ಕರ್ನಾಟಕ
ನನ್ನ ರಾಜಕೀಯವಾಗಿ ಮುಗಿಸಲು ಜನಾರ್ಧನ ರೆಡ್ಡಿ ಷಡ್ಯಂತ್ರ : ಶ್ರೀರಾಮುಲು
ಉಸ್ತುವಾರಿ ರಾಧಾಮೋಹನ್ ದಾಸ್‌ಗೆ ಏನೇನೋ ಹೇಳಿಕೊಟ್ಟು ಮಾತನಾಡಿಸಿದ್ದಾರೆ, ನಾನು ಹೇಳಿದ್ದೇ ನಡೆಯಬೇಕು ಎಂದು ಜನಾರ್ಧನ ರೆಡ್ಡಿ ಹೀಗೆಲ್ಲಾ ಮಾಡ್ತಾರೆ ಎಂದು ಆರೋಪಿಸಿದ್ದಾರೆ. ನಿನ್ನೆ ಕೋರ್ ಕಮಿಟಿಯಲ್ಲಿ ನಡೆದ ಚರ್ಚೆ ನನಗೆ ಬೇಸರ ತರಿಸಿದೆ.
ಬಿಜೆಪಿಯಲ್ಲಿ ದಿನಕ್ಕೊಂದು ಬೆಳವಣಿಗೆ ಮಧ್ಯೆ ಮಾಜಿ ಸಚಿವ ಶ್ರೀರಾಮುಲು ಬಿಜೆಪಿ ತೊರೆಯುವ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ. ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ನನ್ನ ಕುಟುಂಬದ ಮೇಲೆ ಸೇಡಿದೆ, ನನ್ನನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ. ಸಂಡೂರು ಬೈಎಲೆಕ್ಷನ್ ವಿಚಾರವಾಗಿ ಕೆಲಸ ಮಾಡಿಲ್ಲ ಎಂದು ಉಸ್ತುವಾರಿ ರಾಧಾ ಮೋಹನ್ ದಾಸ್ ಮಾತನಾಡಿದ್ದಾರೆ.. ಈ ರೀತಿ ಎಲ್ಲಾ ಜನಾರ್ಧನ ರೆಡ್ಡಿ ಹೇಳಿಕೊಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ. 30 ವರ್ಷದ ರಾಜಕಾರಣದಲ್ಲಿ ನನ್ನ ಮೇಲೆ ಆರೋಪವಿಲ್ಲ, ರಾಧಾ ಮೋಹನ್‌ದಾಸ್ ತಿಳಿದುಕೊಂಡು ಮಾತನಾಡಬೇಕು ಎಂದು ಪಕ್ಷದ ಹಿರಿಯರ ವಿರುದ್ಧವೇ ಶ್ರೀರಾಮುಲು ಬೇಸರ ವ್ಯಕ್ತಪಡಿಸಿದ್ದಾರೆ. ರಾಮುಲು ಏನ್ ಹೇಳಿದ್ರೂ ಕೇಳ್ತಾನೆ ಅಂತಾ ತಿಳಿದಿದ್ದಾರೆ, ಸಂಡೂರು ಎಲೆಕ್ಷನ್ ಕುರಿತು ವರದಿಗೂ ಮುನ್ನವೇ ಅದ್ಹೇಗೆ ಅವರಿಗೆ ನನ್ನ ಬಗ್ಗೆ ಗೊತ್ತಾಯ್ತು..? ನಾನು ಕೆಲಸ ಮಾಡಿಲ್ಲ ಅನ್ನೋದಕ್ಕೆ ಫ್ರೂಪ್ ಏನಿದೆ..? ಅಂತಾ ಪ್ರಶ್ನಿಸಿದ್ದಾರೆ. ಉಸ್ತುವಾರಿ ರಾಧಾಮೋಹನ್ ದಾಸ್‌ಗೆ ಏನೇನೋ ಹೇಳಿಕೊಟ್ಟು ಮಾತನಾಡಿಸಿದ್ದಾರೆ, ನಾನು ಹೇಳಿದ್ದೇ ನಡೆಯಬೇಕು ಎಂದು ಜನಾರ್ಧನ ರೆಡ್ಡಿ ಹೀಗೆಲ್ಲಾ ಮಾಡ್ತಾರೆ ಎಂದು ಆರೋಪಿಸಿದ್ದಾರೆ. ನಿನ್ನೆ ಕೋರ್ ಕಮಿಟಿಯಲ್ಲಿ ನಡೆದ ಚರ್ಚೆ ನನಗೆ ಬೇಸರ ತರಿಸಿದೆ. ಹೀಗಾಗಿಯೇ ಪಕ್ಷ ಬಿಡುವ ಬಗ್ಗೆಯೂ ಮಾತನಾಡಿದೆ.. ರಾಜ್ಯ ರಾಜಕೀಯದ ಬೆಳವಣಿಗೆ ಬಗ್ಗೆ ದೆಹಲಿ ನಾಯಕರ ಜೊತೆ ಮಾತನಾಡ್ತೇನೆ ಎಂದು ಶ್ರೀರಾಮುಲು ಹೇಳಿದ್ದಾರೆ..