ಕರ್ನಾಟಕ

ಸಿಟಿ ರವಿ ಗೆ ಭಯೋತ್ಪಾದಕನ ಟ್ರಿಟ್ಮೆಂಟ್ ಸರಿಯಾ? ; ಬಿಜೆಪಿ

ಎಲ್ಲ ಮಹಿಳೆಯರನ್ನು ಪ್ರತಿನಿಧಿಸುತ್ತಿದ್ದೇನೆ. ಆದರೆ ಸಿ.ಟಿ ರವಿ ಆ ಮಾತನ್ನು ಹತ್ತು ಬಾರಿ ಹೇಳಿ ತೇಜೋವಧೆ ಮಾಡಿದರು. ಇದಕ್ಕೆಲ್ಲಾ ಹೆದರುವುದಿಲ್ಲ. ಒಬ್ಬ ತಾಯಿ, ಅಕ್ಕ, ಅತ್ತೆಯಾಗಿದ್ದೇನೆ. ಇವತ್ತು ನನ್ನ ನೋಡಿ, ಸಾವಿರಾರು ಮಹಿಳೆಯರು ರಾಜಕೀಯಕ್ಕೆ ಬರಬೇಕು ಎಂದು ಇದ್ದಾರೆ. ಸದನದಲ್ಲಿ ಈ ರೀತಿ ಮಾತನಾಡಿದರೆ ಬಹಳ ಹರ್ಟ್​ ಆಗುತ್ತದೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಅಸಂಸದೀಯ ಪದ ಬಳಕೆ ಮಾಡಿದ್ರು ಅಂತ ನಿನ್ನೆ ಎಫ್ಐಆರ್ ದಾಖಲು ಮಾಡಿದ ಪೊಲೀಸರು ಸಿಟಿ ರವಿ‌ ಅವರನ್ನ ಬಂಧಿಸಿದ್ದಾರೆ.ಅಷ್ಟೇ ಅಲ್ಲದೇ ಸಿಟಿ ರವಿ ಅವರನ್ನ ಇಡೀ ರಾತ್ರಿ ಬೆಳಗಾವಿ ಗದಗ ಹಲವು ನಗರಗಳಲ್ಲಿ ರೌಂಡ್ಸ ಹಾಕಿಸಿದ್ದಾರೆ.ಈ ನಡುವೆ ಸಿಟಿ ರವಿ ತಲೆಗೆ ಗಾಯ ಸಹ ಆಗಿದೆ. ಪೊಲೀಸರು ಬಂಧಿಸಿದ ಬಳಿಕ ಸಿಟಿ ರವಿ ಅವರನ್ನ ನ್ಯಾಯದೀಶರ ಮುಂದೆ ಹಾಜರು ಪಡಿಸಬೇಕಿತ್ತು ಆದ್ರೆ ಅದನ್ನ ಮಾಡದೇ ರಾತ್ರಿಯೆಲ್ಲಾ ಸುತ್ತಾಡಿಸಿದ್ದು ಎಷ್ಟು ಮಾತ್ರ ಸರಿ‌..ಇದಕ್ಕೆ ಸರ್ಕಾರದ ಕುಮ್ಮಕ್ಕು ಇದೆ.ಸಿಎಂ ಹಾಗೂ ಡಿಸಿಎಂ ಕುಮ್ಮಕ್ಕು ಇದೆ ಅಂತ ಬಿಜೆಪಿ ನಾಯಕರು ಆರೋಪ ಮಾಡ್ತಿದ್ದಾರೆ.