಗಾಗಿ ನಮಗೆ ಅವಕಾಶ ಕೊಡಿ ಅಂತ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ.ಅದ್ರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅದರಲ್ಲಿ ಮೊದಲಿಗರು ಅಂದು ನನಗೆ ಕೊಟ್ಟ ಮಾತು ಉಳಿಸಿಕೊಳ್ಳಿ ಎಂದು ಹೈಕಮಾಂಡ್ಗೆ ಒತ್ತಡ ತಂದಿದ್ದಾರೆ.ಅಲ್ಲದೇ ಪರಮೇಶ್ವರ್ ಸಹ ನಾನು ಸಮ್ಮಿಶ್ರ ಸರ್ಕಾರದಲ್ಲಿ ಡಿಸಿಎಂ ಆಗಿದ್ದೇ ನಮ್ಮ ಸರ್ಕಾರ ಬಂದ ಬಳಿಕ ನನಗೆ ಡಿಸಿಎಂ ಹುದ್ದೆ ಕೊಡಲಿಲ್ಲ. ಪಕ್ಷಕ್ಕೆ ನಾನು ದುಡಿದಿದ್ದೇನೆ ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷನಾಗಿ ಸುಧೀರ್ಘ ಸೇವೆ ಮಾಡಿದ್ದೇನೆ. ನನ್ನನ್ನ ಸಹ ಪರಿಗಣಿಸಿ ಎಂದು ಹೈಕಮಾಂಡ್ ಬಳಿ ಒತ್ತಡ ಹಾಕಿದ್ದಾರೆ. ನಾಯಕರ ಲಾಭಿ ಪಾಲಿಟಿಕ್ಸ್ಗೆ ತಲೆ ಕೆಡಿಸಿಕೊಳ್ಳದ ಸಿಎಂ ಸಿದ್ದರಾಮಯ್ಯ ತಮ್ಮ ಶಾಸಕರ ಮೂಲಕ ಹಾಗೂ ಸಮಾವೇಶಗಳ ಮೂಲಕ ಸಂದೇಶವನ್ನ ಹೈಕಮಾಂಡ್ ರವಾನೆ ಮಾಡಲು ಮುಂದಾಗಿದ್ದಾರೆ. ನನ್ನ ಜತೆ ಜನ ಇದ್ದಾರೆ ಶಾಸಕರು ಇದ್ದಾರೆ ಉಳಿಕೆಯದ್ದು ನಿಮಗೆ ಬಿಟ್ಟಿದ್ದು ಅನ್ನೋ ಸಂದೇಶ ರವಾನೆ ಮಾಡಿದ್ದಾರೆ..
ಡಿಕೆಶಿ ಸಿಎಂ..? ಯತೀಂದ್ರ ಮಿನಿಸ್ಟರ್..? ಸಿದ್ದು ಡೆಲ್ಲಿ?
ಕಾಂಗ್ರೆಸ್ ಹೈಕಮಾಂಡ್ಗೆ ಈಗ ತಲೆಬಿಸಿ ಶುರುವಾಗಿದೆ. ಈಗಗಲೇ ಎಲ್ಲ ಅಧಿಕಾರ ಪಡೆದಿರುವ ಸಿದ್ದರಾಮಯ್ಯನ ಕಿತ್ತು ಹಾಕಿದ್ದೇ ಆದ್ರೆ ಅಹಿಂದ ವರ್ಗ ನಮ್ಮ ವಿರುದ್ಧ ನಿಂತು ಕೊಳ್ಳಬಹುದು. ಇಲ್ಲವೇ ಸಿದ್ದರಾಮಯ್ಯನ ಆಪ್ತ ಶಾಸಕರು ಬೇರೆ ರೀತಿಯಲ್ಲಿ ಯೋಚನೆ ಮಾಡಿದ್ರೆ ಅದರ ಲಾಭವನ್ನ ಬಿಜೆಪಿ ಪಡೆಯಲು ಮುಂದಾಗಬಹದು. ಇತ್ತ ಡಿಕೆ ಶಿವಕುಮಾರ್ಗೆ ಕೊಡದಿದ್ದರೆ ಒಕ್ಕಲಿಗ ಸಮುದಾಯ ನಮ್ಮ ವಿರುದ್ಧ ನಿಂತುಕೊಳ್ಳಬಹುದು ಅನ್ನೊ ತಲೆಬಿಸಿ ಶುರುವಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರನ್ನ ದೆಹಲಿ ಪಾಲಟಿಕ್ಸ್ ಗೆ ಕರೆಸಿಕೊಂಡು ಯತೀಂದ್ರಗೆ ಒಳ್ಳೆಯ ಇಲಾಖೆ ಕೊಡಿಸಲು ಪ್ಲಾನ್ ನಡೆದಿದೆ ಎನ್ನಲಾಗಿದೆ.